ಇನ್ನೊಬ್ಬರ ಜತೆ  ಲಿವ್ ಇನ್ ಸಂಬಂಧದಲ್ಲಿರುವ ವಿವಾಹಿತ ಮಹಿಳೆಗೆ ರಕ್ಷಣೆ ನೀಡಿದರೆ ಅದು ಅಕ್ರಮ ಸಂಬಂಧವನ್ನು ಒಪ್ಪಿಕೊಂಡಂತೆ: ರಾಜಸ್ಥಾನ ಹೈಕೋರ್ಟ್

| Updated By: ರಶ್ಮಿ ಕಲ್ಲಕಟ್ಟ

Updated on: Aug 19, 2021 | 4:32 PM

Rajasthan High Court: ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರುವವರಿಗೆ ಭದ್ರತೆ ನೀಡುವಂತೆ ಪೊಲೀಸರಿಗೆ ನಿರ್ದೇಶಿಸುವುದು ಪರೋಕ್ಷವಾಗಿ ಇಂತಹ ಅಕ್ರಮ ಸಂಬಂಧಗಳಿಗೆ ನಮ್ಮ ಒಪ್ಪಿಗೆ ನೀಡಿದಂತೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಇನ್ನೊಬ್ಬರ ಜತೆ  ಲಿವ್ ಇನ್ ಸಂಬಂಧದಲ್ಲಿರುವ ವಿವಾಹಿತ ಮಹಿಳೆಗೆ ರಕ್ಷಣೆ ನೀಡಿದರೆ ಅದು ಅಕ್ರಮ ಸಂಬಂಧವನ್ನು ಒಪ್ಪಿಕೊಂಡಂತೆ: ರಾಜಸ್ಥಾನ ಹೈಕೋರ್ಟ್
ರಾಜಸ್ಥಾನ ಹೈಕೋರ್ಟ್
Follow us on

ಜೈಪುರ: ರಾಜಸ್ಥಾನ ಹೈಕೋರ್ಟ್ ಲಿವ್-ಇನ್ ಸಂಬಂಧದಲ್ಲಿರುವ ದಂಪತಿಗೆ ಪೊಲೀಸ್ ರಕ್ಷಣೆಯನ್ನು ನೀಡಲು ನಿರಾಕರಿಸಿದೆ. ಮಹಿಳೆಗೆ ಈಗಾಗಲೇ ಮದುವೆಯಾಗಿದ್ದರಿಂದ, ದಂಪತಿಗೆ ರಕ್ಷಣೆ ನೀಡುವುದು ಅಂತಹ ಅಕ್ರಮ ಸಂಬಂಧಗಳಿಗೆ ನ್ಯಾಯಾಲಯದ ಪರೋಕ್ಷವಾಗಿ ಒಪ್ಪಿಗೆಯನ್ನು ನೀಡಿದಂತೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇತ್ತೀಚಿಗೆ ಶ್ರೀಮತಿ ಅನಿತಾvs ಉತ್ತರ ಪ್ರದೇಶ ರಾಜ್ಯ ಸರ್ಕಾರ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ನ್ಯಾಯಮೂರ್ತಿ ಸತೀಶ್ ಕುಮಾರ್ ಶರ್ಮಾ ಅವರು ಎತ್ತಿ ಹಿಡಿದಿದ್ದಾರೆ. ಅನಿತಾ ವರ್ಸಸ್ ಯುಪಿ ಸರ್ಕಾರ ಪ್ರಕರಣದಲ್ಲಿನ ತೀರ್ಪು ಸರಿಯಾಗಿದ್ದು ಲಿವ್-ಇನ್ ಸಂಬಂಧವು ದೇಶದ ಸಾಮಾಜಿಕ ರಚನೆಗೆ ಅನ್ವಯವಾಗುವುದಿಲ್ಲ ಎಂದಿದ್ದಾರೆ.

ಅಲಹಾಬಾದ್ ಹೈಕೋರ್ಟಿನ ವಿಭಾಗೀಯ ಪೀಠವು ಶ್ರೀಮತಿ ಅನಿತಾvs ಯುಪಿ  ವಿವರಿಸಿದಂತೆ ಇದು ಚೆನ್ನಾಗಿ  ಕಾನೂನು ನೆಲೆಸಿರುವ ಸ್ಥಾನವಾಗಿದೆ. ಉತ್ತರ ಪ್ರದೇಶ ಸರ್ಕಾರವು  ಲಿವ್-ಇನ್ ಸಂಬಂಧವು ಈ ದೇಶದ ಸಾಮಾಜಿಕ ರಚನೆಗೆ ಅನ್ವಯವಾಗುವುದಿಲ್ಲ ಎಂದಿತ್ತು . ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರುವವರಿಗೆ ಭದ್ರತೆ ನೀಡುವಂತೆ ಪೊಲೀಸರಿಗೆ ನಿರ್ದೇಶಿಸುವುದು ಪರೋಕ್ಷವಾಗಿ ಇಂತಹ ಅಕ್ರಮ ಸಂಬಂಧಗಳಿಗೆ ನಮ್ಮ ಒಪ್ಪಿಗೆ ನೀಡಿದಂತೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

ಈ ವಿಷಯದಲ್ಲಿ ಅರ್ಜಿದಾರರಾದ ವಿವಾಹಿತ ಮಹಿಳೆ ತಾನು ವಿವಾಹವಾದ ಮನೆಯನ್ನು ಒತ್ತಾಯಪೂರ್ವಕ ತೊರೆದಿದ್ದು,ನಂತರ ಎರಡನೇ ಅರ್ಜಿದಾರರೊಂದಿಗೆ ವಾಸಿಸುತ್ತಿದ್ದರು.  ನಾನು ಇನ್ನೊಬ್ಬ ಪುರುಷನೊಂದಿಗೆ ವಾಸಿಸುತ್ತಿರುವುದು ಅವರಿಗೆ ಹಿಡಿಸುತ್ತಿಲ್ಲ , ಆದ್ದರಿಂದ ಪ್ರತಿವಾದಿಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅರ್ಜಿದಾರರಾದ ಮಹಿಳೆ ಆರೋಪಿಸಿದ್ದಾರೆ.

ಆದ್ದರಿಂದ ತಮ್ಮ ಜೀವಕ್ಕೆ ಅಪಾಯವಿದೆ. ಹಾಗಾಗಿ ಪೊಲೀಸ್ ರಕ್ಷಣೆ ನೀಡಬೇಕೆಂದು ಅವರು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕೋರ್ಟ್, ರಕ್ಷಣೆ ನೀಡುವುದು ಕಾನೂನುಬಾಹಿರ ಸಂಬಂಧಗಳಿಗೆ ಒಪ್ಪಿಗೆ ನೀಡುವುದಕ್ಕೆ ಸಮಾನ ಎಂದು ಹೇಳಿದೆ. ಹಾಗಾಗಿ, ರಕ್ಷಣೆ ನೀಡುವ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಆದಾಗ್ಯೂ, ಅರ್ಜಿದಾರರೊಂದಿಗೆ ಯಾವುದೇ ಅಪರಾಧವು ಸಂಭವಿಸಿದಲ್ಲಿ ಅವರು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲು ಅಥವಾ ಲಭ್ಯವಿರುವ ಕಾನೂನು ಪರಿಹಾರಗಳನ್ನು ಪಡೆಯಲು ಸ್ವತಂತ್ರರಾಗಿರುತ್ತಾರೆ ಎಂದು ಅದು ಹೇಳಿದೆ.

ಇತ್ತೀಚೆಗೆ, ಅಲಹಾಬಾದ್ ಹೈಕೋರ್ಟ್ ಲಿವ್-ಇನ್ ದಂಪತಿಗಳಿಗೆ ರಕ್ಷಣೆ ನಿರಾಕರಿಸಿದ್ದು, ಮಹಿಳೆ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ಹಾಗಾಗಿ ನ್ಯಾಯಾಲಯವು “ಕಾನೂನುಬಾಹಿರ” ಸಂಬಂಧಕ್ಕೆ ಅನುಮತಿ ನೀಡುವುದಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ: 10ನೇ ತರಗತಿ ಇಂಗ್ಲಿಷ್ ಪರೀಕ್ಷೆ ಬರೆದ ಹರ್ಯಾಣದ ಮಾಜಿ ಸಿಎಂ 86ರ ಹರೆಯದ ಓಂ ಪ್ರಕಾಶ್ ಚೌಟಾಲಾ

ಇದನ್ನೂ ಓದಿ:  Janardhan Reddy: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ತೆರಳಲು ಷರತ್ತುಬದ್ಧ ಅನುಮತಿ ನೀಡಿದ ಸುಪ್ರೀಂಕೋರ್ಟ್

(Rajasthan High Court has refused to extend police protection to a couple in a live-in relationship)