ಗುಜರಾತಿನ ವಡೋದರಾದಲ್ಲಿ 6 ರೇಪಿಸ್ಟ್ -ಕೊಲೆಗಾರರನ್ನು 20 ನಿಮಿಷಗಳಲ್ಲಿ ಪತ್ತೆ ಹಚ್ಚಿದ ಪೊಲೀಸ್ ಶ್ವಾನ ‘ಜಾವಾ’

ಅದರ (ಜಾವಾ) ನಡವಳಿಕೆಯು ಅಸಾಮಾನ್ಯವಾಗಿತ್ತು ಏಕೆಂದರೆ ಅದು ನಿರಂತರವಾಗಿ ಬೊಗಳುತ್ತಾ ಟೆಂಟ್ ಒಳಗೆ ಓಡಾಡುತ್ತಿತ್ತು. ಅದು ಸ್ಥಳದಲ್ಲಿದ್ದ ಐದು ಡೇರೆಗಳಲ್ಲಿ ಒಂದನ್ನು ಮಾತ್ರ ಆರಿಸಿದಾಗ ನಮ್ಮ ಅನುಮಾನ ಬಲವಾಯಿತು.

ಗುಜರಾತಿನ ವಡೋದರಾದಲ್ಲಿ 6 ರೇಪಿಸ್ಟ್ -ಕೊಲೆಗಾರರನ್ನು 20 ನಿಮಿಷಗಳಲ್ಲಿ ಪತ್ತೆ ಹಚ್ಚಿದ ಪೊಲೀಸ್ ಶ್ವಾನ 'ಜಾವಾ'
ಪೊಲೀಸ್ ಶ್ವಾನ ಜಾವಾ
Follow us
TV9 Web
| Updated By: Digi Tech Desk

Updated on:Aug 19, 2021 | 7:14 PM

ವಡೋದರಾ: ಬರೋಡ ಗ್ರಾಮಾಂತರ ಪೊಲೀಸರ ಶ್ವಾನದಳದ 18 ತಿಂಗಳ ಡೋಬರ್ಮನ್ ದಣಿವರಿಯದ ‘ಶ್ವಾನ’ ಎಂದು ಮತ್ತೊಮ್ಮೆ ಸಾಬೀತಾಗಿದೆ. 38 ವರ್ಷದ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಂದ ಆರು ಜನ ಆರೋಪಿಗಳನ್ನು ಪತ್ತೆ ಹಚ್ಚಲು ಜಾವಾ ಎಂಬ ಈ ಹೆಣ್ಣು ನಾಯಿ ಅರ್ಧಗಂಟೆಗಿಂತ ಕಡಿಮೆ ಸಮಯ ತೆಗೆದುಕೊಂಡಿತು. ಹೆಚ್ಚಿನ ಸಾಮರ್ಥ್ಯ, ತೀಕ್ಷ್ಣವಾದ ಗಮನ ಮತ್ತು ದೃಢ  ಪ್ರಜ್ಞೆಯನ್ನು ಪ್ರದರ್ಶಿಸಿದ ನಾಯಿಯು ಅಪರಾಧದ ಸ್ಥಳದಲ್ಲಿ ದುಪಟ್ಟಾ ಮತ್ತು ಬಾಟಲಿಯನ್ನು ವಾಸನೆ ಪತ್ತೆ ಮಾಡಿ ಉತ್ತರ ದಿಕ್ಕಿನಲ್ಲಿ ನಡೆಯಲು ಆರಂಭಿಸಿತು. ಇದು ಸುಮಾರು 2 ಕಿಲೋಮೀಟರ್‌ಗಳಷ್ಟು ನಿರಂತರವಾಗಿ ನಡೆದು, ಹೊಲ ಮತ್ತು ಪೊದೆಗಳ ಮೂಲಕ ಹಾದು ಅಹಮದಾಬಾದ್-ಮುಂಬೈ ರೈಲ್ವೆ ಮಾರ್ಗವನ್ನು ದಾಟಿ ಟೆಂಟ್‌ಗೆ ಪ್ರವೇಶಿಸಿತು. ಈ ಸುಳಿವಿನಿಂದ ಪೊಲೀಸರು ಮಂಗಳವಾರ 6 ಆರೋಪಿಗಳನ್ನು ಪತ್ತೆ ಹಚ್ಚಿದರು. ನಾಯಿಗಳು ಪತ್ತೆಹಚ್ಚುವಲ್ಲಿ ಏಕೆ ಅಗ್ರಸ್ಥಾನ ಹೊಂದಿವೆ ಎಂಬುದನ್ನು ಜಾವಾ ಸಾಬೀತುಪಡಿಸಿದೆ. ಅದು ಮೊದಲು ವಾಸನೆಯನ್ನು ಗ್ರಹಿಸುತ್ತದೆ. ನೋಡುತ್ತದೆ ಮತ್ತು ಕೊನೆಯದಾಗಿ ಅಪರಾಧದ ಸ್ಥಳದಲ್ಲಿ ಸುಳಿವುಗಳನ್ನು ಕೇಳುತ್ತದೆ. ಇದು ಹೇಗೆಂದರೆ ತನಿಖಾಧಿಕಾರಿಗಳು ಮಾಡುವ ಕೆಲಸಕ್ಕೆ ವಿರುದ್ಧವಾಗಿ ಶ್ವಾನಗಳು ಕೆಲಸ ಮಾಡುತ್ತವೆ. ಜಾವಾ ಬಗ್ಗೆ ಹೇಳುವುದಾದರೆ 18 ತಿಂಗಳ ಈ ನಾಯಿ 45 ದಿನಗಳೊಳಗೆ ಪ್ರಕರಣ ಪತ್ತೆ ಹಚ್ಚುವ ಕಾರ್ಯದಲ್ಲಿ ಹ್ಯಾಟ್ರಿಕ್ ಹೊಡೆದಿದೆ. ಈ ಹಿಂದೆ ನೆರೆಯ ಛೋಟಾ ಉದೇಪುರ್ ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣದ ಪತ್ತೆಗೆ ಮತ್ತು ಇತ್ತೀಚೆಗೆ ವಾಡುವಿನಲ್ಲಿ ಕೊಲೆ ಆಯುಧವನ್ನು ಪತ್ತೆ ಮಾಡಲು ಜಾವಾ ಸಹಾಯ ಮಾಡಿದೆ.

