Rahul Gandhi: ಪ್ರಧಾನಿ ಮೋದಿ ಚೀನಾ ಜೊತೆ ಸೇರಿ ತ್ರಿವರ್ಣ ಧ್ವಜದ ಒಪ್ಪಂದ ಮಾಡಿಕೊಂಡಿದ್ದಾರೆ; ರಾಹುಲ್ ಗಾಂಧಿ ಟೀಕೆ

| Updated By: ಸುಷ್ಮಾ ಚಕ್ರೆ

Updated on: Aug 13, 2022 | 1:03 PM

ಭಾರತದ ಪ್ರತಿಯೊಂದು ಇಂಚನ್ನೂ ರಕ್ಷಿಸಲು ಹೋರಾಡುವವನೇ ನಿಜವಾದ ದೇಶಪ್ರೇಮಿ. ಆದರೆ, ನರೇಂದ್ರ ಮೋದಿ ಚೀನಾದೊಂದಿಗೆ ತ್ರಿವರ್ಣ ಧ್ವಜದ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Rahul Gandhi: ಪ್ರಧಾನಿ ಮೋದಿ ಚೀನಾ ಜೊತೆ ಸೇರಿ ತ್ರಿವರ್ಣ ಧ್ವಜದ ಒಪ್ಪಂದ ಮಾಡಿಕೊಂಡಿದ್ದಾರೆ; ರಾಹುಲ್ ಗಾಂಧಿ ಟೀಕೆ
ರಾಹುಲ್ ಗಾಂಧಿ
Follow us on

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಫೇಸ್‌ಬುಕ್‌ನಲ್ಲಿ (Facebook) ರಾಹುಲ್ ಗಾಂಧಿ ಚೀನಾದ ಒಳನುಸುಳುವಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಚೀನಾದೊಂದಿಗೆ ‘ತ್ರಿವರ್ಣ ಧ್ವಜದ ಒಪ್ಪಂದ’ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಭಾರತದ ಪ್ರತಿಯೊಂದು ಇಂಚನ್ನೂ ರಕ್ಷಿಸಲು ಹೋರಾಡುವವನೇ ನಿಜವಾದ ದೇಶಪ್ರೇಮಿ. ಆದರೆ, ನರೇಂದ್ರ ಮೋದಿ ಚೀನಾದೊಂದಿಗೆ ತ್ರಿವರ್ಣ ಧ್ವಜದ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಚೀನಾ ನಮ್ಮ ದೇಶದ ಗಡಿಯನ್ನು ಆಕ್ರಮಿಸಿಕೊಳ್ಳಲು ಹರಸಾಹಸ ಮಾಡಿದೆ. ಪ್ರಧಾನಿ ಮೋದಿ 8 ವರ್ಷಗಳಿಂದ ಚೀನಾದ ಮುಂದೆ ತಲೆಬಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಭಾರತದ ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಿದ್ದು, ಪಾಲಿಸ್ಟರ್ ಮತ್ತು ಇತರ ಯಂತ್ರ-ನಿರ್ಮಿತ ಬಟ್ಟೆಯಿಂದ ತ್ರಿವರ್ಣ ಧ್ವಜವನ್ನು ತಯಾರಿಸಲು ಅವಕಾಶ ನೀಡಿದೆ. ಈ ಕ್ರಮವನ್ನು ಖಾದಿ ಪ್ರೇಮಿಗಳು ಮತ್ತು ಕಾಂಗ್ರೆಸ್‌ನ ಪ್ರತಿಪಾದಕರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋಗೆ ರಾಷ್ಟ್ರಧ್ವಜ ಹಾಕಿಕೊಂಡ ಆರ್​ಎಸ್​ಎಸ್​

ಕೇಂದ್ರ ಸರ್ಕಾರ ಪಾಲಿಸ್ಟರ್​ ಮತ್ತು ಯಂತ್ರ ನಿರ್ಮಿತ ಧ್ವಜವನ್ನು ಬಳಸಲು ಅನುಮತಿ ನೀಡಿರುವ ಕ್ರಮವನ್ನು ಕಾಂಗ್ರೆಸ್ ಪ್ರಶ್ನಿಸಿದ್ದು, ಅದರ ಬದಲಿ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಅಗತ್ಯವಿದೆ, ಇದರಿಂದ ಚೀನಾದಂತಹ ದೇಶಗಳಿಗೆ ಲಾಭದಾಯಕವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ರಾಷ್ಟ್ರ ಧ್ವಜ ತಯಾರಿಕೆಗೆ ಚೀನಾದಿಂದ ಆಮದು ಮಾಡಿಕೊಂಡ ಪಾಲಿಸ್ಟರ್ ಬಟ್ಟೆಯನ್ನು ನಾವೇಕೆ ಆಶ್ರಯಿಸಬೇಕಾಯಿತು? ಗಡಿಯಲ್ಲಿ ನುಸುಳುವಿಕೆ ಹೆಚ್ಚುತ್ತಿರುವಂತೆಯೇ ಚೀನಾದಿಂದ ಭಾರತ ಏಕೆ ಆಮದು ಹೆಚ್ಚು ಮಾಡಿಕೊಳ್ಳುತ್ತಿದೆ?” ಎಂದು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Sat, 13 August 22