‘ಹೋಗುವವರು ಹೋಗಲಿ, ಡೋಂಟ್ ಕೇರ್!’

ದೆಹಲಿ: ಮರಳುಗಾಡಿನಲ್ಲಿ ಹೊತ್ತಿರುವ ರಾಜಕೀಯ ಬಂಡಾಯದ ಬೆಂಕಿ ಇನ್ನೂ ಆರಿಲ್ಲ. ಪಕ್ಷದಿಂದ ಹೊರಗೆ ಹೆಜ್ಜೆ ಇಟ್ಟಿರುವ ಸಚಿನ್ ಪೈಲಟ್ ತಮ್ಮ ನಡೆ ಏನು ಅಂತಾ ಹೇಳಿಲ್ಲ. ಆದ್ರೆ ಕಾಂಗ್ರೆಸ್ ಮುಳುಗಿಸೋಕೆ ಪೈಲಟ್ ಹೊಂಚು ಹಾಕಿದ್ದಾರೆ ಅನ್ನೋದು ಗೆಹ್ಲೋಟ್ ಆರೋಪ. ಈ ಆರೋಪ-ಪ್ರತ್ಯಾರೋಪಗಳ ನಡುವೆ ಸದ್ಯದ ಪರಿಸ್ಥಿತಿ ಮತ್ತಷ್ಟು ಕಗ್ಗಂಟಾಗಿದೆ. ರಾಜಸ್ಥಾನ ರಾಜಕೀಯ ಹೈಡ್ರಾಮ ಇನ್ನೂ ಅಂತ್ಯವಾಗಿಲ್ಲ. ಕೊವಿಡ್ ಸಂಕಷ್ಟದ ನಡುವೆ ಶಾಸಕರು ರೆಸಾರ್ಟ್ ಬಿಟ್ಟು ಹೊರಬರುತ್ತಿಲ್ಲ. ಇತ್ತ ಬಂಡಾಯವೆದ್ದಿರುವ ಸಚಿನ್ ಪೈಲಟ್ ಮುನಿಸು ಶಮನವಾಗಿಲ್ಲ. ಪೈಲಟ್​ರನ್ನ ಡಿಸಿಎಂ […]

‘ಹೋಗುವವರು ಹೋಗಲಿ, ಡೋಂಟ್ ಕೇರ್!’
Follow us
ಆಯೇಷಾ ಬಾನು
|

Updated on:Jul 16, 2020 | 7:41 AM

ದೆಹಲಿ: ಮರಳುಗಾಡಿನಲ್ಲಿ ಹೊತ್ತಿರುವ ರಾಜಕೀಯ ಬಂಡಾಯದ ಬೆಂಕಿ ಇನ್ನೂ ಆರಿಲ್ಲ. ಪಕ್ಷದಿಂದ ಹೊರಗೆ ಹೆಜ್ಜೆ ಇಟ್ಟಿರುವ ಸಚಿನ್ ಪೈಲಟ್ ತಮ್ಮ ನಡೆ ಏನು ಅಂತಾ ಹೇಳಿಲ್ಲ. ಆದ್ರೆ ಕಾಂಗ್ರೆಸ್ ಮುಳುಗಿಸೋಕೆ ಪೈಲಟ್ ಹೊಂಚು ಹಾಕಿದ್ದಾರೆ ಅನ್ನೋದು ಗೆಹ್ಲೋಟ್ ಆರೋಪ. ಈ ಆರೋಪ-ಪ್ರತ್ಯಾರೋಪಗಳ ನಡುವೆ ಸದ್ಯದ ಪರಿಸ್ಥಿತಿ ಮತ್ತಷ್ಟು ಕಗ್ಗಂಟಾಗಿದೆ.

ರಾಜಸ್ಥಾನ ರಾಜಕೀಯ ಹೈಡ್ರಾಮ ಇನ್ನೂ ಅಂತ್ಯವಾಗಿಲ್ಲ. ಕೊವಿಡ್ ಸಂಕಷ್ಟದ ನಡುವೆ ಶಾಸಕರು ರೆಸಾರ್ಟ್ ಬಿಟ್ಟು ಹೊರಬರುತ್ತಿಲ್ಲ. ಇತ್ತ ಬಂಡಾಯವೆದ್ದಿರುವ ಸಚಿನ್ ಪೈಲಟ್ ಮುನಿಸು ಶಮನವಾಗಿಲ್ಲ. ಪೈಲಟ್​ರನ್ನ ಡಿಸಿಎಂ ಸ್ಥಾನದಿಂದ ತೆಗೆದು ಹಾಕಲಾಗಿದೆ.

ಜೊತೆಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದಲೂ ಗೇಟ್ ಪಾಸ್ ನೀಡಲಾಗಿದೆ. ಸಚಿನ್ ಪೈಲಟ್ ತಾನು ಬಿಜೆಪಿ ಸೇರುತ್ತಿಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದರು ಕೂಡ ಕೈ ಲೀಡರ್ಸ್ ಮಾತ್ರ ಬಂಡಾಯದ ಬಾವುಟದ ಹಿಂದೆ ಕಮಲ ಪಡೆಯ ಕೈವಾಡವಿದೆ ಅಂತಾ ಆರೋಪಿಸಿದ್ದಾರೆ.