ಈ ಪ್ರಕರಣದಲ್ಲಿ ಮೂರು ಮಕ್ಕಳ ತಾಯಿ ಆಕೆ ಹುಲ್ಲು ಕತ್ತರಿಸುತ್ತಿದ್ದ ಜಮೀನಿನಲ್ಲಿ ಆರು ಜನರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದರು. ಆಗಸ್ಟ್ 16 ರ ಸಂಜೆ ಕರ್ಜನ್ ತಾಲೂಕಿನ ದೇಥಾನ್ ಗ್ರಾಮದ ಹೊರವಲಯದಲ್ಲಿ ಈ ಪ್ರಕರಣ ನಡೆದಿದ್ದು, ಅತ್ಯಾಚಾರವೆಸಗಿದ ನಂತರ ಆರೋಪಿಗಳು ಆಕೆಯ ಕತ್ತು ಹಿಸುಕಿ ಸಾಯಿಸಿದ್ದರು. ಮಹಿಳೆ ಮನೆಗೆ ತಲುಪದೇ ಇದ್ದಾಗ ಕುಟುಂಬದವರು ಹುಡುಕಾಟ ಆರಂಭಿಸಿದ್ದು ರಾತ್ರಿ 9 ಗಂಟೆ ಸುಮಾರಿಗೆ ಆಕೆಯ ಶವ ಪತ್ತೆಯಾಗಿತ್ತು.

ಮಂಗಳವಾರ ಮುಂಜಾನೆ ಕರ್ಜನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರುದಿನ ಬೆಳಿಗ್ಗೆ ವಿವಿಧ ತಂಡಗಳ ಪೊಲೀಸರು ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರನ್ನು ವಿಚಾರಣೆಗೆ ಒಳಪಡಿಸಿದರು. ಅದೇ ಸಮಯದಲ್ಲಿ ವಿಧಿವಿಜ್ಞಾನ ತಂಡನ  ಜಾವದೊಂದಿಗೆ ಅಪರಾಧದ ಸ್ಥಳವನ್ನು ತಲುಪಿತು. ಜಾವಾ 30 ನಿಮಿಷಗಳ ಕಡಿಮೆ ಅವಧಿಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿತು. ಮೊದಲ ಆರೋಪಿ 22 ವರ್ಷದ ಲಾಲ್ ಬಹದ್ದೂರ್ ಗಿರ್ಜಾರಾಮ್. ಈತ ಉತ್ತರ ಪ್ರದೇಶದ ನಿವಾಸಿಯಾಗಿದ್ದು ರೈಲು ಹಳಿಯ ಬಳಿಯಿರುವ ಡೇರೆಯಲ್ಲಿ ವಾಸವಾಗಿದ್ದನು.

