AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನೂ ನಾಶವಾಗಿದ್ದೇನೆ, ರಾಜ್ಯದಲ್ಲಿ ನೀವಿಬ್ಬರೂ ನಾಶವಾಗಿ ಅಂತಾ ಸನ್ನೆ ಮಾಡಿ, ಸಂದೇಶ ನೀಡಿದ್ದಾರೆ ರಾಹುಲ್ ಗಾಂಧಿ -ಶಾಸಕ ಯತ್ನಾಳ್

ಕರ್ನಾಟಕದಲ್ಲಿ ರಾಹುಲ್ ಗಾಂಧಿ  ಇಷ್ಟು ಜನರನ್ನು ನೋಡಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯರನ್ನ ಅಪ್ಪಿಕೊಳ್ಳುವಂತೆ ಡಿಕೆಶಿಗೆ ಹೇಳಿದ್ದಾರೆ. ಇಬ್ಬರೂ ಅಪ್ಪಿಕೊಂಡು ನಾಶವಾಗಿ ಅಂತಾ ಸಂದೇಶ ನೀಡಿದ್ದಾರೆ -ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ 

ನಾನೂ ನಾಶವಾಗಿದ್ದೇನೆ, ರಾಜ್ಯದಲ್ಲಿ ನೀವಿಬ್ಬರೂ ನಾಶವಾಗಿ ಅಂತಾ ಸನ್ನೆ ಮಾಡಿ, ಸಂದೇಶ ನೀಡಿದ್ದಾರೆ ರಾಹುಲ್ ಗಾಂಧಿ -ಶಾಸಕ ಯತ್ನಾಳ್
ನಾನೂ ನಾಶವಾಗಿದ್ದೇನೆ, ರಾಜ್ಯದಲ್ಲಿ ನೀವಿಬ್ಬರೂ ನಾಶವಾಗಿ ಅಂತಾ ಸನ್ನೆ ಮಾಡಿ, ಸಂದೇಶ ನೀಡಿದ್ದಾರೆ ರಾಹುಲ್ ಗಾಂಧಿ -ಶಾಸಕ ಯತ್ನಾಳ್
TV9 Web
| Updated By: ಸಾಧು ಶ್ರೀನಾಥ್​|

Updated on:Aug 08, 2022 | 2:44 PM

Share

ವಿಜಯಪುರ: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ (siddaramotasava) ಕಾಂಗ್ರೆಸ್​ ನಾಯಕರಾದ ಸಿದ್ದರಾಮಯ್ಯ (siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar)​ ಅವರ ಆಲಿಂಗನ ವಿಚಾರ ಪ್ರಸ್ತಾಪಿಸಿ, ವಿಜಯಪುರದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda patil yatnal) ಅವರು ಕರ್ನಾಟಕದಲ್ಲಿ ರಾಹುಲ್ ಗಾಂಧಿ (rahul gandhi) ಇಷ್ಟು ಜನರನ್ನು ನೋಡಿರಲಿಲ್ಲ. ಹೀಗಾಗಿ ಸಿದ್ದರಾಮಯ್ಯರನ್ನ ಅಪ್ಪಿಕೊಳ್ಳುವಂತೆ ಡಿಕೆಶಿಗೆ ಹೇಳಿದ್ದಾರೆ. ಇಬ್ಬರೂ ಅಪ್ಪಿಕೊಂಡು (hug) ನಾಶವಾಗಿ ಅಂತಾ ಸಂದೇಶ ನೀಡಿದ್ದಾರೆ. ನಾನು ನಾಶವಾಗಿದ್ದೇನೆ, ರಾಜ್ಯದಲ್ಲಿ ನೀವಿಬ್ಬರೂ ನಾಶವಾಗಿ ಅಂತಾ ಸಂದೇಶ ನೀಡಿ, ಸನ್ನೆ ಮಾಡಿದಾರೆ ಎಂದು ಲೇವಡಿ ಮಾಡಿದ್ದಾರೆ.

ಇನ್ನು ತಮ್ಮ ಪಕ್ಷದ ಸರ್ಕಾರದ ಬಗ್ಗೆ ಮಾತನಾಡಿದ ಶಾಸಕ ಬಸನಗೌಡ ಯತ್ನಾಳ್ ರಾಜ್ಯ ಗೃಹ ಸಚಿವರ ಕಾರ್ಯ ವೈಖರಿ ಬಗ್ಗೆ ಕೇಂದ್ರ ಅಸಮಾಧಾನ ವಿಚಾರದಲ್ಲಿ ಕೇಂದ್ರ ನಾಯಕರು ಸೂಕ್ತ ಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ತಾರೆ. ಒಂದು ಒಳ್ಳೆಯ ನಿರ್ಣಯ ತೆಗೆದುಕೊಳ್ತಾರೆ. ಪ್ರಧಾನಿ ನರೇಂದ್ರ ಮೋದಿ ಮೇಲೆ ನಮಗೆಲ್ಲ ವಿಶ್ವಾಸ ಇದೆ ಎಂದೂ ಸೂಕ್ಷ್ಮವಾಗಿ ಹೇಳಿದರು.

