ಜೈಪುರ-ಮುಂಬೈ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ಆರ್‌ಪಿಎಫ್ ಕಾನ್​​ಸ್ಟೆಬಲ್; ಹತ್ಯೆ ಹಿಂದೆ ಕೋಮು ದ್ವೇಷವಿಲ್ಲ: ಸರ್ಕಾರಿ ಮೂಲಗಳು

ಆರ್‌ಪಿಎಫ್ ಸಿಬ್ಬಂದಿಯ ಮಾನಸಿಕ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊಗಳು ಮತ್ತು ಪೋಸ್ಟ್‌ಗಳಲ್ಲಿ ಹೇಳುವಂತೆ ಈ ಕೃತ್ಯದಲ್ಲಿ ಕೋಮು ದ್ವೇಷವಿದೆ ಎಂಬುದನ್ನು ಅವರು ತಳ್ಳಿಹಾಕಿದ್ದಾರೆ.

ಜೈಪುರ-ಮುಂಬೈ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಕೊಂದ ಆರ್‌ಪಿಎಫ್ ಕಾನ್​​ಸ್ಟೆಬಲ್; ಹತ್ಯೆ ಹಿಂದೆ ಕೋಮು ದ್ವೇಷವಿಲ್ಲ: ಸರ್ಕಾರಿ ಮೂಲಗಳು
ಚೇತನ್ ಸಿಂಗ್
Follow us
|

Updated on: Aug 01, 2023 | 9:04 PM

ದೆಹಲಿ ಆಗಸ್ಟ್ 1: ಸೋಮವಾರ ಜೈಪುರ-ಮುಂಬೈ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ರೈಲ್ವೇ ರಕ್ಷಣಾ ಪಡೆ (RPF) ಕಾನ್​​ಸ್ಟೆಬಲ್​​​ನ್ನು ಮಾನಸಿಕ ಆರೋಗ್ಯ ತಪಾಸಣೆಗಾಗಿ ಕಳುಹಿಸಲಾಗಿದೆ ಎಂದು ಸರ್ಕಾರಿ ಮೂಲಗಳು ಮಂಗಳವಾರ ತಿಳಿಸಿದ್ದು, ಘಟನೆಯಲ್ಲಿ ಯಾವುದೇ ಕೋಮು ದ್ವೇಷದ ಕೋನವನ್ನು ತಳ್ಳಿಹಾಕಲಾಗಿದೆ. 33ರ ಹರೆಯದ ಚೇತನ್ ಸಿಂಗ್ (Chetan Singh) ಜೈಪುರ-ಮುಂಬೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ನಲ್ಲಿ ಎಎಸ್ಐ, ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಂದಿದ್ದು, ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಆತನನ್ನು ಬಂಧಿಸಲಾಗಿದೆ.

ಆರ್‌ಪಿಎಫ್ ಸಿಬ್ಬಂದಿಯ ಮಾನಸಿಕ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊಗಳು ಮತ್ತು ಪೋಸ್ಟ್‌ಗಳಲ್ಲಿ ಹೇಳುವಂತೆ ಈ ಕೃತ್ಯದಲ್ಲಿ ಕೋಮು ದ್ವೇಷವಿದೆ ಎಂಬುದನ್ನು ಅವರು ತಳ್ಳಿಹಾಕಿದ್ದಾರೆ. ಆರೋಪಿಯು ತನ್ನ ಹಿರಿಯ ಅಧಿಕಾರಿ ಸೇರಿದಂತೆ ಹಿಂದೂಗಳನ್ನು ಸಹ ಗುಂಡಿಕ್ಕಿ ಕೊಂದಿದ್ದಾನೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ಹೇಳಿವ.

ಚೇತನ್ ಸಿಂಗ್ ಮತ್ತು ಟಿಕಾರಾಂ ಮೀನಾ ಸೇರಿದಂತೆ ನಾಲ್ವರು ಆರ್‌ಪಿಎಫ್ ಸಿಬ್ಬಂದಿಗಳು ಗುಜರಾತ್‌ನ ಸೂರತ್‌ನಲ್ಲಿ ಪ್ರಯಾಣಿಕರು ಮತ್ತು ಸರಕುಗಳನ್ನು ರಕ್ಷಿಸಲು ದೂರದ ರೈಲುಗಳಲ್ಲಿ ನಿಯೋಜಿಸಲಾದ ಬೆಂಗಾವಲು ಗುಂಪಿನ ಭಾಗವಾಗಿ ರೈಲು ಹತ್ತಿದ್ದರು.

ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಉದ್ರೇಕಗೊಂಡಂತೆ ಕಂಡುಬಂದ ಸಿಂಗ್, ತಾಳ್ಮೆ ಕಳೆದುಕೊಂಡು ತನ್ನ ಹಿರಿಯ ಅಧಿಕಾರಿಗೆ ಗುಂಡು ಹಾರಿಸಿದ್ದಾನೆ. ನಂತರ ಅವರು ಅಜ್ಗರ್ ಅಬ್ಬಾಸ್ ಶೇಖ್( 48), ಮತ್ತು ಅಬ್ದುಲ್ ಕದರ್ಭಾಯಿ ಮೊಹಮ್ಮದ್ ಹುಸೇನ್ ಭಾನ್ಪುರ್ವಾಲಾ, (62 ) ಸೇರಿದಂತೆ ಇನ್ನೂ ಮೂವರ ಮೇಲೆ ಗುಂಡು ಹಾರಿಸಿದ್ದಾನೆ.

ಇದನ್ನೂ ಓದಿ: ಹರ್ಯಾಣದಲ್ಲಿ ಕೋಮು ಗಲಭೆ; ಪ್ರೀತಿಯಿಂದ ಮಾತ್ರ ಈ ಬೆಂಕಿಯನ್ನು ನಂದಿಸಲು ಸಾಧ್ಯ: ರಾಹುಲ್ ಗಾಂಧಿ

ಸಿಂಗ್ ಅವರಿಗೆ ಆರಾಮ ಇರಲಿಲ್ಲ. ಹಾಗಾಗಿ ಅವರನ್ನು ವಿಶ್ರಾಂತಿ ಪಡೆಯುವಂತೆ ಹೇಳಲಾಗಿತ್ತು. ಅವರು ಸ್ವಲ್ಪ ಸಮಯ ವಿಶ್ರಾಂತಿ ಪಡೆದರು. ನಂತರ ಸುಧಾರಿಸಿಕೊಂಡು ಕರ್ತವ್ಯಕ್ಕೆ ಮರಿಳಿದ್ದರು. ವೈದ್ಯಕೀಯ ವರದಿ ಬಂದ ನಂತರ ಘಟನೆಯನ್ನು ಕೂಲಂಕುಷವಾಗಿ ಪರಿಶೀಲಿಸುವುದಾಗಿ ರೈಲ್ವೆ ಸಚಿವಾಲಯ ತಿಳಿಸಿದೆ. ಕಾನ್ಸ್ಟೇಬಲ್ ಚೇತನ್ ಸಿಂಗ್ ಅವರ ಕುಟುಂಬವು ಆತ ಸಿಡುಕ ಎಂದು ಹೇಳಿದೆ. ಘಟನೆ ಬಗ್ಗೆ ಪಶ್ಚಿಮ ರೈಲ್ವೆ ಉನ್ನತ ಮಟ್ಟದ ವಿಚಾರಣೆ ನಡೆಸುತ್ತಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ತಮಿಳುನಾಡುನಿಂದ ಕರ್ನಾಟಕಕ್ಕೆ ನೀರು ಸಿಗೋವರೆಗೆ ಹೋರಾಡುತ್ತೇನೆ: ದೇವೇಗೌಡ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಮಹಿಳಾ ಅಭಿಮಾನಿಯ ನಡೆಯಿಂದ ದಿಗ್ಭ್ರಮೆಗೊಂಡ ವಿರಾಟ್ ಕೊಹ್ಲಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ
ಉಪ ಚುನಾವಣೆಯ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ: ಸವದಿ
ಭೀಕರ ಸ್ಫೋಟಕ್ಕೆ ಪಾಕಿಸ್ತಾನ ಕ್ವೆಟ್ಟಾ ರೈಲು ನಿಲ್ದಾಣ ಛಿದ್ರ: ವಿಡಿಯೋ ನೋಡಿ
ಭೀಕರ ಸ್ಫೋಟಕ್ಕೆ ಪಾಕಿಸ್ತಾನ ಕ್ವೆಟ್ಟಾ ರೈಲು ನಿಲ್ದಾಣ ಛಿದ್ರ: ವಿಡಿಯೋ ನೋಡಿ