“ಈ ಹಿಂದೆ ಕೂಡ, ಟ್ರ್ಯಾಕರ್ ನಾಯಿಗಳನ್ನು ತನಿಖೆಯ ಉದ್ದೇಶಗಳಿಗಾಗಿ ಬಳಸಲಾಗುತ್ತಿತ್ತು, ಆದರೆ ಇದು ಒಂದು ಪ್ರಮುಖ ಬೆಳವಣಿಗೆಯಾಗಿತ್ತು. ಏಕೆಂದರೆ ಈ ನಾಯಿ ನಮ್ಮನ್ನು ಒಬ್ಬ ಆರೋಪಿಯತ್ತ ಕರೆದೊಯ್ದಿತು ಮತ್ತು ನಂತರದ ತನಿಖೆ ಮತ್ತು ವಿಚಾರಣೆ ಇತರ ಆರೋಪಿಗಳ ಬಂಧನಕ್ಕೆ ಕಾರಣವಾಯಿತು” ಎಂದು ವಡೋದರಾ ಗ್ರಾಮಾಂತರ ಪೊಲೀಸ್ ಎಸ್ ಪಿ ಡಾ. ಸುಧೀರ್ ದೇಸಾಯಿ ಹೇಳಿದರು.

ಜಾವಾ ಅವರ ಮೇಲ್ವಿಚಾರಣೆ ನೋಡಿಕೊಳ್ಳುವ ಹೆಡ್ ಕಾನ್ಸ್ಟೇಬಲ್ ಹರೇಶ್ ಮೋಹನಿಯಾ ಅವರು ‘ಶ್ವಾನ’ದ  ಬಗ್ಗೆ ಮೆಚ್ಚುಗೆಯ ಸುರಿಮಳೆಗೆರೆದಿದ್ದಾರೆ. “ಅದರ (ಜಾವಾ) ನಡವಳಿಕೆಯು ಅಸಾಮಾನ್ಯವಾಗಿತ್ತು ಏಕೆಂದರೆ ಅದು ನಿರಂತರವಾಗಿ ಬೊಗಳುತ್ತಾ ಟೆಂಟ್ ಒಳಗೆ ಓಡಾಡುತ್ತಿತ್ತು. ಅದು ಸ್ಥಳದಲ್ಲಿದ್ದ ಐದು ಡೇರೆಗಳಲ್ಲಿ ಒಂದನ್ನು ಮಾತ್ರ ಆರಿಸಿದಾಗ ನಮ್ಮ ಅನುಮಾನ ಬಲವಾಯಿತು. ಅದನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೊದಲು ನಾನು ಒಂದು ವರ್ಷ ತರಬೇತಿ ನೀಡಿದ್ದೆ. ಜಾವಾ ಶೀಘ್ರವಾಗಿ ಕಲಿಯುತ್ತದೆ ಮತ್ತು ತನಿಖೆಗೆ ಬಂದಾಗ ವಿಶೇಷವಾಗಿ ಚುರುಕಾಗುತ್ತದೆ ಎಂದು ಮೋಹನಿಯಾ ಹೇಳಿದ್ದಾರೆ.

