ಭಾರತೀಯ ವಾಯುಸೇನೆಗೆ ಸೇರಿದ ಯುಎವಿ ರಾಜಸ್ಥಾನದಲ್ಲಿ ಪತನ; ತನಿಖೆಗೆ ಆದೇಶ

| Updated By: Lakshmi Hegde

Updated on: Apr 04, 2022 | 8:20 PM

ಯುಎವಿಯನ್ನು ಸಾಮಾನ್ಯವಾಗಿ ಡ್ರೋನ್​ ಎಂದು ಕರೆಯಲಾಗುತ್ತದೆ. ಇದರಲ್ಲಿ ಪೈಲಟ್​ಗಳು ಇರುವುದಿಲ್ಲ. ಈಗೀಗಂತೂ ಹಲವು ಕಾರಣಕ್ಕೆ ಡ್ರೋನ್​ ಬಳಕೆಯಾಗುತ್ತದೆ.

ಭಾರತೀಯ ವಾಯುಸೇನೆಗೆ ಸೇರಿದ ಯುಎವಿ ರಾಜಸ್ಥಾನದಲ್ಲಿ ಪತನ; ತನಿಖೆಗೆ ಆದೇಶ
ಸಾಂಕೇತಿಕ ಚಿತ್ರ
Follow us on

ಜೈಪುರ: ಭಾರತೀಯ ವಾಯುಸೇನೆಯ ಯುಎವಿ (ಮಾನವರಹಿತ ವೈಮಾನಿಕ ವಾಹನ) ರಾಜಸ್ಥಾನದ ಜೈಸಲ್ಮೇರ್​​ ಎಂಬಲ್ಲಿ ಪತನಗೊಂಡಿದೆ. ಸೇನಾ ಕಾರ್ಯಾಚರಣೆಯ ಒಂದು ಭಾಗವಾಗಿ ಹಾರಾಟ ನಡೆಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಯುಎವಿ ಪತನಕ್ಕೆ ಕಾರಣವಿನ್ನೂ ಸ್ಪಷ್ಟವಾಗಿಲ್ಲ. ಕೂಡಲೇ ತನಿಖೆ ನಡೆಸಲಾಗುತ್ತದೆ. ಅಪಘಾತಕ್ಕೆ ಕಾರಣವನ್ನು ಪತ್ತೆ ಹಚ್ಚಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ಎಎನ್​ಐ ವರದಿ ಮಾಡಿದೆ. 

ಯುಎವಿಯನ್ನು ಸಾಮಾನ್ಯವಾಗಿ ಡ್ರೋನ್​ ಎಂದು ಕರೆಯಲಾಗುತ್ತದೆ. ಇದರಲ್ಲಿ ಪೈಲಟ್​ಗಳು ಇರುವುದಿಲ್ಲ. ಈಗೀಗಂತೂ ಹಲವು ಕಾರಣಕ್ಕೆ ಡ್ರೋನ್​ ಬಳಕೆಯಾಗುತ್ತದೆ. 2019ರಲ್ಲಿ ಡಿಫೆನ್ಸ್​ ರಿಸರ್ಚ್​ ಆ್ಯಂಡ್ ಡೆವಲೆಪ್​ಮೆಂಟ್ ಆರ್ಗನೈಸೇಶನ್​ (ಡಿಆರ್​ಡಿಒ)ಗೆ ಸೇರಿದ ಯುಎವಿಯೊಂದು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯ ಕೃಷಿಭೂಮಿಯೊಂದರಲ್ಲಿ ಪತನಗೊಂಡಿತ್ತು. ಇನ್ನು ನೆರೆರಾಷ್ಟ್ರ ಪಾಕಿಸ್ತಾನದಿಂದ ಗಡಿದಾಟಿ ಬಂದ ಹಲವು ಡ್ರೋನ್​​ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದ ಉದಾಹರಣೆಗಳು ಇವೆ.

ಇದನ್ನೂ ಓದಿ: ಸ್ಟಾರ್ಟ್​ಅಪ್​ ಸಂಸ್ಥಾಪಕನ ಒಂದು ಟ್ವೀಟ್​​ನಿಂದ ಏನೆಲ್ಲ ಆಯಿತು ನೋಡಿ !; ಕೆಟಿಆರ್​, ಡಿ.ಕೆ.ಶಿವಕುಮಾರ್, ಅಶ್ವತ್ಥ್​ನಾರಾಯಣ್​ರಿಂದ ಪ್ರತಿಕ್ರಿಯೆ

Published On - 8:18 pm, Mon, 4 April 22