ದೆಹಲಿ ಡಿಸೆಂಬರ್ 30: ರಾಜಸ್ಥಾನದಲ್ಲಿ (Rajasthan)ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಸುಮಾರು ಒಂದು ತಿಂಗಳ ನಂತರ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (Bhajan Lal Sharma)ಅವರ ಸಂಪುಟಕ್ಕೆ (Rajasthan cabinet) ಶನಿವಾರ 22 ಶಾಸಕರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರಲ್ಲಿ 12 ಮಂದಿ ಸಂಪುಟ ಸಚಿವರಾಗಿ, ಐವರು ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಮತ್ತು ಐವರು ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣವಚನ ಸ್ವೀಕರಿಸಿದವರಲ್ಲಿ ಕಿರೋಡಿ ಲಾಲ್ ಮೀನಾ, ರಾಜ್ಯವರ್ಧನ್ ಸಿಂಗ್ ರಾಥೋಡ್ ಮತ್ತು ಗಜೇಂದ್ರ ಸಿಂಗ್ ಖಿಮ್ಸರ್ ಸೇರಿದ್ದಾರೆ.
ಜೈಪುರದ ರಾಜಭವನದಲ್ಲಿ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರು ಬಿಜೆಪಿ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದರು. ಹಿಂದಿನ ದಿನ, ಭಜನ್ ಲಾಲ್ ಶರ್ಮಾ ಅವರು ರಾಜಭವನದಲ್ಲಿ ಮಿಶ್ರಾ ಅವರನ್ನು ಭೇಟಿ ಮಾಡಿ, ಪ್ರಮಾಣವಚನ ಸಮಾರಂಭಕ್ಕೆ ಅನುಮತಿ ಕೋರಿದ್ದರು.
#WATCH | Jaipur: After swearing in as a cabinet minister in the newly formed BJP government in Rajasthan, Col. Rajyavardhan Rathore says, “This is a great opportunity to work directly for the people of Rajasthan…It’s not always that one gets such an opportunity. Just like I was… pic.twitter.com/3dVabdXCs3
— ANI (@ANI) December 30, 2023
ಕಿರೋಡಿ ಲಾಲ್ ಮೀನಾ, ಮದನ್ ದಿಲಾವರ್, ರಾಜ್ಯವರ್ಧನ್ ಸಿಂಗ್ ರಾಥೋಡ್, ಗಜೇಂದ್ರ ಸಿಂಗ್ ಖಿಮ್ಸರ್, ಬಾಬುಲಾಲ್ ಖರಾಡಿ,ಜೋಗರಾಮ್ ಪಟೇಲ್, ಸುರೇಶ್ ಸಿಂಗ್ ರಾವತ್, ಅವಿನಾಶ್ ಗೆಹ್ಲೋಟ್,ಜೋರಾರಾಮ್ ಕುಮಾವತ್, ಹೇಮಂತ್ ಮೀನಾ, ಕನ್ಹಯ್ಯಾ ಲಾಲ್ ಚೌಧರಿ, ಸುಮಿತ್ ಗೋದಾರ
ಸಂಜಯ್ ಶರ್ಮಾ, ಗೌತಮ್ ಕುಮಾರ್,ಜಬರ್ ಸಿಂಗ್ ಖರ್ರಾ, ಸುರೇಂದ್ರ ಪಾಲ್ ಸಿಂಗ್, ಹೀರಾಲಾಲ್ ನಗರ
ಅದೇ ವೇಳೆ ಒಟ್ಟಾರಂ ದೇವಸಿ, ಮಂಜು ಬಾಗ್ಮಾರ್, ವಿಜಯ್ ಸಿಂಗ್ ಚೌಧರಿ, ಕೆ ಕೆ ಬಿಷ್ಣೋಯ್ ಮತ್ತು ಜವಾಹರ್ ಸಿಂಗ್ ಬೇಡಮ್ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಡಿಸೆಂಬರ್ 3 ರಂದು ರಾಜಸ್ಥಾನ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, 199 ಕ್ಷೇತ್ರಗಳಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷವು ಶಾಸಕಾಂಗ ಸಭೆಗೆ ಹೊಸಬರಾದ ಶರ್ಮಾ ಅವರನ್ನು ಮುಖ್ಯಮಂತ್ರಿಯನ್ನಾಗಿ ಹೆಸರಿಸಿತು. ಡಿಸೆಂಬರ್ 12 ರಂದು ಅವರ ಉಪಮುಖ್ಯಮಂತ್ರಿ ಆಗಿ ದಿಯಾ ಕುಮಾರಿ ಮತ್ತು ಪ್ರೇಮ್ ಚಂದ್ ಬೈರ್ವಾ ಅವರನ್ನು ನೇಮಿಸಿತು.
ಇದನ್ನೂ ಓದಿ:ಕಾರವಾರಕ್ಕೆ ವಂದೇ ಭಾರತ್ ರೈಲು; ಮೊಳಗಿದ ಮೋದಿ ಘೋಷ; ಇಲ್ಲಿದೆ ವಿಡಿಯೋ
ಅಧಿಕಾರಕ್ಕೆ ಬಂದ 26 ದಿನಗಳ ನಂತರವೂ ರಾಜಸ್ಥಾನದಲ್ಲಿ ಸಚಿವ ಸಂಪುಟವನ್ನು ರಚಿಸುವಲ್ಲಿ ವಿಳಂಬ ಮಾಡಿದ್ದಕ್ಕಾಗಿ ಬಿಜೆಪಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿತು. ರಾಜಸ್ಥಾನದಲ್ಲಿ ಅಸೆಂಬ್ಲಿ ಚುನಾವಣೆಯ ಫಲಿತಾಂಶಗಳನ್ನು ಡಿಸೆಂಬರ್ 3, 2023 ರಂದು ಪ್ರಕಟಿಸಲಾಯಿತು. ಬಿಜೆಪಿಯು ಸಿಎಂ ಮತ್ತು ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಘೋಷಿಸಲು 12 ದಿನಗಳನ್ನು (ಡಿಸೆಂಬರ್ 15, 2023 ರವರೆಗೆ) ತೆಗೆದುಕೊಂಡಿತ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. “26 ದಿನಗಳು ಕಳೆದಿವೆ. ರಾಜಸ್ಥಾನವು ಇನ್ನೂ ಕ್ಯಾಬಿನೆಟ್ ಮತ್ತು ಕೌನ್ಸಿಲ್ ಆಫ್ ಮಂತ್ರಿಗಳನ್ನು ಹೊಂದಿಲ್ಲ” ಎಂದು ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:37 pm, Sat, 30 December 23