AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2000 ನೋಟು ರದ್ದಾಗುತ್ತಿದ್ದಂತೆ ಶುಕ್ರವಾರ ರಾತ್ರಿ ರಾಜಸ್ಥಾನ ಸರ್ಕಾರಿ ಕಚೇರಿಯಲ್ಲಿ ಸಿಕ್ತು 2 ಕೋಟಿ ರೂ ವಾರಸುದಾರರು ಇಲ್ಲದ ನಗದು, 1 ಕೆಜಿ ಚಿನ್ನ!

ಜೈಪುರದ ಸರ್ಕಾರಿ ಕಚೇರಿ ಯೋಜನಾ ಭವನದ ನೆಲಮಾಳಿಗೆಯಲ್ಲಿ 2.31 ಕೋಟಿ ರೂ ನಗದು ಮತ್ತು 1 ಕೆಜಿ ಚಿನ್ನದ ಬಿಸ್ಕತ್‌ ಪತ್ತೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಶೋಧಿಸಲಾಗುತ್ತಿದೆ. ಸಿಎಂ ಅಶೋಕ್ ಗೆಹ್ಲೋಟ್ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಜೈಪುರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

2000 ನೋಟು ರದ್ದಾಗುತ್ತಿದ್ದಂತೆ ಶುಕ್ರವಾರ ರಾತ್ರಿ ರಾಜಸ್ಥಾನ ಸರ್ಕಾರಿ ಕಚೇರಿಯಲ್ಲಿ ಸಿಕ್ತು 2 ಕೋಟಿ ರೂ ವಾರಸುದಾರರು ಇಲ್ಲದ ನಗದು, 1 ಕೆಜಿ ಚಿನ್ನ!
ರಾಜಸ್ಥಾನದಲ್ಲಿ ಸರ್ಕಾರಿ ಕಚೇರಿ ನೆಲಮಾಳಿಗೆಯಲ್ಲಿಯೇ ಸಿಕ್ತು 2 ಕೋಟಿ ರೂ
ಸಾಧು ಶ್ರೀನಾಥ್​
|

Updated on: May 20, 2023 | 11:06 AM

Share

ಜೈಪುರ: ರಾಜಸ್ಥಾನದ ಸರ್ಕಾರಿ ಅಧಿಕಾರಿಗಳು ಸರ್ಕಾರಿ ಕಟ್ಟಡವಾದ ಯೋಜನಾ ಭವನದಲ್ಲಿ 2.31 ಕೋಟಿ ರೂಪಾಯಿ ಮೊತ್ತದ ವಾರಸುದಾರರು ಇಲ್ಲದ ನಗದು ಮತ್ತು 1 ಕೆಜಿ ಚಿನ್ನದ ಗಟ್ಟಿಯನ್ನು ಪತ್ತೆ ಮಾಡಿದ್ದಾರೆ. ಇಲಾಖೆಯ ಸುಮಾರು 7-8 ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 2,000 ರೂಪಾಯಿ ನೋಟು ರದ್ದಾದ ಕೆಲವೇ ಗಂಟೆಗಳಲ್ಲಿ ಇಷ್ಟೊಂದು ಭಾರಿ ಮೊತ್ತದ ನಗದು ಪತ್ತೆಯಾಗಿರುವುದು ಕುತೂಹಲ ತಂದಿದೆ.

ಹೆಚ್ಚುವರಿ ನಿರ್ದೇಶಕರಾದ ಮಹೇಶ್ ಗುಪ್ತಾ ಅವರು ನೀಡಿದ ಖಚಿತ ಮಾಹಿತಿಯ ಆಧಾರದ ಮೇಲೆ ಜೈಪುರ ನಗರ ಪೊಲೀಸರು ನಗದು ವಶಪಡಿಸಿಕೊಂಡಿದ್ದಾರೆ. ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ ಮತ್ತು ಡಿಜಿಪಿ, ಜೈಪುರ ಪೊಲೀಸ್ ಕಮಿಷನರ್ ಆನಂದ್ ಶ್ರೀವಾಸ್ತವ ಅವರು ಐಟಿ ಇಲಾಖೆಯ ಹೆಚ್ಚುವರಿ ನಿರ್ದೇಶಕರು ತಮ್ಮ ನೆಲಮಾಳಿಗೆಯಲ್ಲಿ ನಗದು ಮತ್ತು ಚಿನ್ನದ ಗಟ್ಟಿಯನ್ನು ಪತ್ತೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

ಜೈಪುರದ ಸರ್ಕಾರಿ ಕಚೇರಿ ಯೋಜನಾ ಭವನದ ನೆಲಮಾಳಿಗೆಯಲ್ಲಿ ಕಪ್​​ ಬೋರ್ಡ್‌ನಲ್ಲಿ ಇರಿಸಲಾಗಿದ್ದ ಬ್ಯಾಗ್‌ನಲ್ಲಿ 2.31 ಕೋಟಿ ರೂಪಾಯಿಗೂ ಹೆಚ್ಚು ನಗದು ಮತ್ತು ಸುಮಾರು 1 ಕೆಜಿ ಚಿನ್ನದ ಬಿಸ್ಕತ್‌ಗಳು ಪತ್ತೆಯಾಗಿವೆ. 102 ಸಿಆರ್‌ಪಿಸಿ ಅಡಿಯಲ್ಲಿ ಪೊಲೀಸರು ಈ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಈ ವಿಷಯವನ್ನು ತನಿಖೆ ಮಾಡಲು ತಂಡವೊಂದು ಪತ್ತೆಯಾಗಿದೆ ಎಂದು ಜೈಪುರ ಪೊಲೀಸ್ ಕಮಿಷನರ್ ಆನಂದ್ ಕುಮಾರ್ ಶ್ರೀವಾಸ್ತವ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಶೋಧಿಸಲಾಗುತ್ತಿದೆ. ಸಿಎಂ ಅಶೋಕ್ ಗೆಹ್ಲೋಟ್ ಅವರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಆನಂದ್ ಕುಮಾರ್ ಶ್ರೀವಾಸ್ತವ ತಿಳಿಸಿದ್ದಾರೆ.