Rahul Gandhi New Look: ಹೊಸ ಲುಕ್​​ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ, ಹೇಗಿದ್ರು.. ಹೇಗಾದ್ರು ನೋಡಿ?

|

Updated on: Mar 01, 2023 | 10:58 AM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಂದು ವಾರಗಳ ಕಾಲ ಯುಕೆ ಪ್ರವಾಸದಲ್ಲಿರುವ ಕಾರಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಹೇರ್ ಕಟಿಂಗ್ ಮತ್ತು ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಬೆಳೆಸಿದ್ದ ಗಡ್ಡವನ್ನು ಟ್ರಿಮ್ ಮಾಡಿದ್ದಾರೆ.

Rahul Gandhi New Look: ಹೊಸ ಲುಕ್​​ನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ, ಹೇಗಿದ್ರು.. ಹೇಗಾದ್ರು ನೋಡಿ?
ರಾಹುಲ್ ಗಾಂಧಿ
Follow us on

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಒಂದು ವಾರಗಳ ಕಾಲ ಯುಕೆ ಪ್ರವಾಸದಲ್ಲಿರುವ ಕಾರಣ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರು ಹೇರ್ ಕಟಿಂಗ್ ಮತ್ತು ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಬಿಟ್ಟಿದ್ದ ಗಡ್ಡವನ್ನು ಟ್ರಿಮ್ ಮಾಡಿದ್ದಾರೆ, ಇತ್ತೀಚೆಗೆ ಅವರು ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ಅಥವಾ ಯಾವುದೇ ಕಾರ್ಯಕ್ರಮಕ್ಕೆ ಹೋದರು ಬಿಳಿ ಟೀ ಶರ್ಟ್ ಹಾಕುತ್ತಿದ್ದರು. ಇದೀಗ ಅವರ ಬಿಳಿ ಟೀ ಶರ್ಟ್ ಬದಲಿಗೆ ಸೂಟ್-ಟೈನಲ್ಲಿ ಕಾಣಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ 21ನೇ ಶತಮಾನದಲ್ಲಿ Learning to Listen ಎಂಬ ವಿಷಯದ ಕುರಿತು ಭಾಷಣ ಮಾಡಲಿದ್ದಾರೆ. ಹಲವಾರು ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರ ಹೊಸ ಲುಕ್‌ನ ಆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಐದು ತಿಂಗಳ ಅವಧಿಯಲ್ಲಿ ರಾಹುಲ್ ಗಾಂಧಿಯವರ ನೋಟವು ತೀವ್ರ ಬದಲಾವಣೆಯನ್ನು ಕಂಡಿದೆ. ಏಕೆಂದರೆ ರಾಹುಲ್ ಯಾವಾಗಲೂ ಬಿಳಿ ಟೀ ಶರ್ಟ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಯಾತ್ರೆ ಮುಗಿಯುವರಗೆ ನಾನು ಯಾವುದೇ ಕಾರಣಕ್ಕೂ ಕ್ಷೌರ ಮಾಡಿಸಿಕೊಳ್ಳುವುದಿಲ್ಲ ಎಂದು ನಿರ್ಧರಿಸಿದ್ದರು, ಈ ಐದು ತಿಂಗಳಲ್ಲಿ ಅವರ ಗಡ್ಡವೂ ತುಂಬಾ ಬೆಳೆದಿತ್ತು. ಇವೆಲ್ಲವೂ ರಾಹುಲ್ ಗಾಂಧಿ ಪ್ರಜ್ಞಾಪೂರ್ವಕ ಇಮೇಜ್ ಮೇಕ್ ಓವರ್ ಗೆ ಒಳಗಾದ ಸಿದ್ಧಾಂತಕ್ಕೆ ಕೊಡುಗೆ ನೀಡಿವೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ನಾಯಕ ಪವನ್ ಖೇರಾ ಇತ್ತೀಚೆಗೆ ರಾಹುಲ್ ಗಾಂಧಿ ಅವರಲ್ಲಿ ಗಡ್ಡದ ಬಗ್ಗೆ ಕೇಳಿದ್ದರು, ರಾಹುಲ್ ಗಾಂಧಿ ಯಾವಾಗ ಗಡ್ಡ ಬೋಳಿಸಿಕೊಳ್ಳುತ್ತಾರೆ ಎಂದು ಕೇಳಿದರು. ವಾಸ್ತವವಾಗಿ, ರಾಹುಲ್ ಗಾಂಧಿ ಕೂಡ ಈ ಹಿಂದೆ ಈ ಪ್ರಶ್ನೆಯನ್ನು ಎದುರಿಸಿದ್ದರು, ಇದನ್ನು ಯಾತ್ರೆಯ ಕಾರಣಕ್ಕೆ ನಾನು ಬೆಳೆಸಿದ್ದೇನೆ, ಈಗ ಈ ಬಗ್ಗೆ ಯೋಚಿಸುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: Rahul Gandhi Diet: ರಾಹುಲ್​ ಗಾಂಧಿ ಫಿಟ್ನೆಸ್​ನ ಗುಟ್ಟೇನು: 3,500 ಕಿ.ಮೀ ಸಂಚರಿಸಿದರೂ ಸ್ವಲ್ಪವೂ ಸುಸ್ತಾಗದೆ ಫಿಟ್​ ಆಗಿರಲು ಇಲ್ಲಿವೆ ಕಾರಣಗಳು

21ನೇ ಶತಮಾನದಲ್ಲಿ Learning to Listen ಉಪನ್ಯಾಸವು ವಿದ್ಯಾರ್ಥಿಗಳಿಗೆ ಮಾತ್ರ ಉಪನ್ಯಾಸವಾಗಿದ್ದು, ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ವಿಶ್ವವಿದ್ಯಾನಿಲಯದ ಕಾರ್ಪಸ್ ಕ್ರಿಸ್ಟಿ ಕಾಲೇಜಿನಲ್ಲಿ ಭಾರತೀಯ ಮೂಲದ ಫೆಲೋ, ಬೋಧಕ ಮತ್ತು ಅಧ್ಯಯನದ ನಿರ್ದೇಶಕಿ ಮತ್ತು ಸಹ-ನಿರ್ದೇಶಕ ಪ್ರೊಫೆಸರ್ ಶ್ರುತಿ ಕಪಿಲಾ ಅವರೊಂದಿಗೆ ಬಿಗ್ ಡೇಟಾ ಮತ್ತು ಡೆಮಾಕ್ರಸಿ ಮತ್ತು ‘ಭಾರತ-ಚೀನಾ ಸಂಬಂಧಗಳು’ ಕುರಿತು ಗ್ಲೋಬಲ್ ಹ್ಯುಮಾನಿಟೀಸ್ ಇನಿಶಿಯೇಟಿವ್​​ನಲ್ಲಿ ರಾಹುಲ್ ಗಾಂಧಿ ಮತ್ತೊಂದು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. .

 

Published On - 10:58 am, Wed, 1 March 23