ಪ್ರಧಾನಿ ಕಚೇರಿಯಿಂದ ಆಕ್ಷೇಪ: ಪುಣೆಯ ಮೋದಿ ದೇಗುಲದಲ್ಲಿರುವ ನರೇಂದ್ರ ಮೋದಿ ಪ್ರತಿಮೆ ತೆರವು

| Updated By: ರಶ್ಮಿ ಕಲ್ಲಕಟ್ಟ

Updated on: Aug 19, 2021 | 5:11 PM

37 ವರ್ಷದ ಬಿಜೆಪಿ ಕಾರ್ಯಕರ್ತ ಮತ್ತು ಪ್ರಧಾನಿ ಮೋದಿ ಅವರ ಬೆಂಬಲಿಗ ಮಯೂರ್ ಮುಂಡೆ ಈ ದೇವಸ್ಥಾನವನ್ನು ಪುಣೆಯ ಔಂಧ್ ನಲ್ಲಿ 1,60,000 ರೂ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇಲ್ಲಿರುವ ವಿಗ್ರಹ ಮತ್ತು ದೇವಾಲಯದ ನಿರ್ಮಾಣಕ್ಕಾಗಿ ಜೈಪುರದ ಕೆಂಪು ಅಮೃತಶಿಲೆಯನ್ನು ಬಳಸಲಾಗಿದೆ

ಪ್ರಧಾನಿ ಕಚೇರಿಯಿಂದ ಆಕ್ಷೇಪ: ಪುಣೆಯ ಮೋದಿ ದೇಗುಲದಲ್ಲಿರುವ ನರೇಂದ್ರ ಮೋದಿ ಪ್ರತಿಮೆ ತೆರವು
ಮೋದಿ ಪ್ರತಿಮೆ
Follow us on

ಮುಂಬೈ: ಮಹಾರಾಷ್ಟ್ರದ ಪುಣೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರು ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಭಿಮಾನದಿಂದ ನಿರ್ಮಿಸಿದ ದೇವಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಮೆಯನ್ನು  ರಾತ್ರೋರಾತ್ರಿ ತೆಗೆಯಲಾಗಿದೆ. ಪ್ರಧಾನಿ ಕಚೇರಿಯಿಂದ ತೀವ್ರ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಮೆಯನ್ನು ತೆರವು ಮಾಡಲಾಗಿದೆ.

37 ವರ್ಷದ ಬಿಜೆಪಿ ಕಾರ್ಯಕರ್ತ ಮತ್ತು ಪ್ರಧಾನಿ ಮೋದಿ ಅವರ ಬೆಂಬಲಿಗ ಮಯೂರ್ ಮುಂಡೆ ಈ ದೇವಸ್ಥಾನವನ್ನು ಪುಣೆಯ ಔಂಧ್ ನಲ್ಲಿ 1,60,000 ರೂ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇಲ್ಲಿರುವ ವಿಗ್ರಹ ಮತ್ತು ದೇವಾಲಯದ ನಿರ್ಮಾಣಕ್ಕಾಗಿ ಜೈಪುರದ ಕೆಂಪು ಅಮೃತಶಿಲೆಯನ್ನು ಬಳಸಲಾಗಿದೆ. ರಿಯಲ್ ಎಸ್ಟೇಟ್ ಜೊತೆ ಸಂಬಂಧ ಹೊಂದಿರುವ ಮುಂಡೆ “ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಿದ ವ್ಯಕ್ತಿಗೆ ಒಂದು ದೇವಸ್ಥಾನ ಇರಬೇಕು ಎಂದು ನನಗೆ ಅನಿಸಿತು. ಹಾಗಾಗಿ ನಾನು ಈ ದೇವಸ್ಥಾನವನ್ನು ನನ್ನ ನಿರ್ಮಿಸಲು ನಿರ್ಧರಿಸಿದೆ ಎಂದಿದ್ದಾರೆ.

ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡಿದ ಮುಂಡೆ, ತ್ರಿವಳಿ ತಲಾಖ್, ಕಾಶ್ಮೀರದಲ್ಲಿ 370 ನೇ ವಿಧಿಯ ರದ್ಧತಿ ಮೊದಲಾದ  ನಿರ್ಧಾರಗಳಿಂದಾಗಿಯೇ ಮೋದಿಯವರಿಗಾಗಿ ದೇವಸ್ಥಾನವನ್ನು ನಿರ್ಮಿಸಿದೆ. ಈ ದೇವಾಲಯದಲ್ಲಿ ಪ್ರಧಾನಿ ಮೋದಿಯವರ ಬಗ್ಗೆ ಒಂದು ಕವಿತೆಯನ್ನು ಬರೆಯಲಾಗಿದೆ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ ಪ್ರಧಾನಮಂತ್ರಿ ಕಾರ್ಯಾಲಯವು ದೇವಾಲಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಗುರುವಾರ ಬೆಳಿಗ್ಗೆ ಅಲ್ಲಿದ್ದ ಪ್ರಧಾನಿಯವರ ಪ್ರತಿಮೆ ಕಾಣೆಯಾಗಿದೆ. ಬುಧವಾರ ತಡರಾತ್ರಿ ಈ ವಿಗ್ರಹವನ್ನು ತೆರವು ಮಾಡಿದ್ದು ಅದೀಗ ಸಮೀಪದಲ್ಲಿ ವಾಸಿಸುತ್ತಿರುವ ಬಿಜೆಪಿ ಕೌನ್ಸಿಲರ್ ಮನೆಯಲ್ಲಿ ಇರಿಸಲಾಗಿದೆ ಎಂದು ನ್ಯೂಸ್ 18 ವರದಿ ಮಾಡಿದೆ.

ಪುಣೆಯಲ್ಲಿ ಮುಂದಿನ ವರ್ಷದ ಆರಂಭದಲ್ಲಿ ಪುರಸಭೆಯ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಎನ್‌ಸಿಪಿ ಕಾರ್ಯಕರ್ತರು ಗುರುವಾರ ಬೆಳಿಗ್ಗೆ ದೇವಸ್ಥಾನವನ್ನು ತಲುಪುವುದಾಗಿ ಮತ್ತು ಅಲ್ಲಿ ‘ಭೋಗ್’ ನೀಡುವುದಾಗಿ ಘೋಷಿಸಿದ್ದರು. ಈ ವಿಚಾರದಲ್ಲಿ ರಾಜಕೀಯ ತಿಕ್ಕಾಟ  ತೀವ್ರಗೊಳ್ಳುವ ಮುನ್ನವೇ ಪ್ರತಿಮೆಯನ್ನು ತೆಗೆಯಲಾಯಿತು.

ಇದನ್ನೂ ಓದಿ:  ಪುಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇವಸ್ಥಾನ ಕಟ್ಟಿಸಿದ ಬಿಜೆಪಿ ಕಾರ್ಯಕರ್ತ ಮಯೂರ್ ಮುಂಡೆ

ಇದನ್ನೂ ಓದಿ: Haiti Earthquake: ಹೈಟಿ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2189ಕ್ಕೆ ಏರಿಕೆ; 300ಕ್ಕೂ ಹೆಚ್ಚು ಮಂದಿ ನಾಪತ್ತೆ

(Statue of Prime Minister Narendra Modi in a temple removed overnight after strong objections raised by PMO )