
ಕೈಲಾದೇವಿ ದರ್ಶನಕ್ಕೆ ಬಂದ ಯುವತಿಯೊಬ್ಬಳು ಮೊಬೈಲ್ ಟವರ್(Mobile Tower) ಕುಳಿತಿರುವ ಘಟನೆ ರಾಜಸ್ಥಾನ(Rajasthan) ದಲ್ಲಿ ನಡೆದಿದೆ. ಪೊಲೀಸರು ಹಾಗೂ ಜಿಲ್ಲಾಡಳಿತ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಮನವೊಲಿಸಿದರೂ 3 ಗಂಟೆಗಳ ಬಳಿಕ ಕೆಳಗಿಳಿದಿದ್ದಾಳೆ. ಏಪ್ರಿಲ್ 7ರಂದು ಯುವತಿ ಮನೆಯ ಸದಸ್ಯರೊಂದಿಗೆ ಕೈಲಾದೇವಿ ಆಸ್ಥಾನಕ್ಕೆ ಬಂದಿದ್ದಳು, ಈ ಸಮಯದಲ್ಲಿ ಆಕೆ ಪೋಷಕರಿಂದ ಬೇರ್ಪಟ್ಟು ನಾಪತ್ತೆಯಾಗಿದ್ದಳು.
ಧೋಲ್ಪುರ ಜಿಲ್ಲೆಯ ನಿಹಾಲ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಿಕೊ ಪ್ರದೇಶದಲ್ಲಿ ಇರುವ ಮೊಬೈಲ್ ಟವರ್ ಅನ್ನು ಯುವತಿ ಹತ್ತಿದ್ದಳು. ಯುವತಿ ಮೊಬೈಲ್ ಟವರ್ ಹತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಆಡಳಿತಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಸುಮಾರು 3 ಗಂಟೆಗಳ ಕಾಲ ಸಮಾಲೋಚನೆ ನಡೆಸಿದ ಬಳಿಕ ಯುವತಿಯನ್ನು ಟವರ್ ನಿಂದ ಕೆಳಗಿಳಿಸಲಾಗಿದೆ.
ಇಂದು ಬೆಳಗ್ಗೆ ಯುವತಿಯೊಬ್ಬಳು ಅಬಕಾರಿ ಪೊಲೀಸ್ ಠಾಣೆ ಬಳಿಯ ಟವರ್‌ಗೆ ಹತ್ತಿದ ಬಗ್ಗೆ ಮಾಹಿತಿ ಲಭಿಸಿದೆ ಎಂದು ನಿಹಾಲ್‌ಗಂಜ್ ಪೊಲೀಸ್ ಠಾಣೆ ಪ್ರಭಾರಿ ಬಿಜೇಂದ್ರ ಸಿಂಗ್ ಹೇಳಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಉನ್ನತ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಮೆಟ್ಟಿಲು ಏರಿದ್ದ ಯುವತಿಯನ್ನು ಮಾತನಾಡಿಸಿದಾಗ ತನಗೆ ಕುಟುಂಬದೊಂದಿಗೆ ಇರಲು ಇಷ್ಟವಿಲ್ಲ ಎಂದು ತಿಳಿಸಿದ್ದಾಳೆ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ಭೀತಿಗೊಳಿಸುವ ವಿಡಿಯೋ ಇಲ್ಲಿದೆ
ಎಸ್‌ಡಿಎಂ ಸಾಧನಾ ಶರ್ಮಾ ಅವರು ಟವರ್ ಹತ್ತಲು ಕಾರಣವನ್ನು ಕೇಳಿದಾಗ, ಅವರು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಶಂಶಾಬಾದ್ ಪ್ರದೇಶದ ನಿವಾಸಿ ಎಂದು ಹೇಳಿದರು. ಏಪ್ರಿಲ್ 7 ರಂದು ಕೈಲಾದೇವಿ ದರ್ಶನಕ್ಕೆ ಕುಟುಂಬ ಸಮೇತ ಬಂದಿದ್ದರು. ಈ ವೇಳೆ ಆಕೆ ಒಬ್ಬ ಹುಡುಗನೊಂದಿಗೆ ಹೊರಟು ಹೋಗಿದ್ದಳು. ಕೊನೆಗೆ ಮೊಬೈಲ್ ಟವರ್ ಏರಿ ಕುಳಿತಿದ್ದಳು.
ಸಾಕಷ್ಟು ಮನವೊಲಿಕೆಯ ನಂತರ, ಎಸ್‌ಡಿಎಂ ಸಾಧನಾ ಶರ್ಮಾ ಮತ್ತು ಪೊಲೀಸರು ಬಾಲಕಿಯನ್ನು ಟವರ್‌ನಿಂದ ಕೆಳಗಿಳಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