ವಿಚಾರಣೆಗಾಗಿ ಗಿರ್ಜಾರಾಮ್​​ನ್ನು  ಕರ್ಜನ್ ಠಾಣೆಗೆ ಕರೆದೊಯ್ದಾಗ ಪೊಲೀಸರ ಇನ್ನೊಂದು ತಂಡವು ಶಿಬಿರದಲ್ಲಿದ್ದ ಇತರ ಕಾರ್ಮಿಕರನ್ನು ಪ್ರಶ್ನಿಸಿತು. ಜಾರ್ಖಂಡ್‌ನ ನಿವಾಸಿ ದಿಲೀಪ್ ಚೌಧರಿ, 45 ವರ್ಷದ ಜಗ್ಗುಪ್ರಸಾದ್ ಪಾಂಡು (21), ಪ್ರಮೋದ್ ಪಾಂಡು (23), ರಾಮಸುರತ್ ಪಾಂಡು (19) ಮತ್ತು ಅರ್ಜುನ್ ಪಾಂಡೋರ್ (19) ಎಂಬ ಇತರ ಐದು ಶಂಕಿತರನ್ನು ವಿಚಾರಣೆಗೊಳಪಡಿಸಲಾಗಿದೆ. ಇವರೆಲ್ಲರೂ ಉತ್ತರ ಪ್ರದೇಶದವರೇ ಆಗಿದ್ದಾರೆ.

ನಾವು ಅವರನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ ನಂತರ ನಾವು ಅವರಿಂದ ತಪ್ಪೊಪ್ಪಿಗೆಯನ್ನು ಪಡೆದುಕೊಂಡೆವು ಎಂದು ಸ್ಥಳೀಯ ಅಪರಾಧ ವಿಭಾಗದ ಇನ್ಸ್‌ಪೆಕ್ಟರ್ ಡಿ ಬಿ ವಾಲಾ ಹೇಳಿದರು. ರೈಲ್ವೆ ಹಳಿಗಳ ನಿರ್ವಹಣೆಗಾಗಿ ಕಳೆದ 10 ದಿನಗಳಿಂದ ಎಲ್ಲಾ ಆರು ಮಂದಿ ಒಪ್ಪಂದದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಈ ಹಿಂದೆ ಬೇರೆ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ.

ಮಹಿಳೆಯ ಮೇಲೆ ಕಣ್ಣಿಟ್ಟಿದ್ದರು ಆಗಸ್ಟ್ 16 ರ ಸಂಜೆ ಜಮೀನಿನಲ್ಲಿ ಕೆಲಸಕ್ಕೆ ಹೋಗಲು ರೈಲ್ವೆ ಹಳಿ ದಾಟುತ್ತಿದ್ದ ಮಹಿಳೆಯನ್ನು ನೋಡಿದಾಗ ಆರು ಆರೋಪಿಗಳು ಮಹಿಳೆಯನ್ನು ಗುರಿಯಾಗಿಸಲು ಯೋಜಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಸಂಜೆ 6.30 ರ ನಂತರ  ರೈಲ್ವೆ ಹಳಿಗಳ ಕೆಲಸ ಮುಗಿದ ನಂತರ, ಅವರು ಅವಳ ಮೇಲೆ ದಾಳಿ ಮಾಡಿದರು ಎಂದು ಪೊಲೀಸರು ಹೇಳಿದರು. ಎಲ್ಲಾ ಆರು ಪುರುಷರು ಆಕೆಯ ಕೈ ಮತ್ತು ಕಾಲುಗಳನ್ನು ಹಿಡಿದುಕೊಂಡು ಅತ್ಯಾಚಾರವೆಸಗಿದ್ದಾರೆ. ಇದಾದನಂತರ ಆಕೆ ಪೊಲೀಸರಿಗೆ ದೂರು ನೀಡಿದರೆ ಎಂದು ಹೆದರಿ ಆಕೆಯನ್ನು ಕೊಲ್ಲಲು ನಿರ್ಧರಿಸಿದರು. ಆಕೆಯ ದುಪಟ್ಟಾದಿಂದಲೇ ಕತ್ತು ಹಿಸುಕಿ ಆಕೆಯ ಬೆನ್ನುಹುರಿ ಮುರಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:  ಲಕ್ಷ್ಮಣ್ ಅವರಿಂದ ಆಟೋಗ್ರಾಫ್ ಪಡೆಯುತ್ತಿರುವ ಟೀಮ್ ಇಂಡಿಯಾದ ಈ ಆಟಗಾರ ಯಾರೆಂದು ಗುರುತಿಸಬಲ್ಲಿರಾ?

(18-month-old female Dobermann Jawa sniffs out 6 rapists-murderers in Gujarat’s Vadodara in 20 minutes)

Published On - 6:28 pm, Thu, 19 August 21

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