ವಿದ್ಯಾರ್ಥಿ ಮುಖಂಡರಿಗೆ ರಾಹುಲ್ ಹೊಸ ಆಫರ್..! ಇಷ್ಟೆಲ್ಲಾ ಗೊಂದಲಗಳ ನಡುವೆಯೂ ರಾಹುಲ್ ಗಾಂಧಿ ಪಕ್ಷದ ವೇದಿಕೆಯಲ್ಲಿ ಹೇಳಿರುವ ಮಾತು ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಎನ್​ಎಸ್​ಯುಐ ಕಾರ್ಯಕರ್ತರ ಜೊತೆಗೆ ಸಂವಾದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ, ಖಡಕ್ ಸಂದೇಶ ರವಾನಿಸಿದ್ದಾರೆ.

ಪೈಲಟ್ ನಡೆಗೆ ಪ್ರತಿಕ್ರಿಯಿಸಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್, ಕಾಂಗ್ರೆಸ್ ಬಿಟ್ಟುಹೋಗುವವರು ಹೋಗಲಿ.ನಿಮ್ಮಂತಹ ಯುವನಾಯಕರಿಗಾಗಿ ಪಕ್ಷದ ಬಾಗಿಲು ತೆರೆಯಲಿದೆ ಅಂತಾ ವಿದ್ಯಾರ್ಥಿ ಮುಖಂಡರಿಗೆ ರಾಹುಲ್ ಹೊಸ ಆಫರ್ ನೀಡಿದ್ರು.

‘ಕೇವಲ ಇಂಗ್ಲಿಷ್ ಕಲಿತರೆ ಲೀಡರ್ ಆಗಲ್ಲ..!’ ರಾಜಸ್ಥಾನದಲ್ಲಿ ಕಾಂಗ್ರೆಸ್ ಶಾಸಕರಿಗೆ ಸದ್ಯ ಬಿರುಗಾಳಿ ಬಂದು ನಿಂತ ಅನುಭವವಾಗುತ್ತಿದೆ. ಆದರೆ ಈ ಗಾಳಿಗೆ ತರಗೆಲೆಯಾಗಿದ್ದು ಮಾಜಿ ಡಿಸಿಎಂ ಸಚಿನ್ ಪೈಲಟ್. ಅಶೋಕ್ ಗೆಹ್ಲೋಟ್ ಮತ್ತಷ್ಟು ಗಟ್ಟಿಯಾಗಿ ನೆಲೆಯೂರಿದ್ದಾರೆ ಎನ್ನಲಾಗ್ತಿದೆ. ಸಚಿನ್ ಪೈಲಟ್ ಬಿಜೆಪಿ ಜತೆ ಸೇರಿ ಕಾಂಗ್ರೆಸ್ ಶಾಸಕರ ಕುದುರೆ ವ್ಯಾಪಾರದಲ್ಲಿ ಭಾಗಿಯಾಗಿದ್ದರು.

ಈ ಕುರಿತು ಅಗತ್ಯ ದಾಖಲೆ ನನ್ನ ಬಳಿ ಇದೆ ಅಂತಾ ಸ್ವತಃ ರಾಜಸ್ಥಾನ ಸಿಎಂ ಗೆಹ್ಲೋಟ್ ಹೇಳಿದ್ದಾರೆ. ನಮ್ಮ ಶಾಸಕರನ್ನು ಖರೀದಿಸುವ ಯತ್ನ ನಡೆದಿತ್ತು. ಅವರಿಗೆ ಆಮಿಷ ಒಡ್ಡಲಾಗಿತ್ತು. ಯಾವುದೇ ಷಡ್ಯಂತ್ರ ನಡೆದಿಲ್ಲ ಎಂದು ಹೇಳಿದ್ಯಾರು, ಅಂತಾ ಗೆಹ್ಲೋಟ್ ಖಾರವಾಗಿ ಪ್ರಶ್ನಿಸಿದ್ದಾರೆ. ಕೇವಲ ನೋಡೋಕೆ ಚೆನ್ನಾಗಿದ್ದು, ಇಂಗ್ಲಿಷ್ ಮಾತನಾಡಿಬಿಟ್ರೆ ನಾಯಕ ಆಗಲ್ಲ. ಸ್ವಲ್ಪ ಸಿದ್ಧಾಂತ, ಬದ್ಧತೆ ಇರಬೇಕು ಅಂತಾ ಪರೋಕ್ಷವಾಗಿ ಪೈಲಟ್​ಗೆ ಕುಟುಕಿದ್ದಾರೆ.

ಒಟ್ನಲ್ಲಿ ರಾಜಸ್ಥಾನ ರಾಜಕೀಯ ಅಗ್ನಿಜ್ವಾಲೆಯಲ್ಲಿ ಧಗಧಗಿಸುತ್ತಿದೆ. ಅಜ್ಞಾತ ಸ್ಥಳದಿಂದ ಹೊರಬಾರದ ಪೈಲಟ್ ಮುಂದಿನ ನಿರ್ಧಾರ ಏನು ಅಂತಾ ತಿಳಿಸಿಲ್ಲ. ಮತ್ತೊಂದ್ಕಡೆ ಬಿಜೆಪಿ ನಾಯಕರು ಪೈಲಟ್ ಬಂದ್ರೆ ಸೇರಿಸಿಕೊಳ್ಳೋದಕ್ಕೆ ಸಿದ್ಧ ಎಂದಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವು ಪಡೆಯಲಿದೆ ಅನ್ನೋದನ್ನ ಕಾದು ನೋಡ್ಬೇಕು.

Published On - 7:39 am, Thu, 16 July 20

ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು