10ನೇ ತರಗತಿ ಇಂಗ್ಲಿಷ್ ಪರೀಕ್ಷೆ ಬರೆದ ಹರ್ಯಾಣದ ಮಾಜಿ ಸಿಎಂ 86ರ ಹರೆಯದ ಓಂ ಪ್ರಕಾಶ್ ಚೌಟಾಲಾ
OP Chautala: ಚೌಟಾಲಾ ಅವರು ಈ ವರ್ಷದ ಆರಂಭದಲ್ಲಿ ಹರ್ಯಾಣ ಓಪನ್ ಬೋರ್ಡ್ ಅಡಿಯಲ್ಲಿ ತಮ್ಮ 12 ನೇ ತರಗತಿಯ ಪರೀಕ್ಷೆಗಳನ್ನು ಬರೆದಿದ್ದರು. ಆದರೆ ಆಗಸ್ಟ್ 5 ರಂದು ಫಲಿತಾಂಶಗಳನ್ನು ಘೋಷಿಸಿದಾಗ, ಅವರು ಇನ್ನೂ 10 ನೇ ತರಗತಿಯ ಕಡ್ಡಾಯ ಇಂಗ್ಲಿಷ್ ಪರೀಕ್ಷೆಯನ್ನು ತೆಗೆದುಕೊಳ್ಳದ ಕಾರಣ ಅವರ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು.
ದೆಹಲಿ: ಹರ್ಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಬುಧವಾರ 10 ನೇ ತರಗತಿಯ ಇಂಗ್ಲಿಷ್ ಪರೀಕ್ಷೆ ಬರೆದಿದ್ದಾರೆ. ಚೌಟಾಲಾ ಸಿರ್ಸಾದ ಆರ್ಯ ಕನ್ಯಾ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿದ್ದರು. ಕೈ ಫ್ರಾಕ್ಚರ್ ಆಗಿದ್ದ ಕಾರಣ ಪರೀಕ್ಷೆ ಬರೆಯಲು ಬೇರೊಬ್ಬರ ಸಹಾಯವನ್ನು ಚೌಟಾಲಾ ಬೇಡಿದ್ದು, ಅದಕ್ಕೆ ಅನುಮತಿ ಲಭಿಸಿತ್ತು. ಇಂಡಿಯನ್ ನ್ಯಾಷನಲ್ ಲೋಕ್ ದಳದ (INLD) ಅಧ್ಯಕ್ಷರಾಗಿರುವ 86ರ ಹರೆಯದ ಚೌಟಾಲಾ ಪರೀಕ್ಷೆಯನ್ನು ಎರಡು ಗಂಟೆಗಳಲ್ಲಿ ಮುಗಿಸಿ ಹೊರಟು ಹೋದರು ಎಂದು ಎನ್ಡಿಟಿವಿ ವರದಿ ಮಾಡಿದೆ.
ಚೌಟಾಲಾ ಅವರು ಈ ವರ್ಷದ ಆರಂಭದಲ್ಲಿ ಹರ್ಯಾಣ ಓಪನ್ ಬೋರ್ಡ್ ಅಡಿಯಲ್ಲಿ ತಮ್ಮ 12 ನೇ ತರಗತಿಯ ಪರೀಕ್ಷೆಗಳನ್ನು ಬರೆದಿದ್ದರು. ಆದರೆ ಆಗಸ್ಟ್ 5 ರಂದು ಫಲಿತಾಂಶಗಳನ್ನು ಘೋಷಿಸಿದಾಗ, ಅವರು ಇನ್ನೂ 10 ನೇ ತರಗತಿಯ ಕಡ್ಡಾಯ ಇಂಗ್ಲಿಷ್ ಪರೀಕ್ಷೆಯನ್ನು ತೆಗೆದುಕೊಳ್ಳದ ಕಾರಣ ಅವರ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು.
ತನ್ನ 12 ನೇ ತರಗತಿಯ ಫಲಿತಾಂಶ ಪಡೆಯಬೇಕಾದರೆ ಚೌಟಾಲಾ ಕಡ್ಡಾಯವಾಗಿ 10ನೇ ತರಗತಿ ಇಂಗ್ಲಿಷ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಿದೆ.
ಮಾಜಿ ಮುಖ್ಯಮಂತ್ರಿ ಚೌಟಾಲಾ 2017 ರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲ್ ನಿಂದ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಈಗ ಅವರು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅವರ ಪಾತ್ರದ ಕುರಿತು ಸುಪ್ರೀಂ ಕೋರ್ಟ್ ಆದೇಶಿಸಿದ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಆ ಸಮಯದಲ್ಲಿ, ಅವನ ಮಗ ಅಭಯ್ ಚೌಟಾಲಾ ತನ್ನ ತಂದೆ 12 ನೇ ತರಗತಿಯ ಪರೀಕ್ಷೆಗಳನ್ನು ತೆಗೆದುಕೊಂಡಿದ್ದು ಮತ್ತು ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವರದಿಗಾರರಿಗೆ ಹೇಳಿದ್ದರು. ಆದರೆ ಅದು ಚೌಟಾಲಾ ಅವರ 10 ನೇ ತರಗತಿ, 12 ನೇ ತರಗತಿಯ ಪರೀಕ್ಷೆಯಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿತು.
ದೆಹಲಿಯ ತಿಹಾರ್ ಜೈಲಿನಲ್ಲಿ ಇತ್ತೀಚಿನ ಪರೀಕ್ಷೆಗೆ ಚೌಟಾಲಾ ಓದಿದ್ದರು.ಅಲ್ಲಿ ಅವರು 2013 ರಿಂದ 10 ವರ್ಷಗಳ ಶಿಕ್ಷೆಯನ್ನು ಅನುಭವಿಸಿದರು. ಓಪಿ ಚಾಟಾಲಾ, ಅವರ ಮಗ ಅಜಯ್ ಚೌಟಾಲಾ ಮತ್ತು ಇತರ 53 ಜನರನ್ನು ಕಳೆದು ತಿಂಗಳು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಭ್ರಷ್ಟಾಚಾರ ಪ್ರಕರಣದಲ್ಲಿ 10 ವರ್ಷ ಶಿಕ್ಷೆ ನಂತರ ಜೈಲಿನಿಂದ ಬಿಡುಗಡೆಯಾಗಿದ್ದರು ಚೌಟಾಲಾ
ಐಎನ್‌ಎಲ್‌ಡಿ ಮುಖ್ಯಸ್ಥರೂ ಹರ್ಯಾಣದ ಮುಖ್ಯಮಂತ್ರಿಯಾಗಿದ್ದಾಗ 1999-2000ರಲ್ಲಿ ಹರಿಯಾಣದಲ್ಲಿ 3,206 ಮೂಲ ಶಿಕ್ಷಕರನ್ನು ಅಕ್ರಮವಾಗಿ ನೇಮಕ ಮಾಡಿದ್ದಕ್ಕಾಗಿ ಚೌಟಾಲಾ ಮತ್ತು ಅವರ ಪುತ್ರ ಅಜಯ್ ಸೇರಿದಂತೆ ಇತರ 53 ಜನರನ್ನು ದೆಹಲಿ ನ್ಯಾಯಾಲಯ 2013 ರ ಜನವರಿ 13 ರಂದು ಶಿಕ್ಷೆಗೊಳಪಡಿಸಿತ್ತು. ಐಎಎಸ್ ಅಧಿಕಾರಿ ಸಂಜೀವ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಶಿಕ್ಷಕರನ್ನು ನೇಮಕ ಮಾಡಲು ನಾಯಕರು ಲಂಚ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದು, ಆಯ್ದ ಅಭ್ಯರ್ಥಿಗಳ ಮೂಲ ಪಟ್ಟಿಯನ್ನು ಬದಲಾಯಿಸುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದ್ದರು. ಈ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆಗೆ ಆದೇಶ ನೀಡಿತ್ತು.
86 ವರ್ಷದ ಹಿರಿಯ ರಾಜಕಾರಣಿ ವೈದ್ಯಕೀಯ ಚಿಕಿತ್ಸೆಗಾಗಿ ಮೇಲೆ ಪೆರೋಲ್ನಲ್ಲಿ ಹೊರಗಿದ್ದರು. ಗುರುಗ್ರಾಮ್‌ನ ಆಸ್ಪತ್ರೆಗೆ ದಾಖಲಾಗಿದ್ದಾಗ ಜೈಲು ಅಧಿಕಾರಿಗಳು ಜೂನ್ 22 ರಂದು ಪತ್ರ ಬರೆದಿದ್ದು, ಅವರ ಶಿಕ್ಷೆ ಮುಗಿದಿದೆ ಎಂದು ಹೇಳಿದ್ದಾರೆ.
ಕೊವಿಡ್ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ತಿಹಾರ್ ಜೈಲಿನ ಅಧಿಕಾರಿಗಳು 1,000 ಕೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿದಾಗ ಚೌಟಾಲಾ ಕೂಡಾ ಹೊರಗಿದ್ದರು. ಜೈಲಿನ ಅಧಿಕಾರಿಗಳು ಈ ವರ್ಷದ ಫೆಬ್ರವರಿಯಲ್ಲಿ “ವೈದ್ಯಕೀಯ ಚಿಕಿತ್ಸೆ ” ಉಲ್ಲೇಖಿಸಿ ಅವರೊಂದಿಗೆ ಬಿಡುಗಡೆಯಾದ ಇತರರಂತೆ ಚೌಟಾಲಾ ಕೂಡಾ ತಿಹಾರ್‌ಗೆ ಹಿಂತಿರುಗಲಿಲ್ಲ ಎಂದು ಹೇಳಿದರು.
ಜೈಲು ಶಿಕ್ಷೆ ಅನುಭವಿಸುತ್ತಿದ್ದರೂ ಇಂಡಿಯನ್ ನ್ಯಾಷನಲ್ ಲೋಕ ದಳದ (ಐಎನ್‌ಎಲ್‌ಡಿ) ಮುಖ್ಯಸ್ಥರಾಗಿ ಮುಂದುವರಿದ ಹಿರಿಯ ರಾಜಕಾರಣಿ, ತಮ್ಮ ಪೆರೋಲ್ ವಿಸ್ತರಣೆಗಾಗಿ ದೆಹಲಿ ಹೈಕೋರ್ಟ್‌ಗೆ ತೆರಳಿದ್ದರು. “ಇದನ್ನು ಹೈಕೋರ್ಟ್ ಎರಡು ಬಾರಿ ವಿಸ್ತರಿಸಿದೆ” ಎಂದು ಹೆಸರು ಹೆಸರು ಹೇಳಲು ಇಚ್ಛಿಸದ ಜೈಲಿನ ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿತ್ತು.
ಚೌಟಾಲಾ ಅವರಿಗೆ 3 ತಿಂಗಳಿಗಿಂತ ಕಡಿಮೆ ಜೈಲು ಶಿಕ್ಷೆ ಉಳಿದಿರುವ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ, ಇದನ್ನು ಮನ್ನಾ ಎಂದು ಪರಿಗಣಿಸಲಾಗುತ್ತದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದರು.
(Former Haryana CM Om Prakash Chautala took a Class 10 English exam on Wednesday)