ಕಾರ್ಯಕರ್ತರು ಎಂದರೆ ನಮ್ಮ ಪಕ್ಷದ ದೇವರಿದ್ದಂಗೆ- ಶಾಸಕ ಯತ್ನಾಳ

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕೊಲೆ ಬಳಿಕ ಬಿಜೆಪಿ ಪದಾಧಿಕಾರಿಗಳು ಸರಣಿ ರಾಜೀನಾಮೆ ವಿಚಾರವಾಗಿ ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾತನಾಡಿದರು. ಹಿಂದೂವಾದಿಗಳನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಯತ್ನಾಳ ಹಾಗೂ ಸಿ ಟಿ ರವಿ ಪೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿರೋ ವಿಚಾರ ಪ್ರಸ್ತಾಪಿಸಿ ಕಾರ್ಯಕರ್ತರು ಬಿಜೆಪಿ ಪಕ್ಷದ ಮೂಲಬೇರು. ದೇಶದಲ್ಲಿ ಬಿಜೆಪಿ ಈ ಮಟ್ಟಿಗೆ ಬೆಳೆಯಲು ಕಾರ್ಯಕರ್ತರು ಮೂಲ ಕಾರಣ. ಕಾರ್ಯಕರ್ತರು ಎಂದರೆ ನಮ್ಮ ಪಕ್ಷದ ದೇವರಿದ್ದಂಗೆ. ಕಾರ್ಯಕರ್ತರಿಂದಲೇ ನಾವು ಎಂಎಲ್ಎ, ಎಂಪಿ ಆಗಿದ್ದೇವೆ. ಮೋದಿ ಅವರು ಪ್ರಧಾನಿಯಾಗಿದ್ದಾರೆ ಎಂದರು. ಬಿಜೆಪಿ ಕಾರ್ಯಕರ್ತರ ಬಗ್ಗೆ ತೇಜಸ್ವಿ ಸೂರ್ಯ ಹಗುರವಾಗಿ ಹೇಳಿಕೆ ವಿಚಾರ ತೇಜಸ್ವಿ ಸೂರ್ಯಾಗೆ ಟಾಂಗ್ ಕೊಟ್ಟ ಯತ್ನಾಳ್ ನಮ್ಮ ಪಕ್ಷದ ಕಾರ್ಯಕರ್ತರ ಬಗ್ಗೆ ಹಗುರವಾಗಿ ಮಾತನಾಡುವುದು ಗೌರವ ತರುವಂಥದ್ದಲ್ಲಾ. ತಮ್ಮ ಭಾವನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳೋ ಹಕ್ಕು ಕಾರ್ಯಕರ್ತರಿಗಿದೆ. ಕಾರ್ಯಕರ್ತರು ಏನು ಬಯಸುತ್ತಿದ್ದಾರೆ ಎಂಬುದನ್ನು ನಮ್ಮ ಪಕ್ಷದ ಹಿರಿಯರು ಗಮನಿಸುತ್ತಿರುತ್ತಾರೆ. ಪ್ರವೀಣ ನೆಟ್ಟಾರು ಕೊಲೆಯಾದ ಮೇಲೆ ಕಾರ್ಯಕರ್ತರಿಗೆ ಸಾಕಷ್ಟು ನೋವಾಗಿದೆ. ಕಾರ್ಯಕರ್ತರಿಗೆ ಅಭದ್ರತೆಯ ಭಯವಾಗಿದೆ ಎಂಬುದನ್ನು ನಮ್ಮ ಪಕ್ಷದ ಹಿರಿಯರು ಗಮನಿಸಿದ್ದಾರೆ. ಈ ಕುರಿತು ಕೇಂದ್ರ ಹೈಕಮಾಂಡ್ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದ ಯತ್ನಾಳ ಎಲ್ಲರಿಗೂ ರಕ್ಷಣೆ ಕೊಡೋಕಾಗುತ್ತಾ ಎಂದು ಕಾರ್ಯಕರ್ತರ ಬಗ್ಗೆ ಯಾರೂ ಹೇಳಿಕೆ ಕೊಡಬಾರದು ಎಂದು ಎಚ್ಚರಿಸಿದರು.

Published On - 2:28 pm, Mon, 8 August 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