ಅಜ್ಮೇರ್​ನಲ್ಲಿ ಕುಡಿದ ನಶೆಯಲ್ಲಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಐಎಎಸ್​, ಐಪಿಎಸ್​ ಅಧಿಕಾರಿ ಸಮೇತ ಐವರ ಅಮಾನತು

|

Updated on: Jun 16, 2023 | 8:40 AM

ಅಜ್ಮೇರ್​ನಲ್ಲಿ ಕುಡಿದ ನಶೆಯಲ್ಲಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಐಎಎಸ್​, ಐಪಿಎಸ್ ಅಧಿಕಾರಿ ಸಮೇತ ಐವರನ್ನು ಅಮಾನತುಗೊಳಿಸಲಾಗಿದೆ

ಅಜ್ಮೇರ್​ನಲ್ಲಿ ಕುಡಿದ ನಶೆಯಲ್ಲಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಐಎಎಸ್​, ಐಪಿಎಸ್​ ಅಧಿಕಾರಿ ಸಮೇತ ಐವರ ಅಮಾನತು
ರಾಜಸ್ಥಾನ ಐಎಎಸ್​ ಅಧಿಕಾರಿ
Follow us on

ಅಜ್ಮೇರ್​ನಲ್ಲಿ ಕುಡಿದ ನಶೆಯಲ್ಲಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಐಎಎಸ್​, ಐಪಿಎಸ್ ಅಧಿಕಾರಿ ಸಮೇತ ಐವರನ್ನು ಅಮಾನತುಗೊಳಿಸಲಾಗಿದೆ. ಐಎಎಸ್​ ಅಧಿಕಾರಿ ಗಿರಿಧರ್ ಹಾಗೂ ಐಪಿಎಸ್ ಅಧಿಕಾರಿ ಸುಶೀಲ್ ಕುಮಾರ್ ಬಿಷ್ಣೋಯ್ ಸೇರಿದಂತೆ 8 ಮಂದಿಯನ್ನು ಸರ್ಕಾರ ಅಮಾನತುಗೊಳಿಸಿದೆ. ಹೋಟೆಲ್ ಮಕ್ರನಾ ರಾಜ್ ನಲ್ಲಿ ಈ ಘಟನೆ ನಡೆದಿತ್ತು. ಐಪಿಎಸ್ ಅಧಿಕಾರಿ ಮತ್ತು ಅವರ ಸ್ನೇಹಿತರು ಸೇರಿದಂತೆ ಕೆಲವು ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಜಗಳದ ವೇಳೆ ಇಬ್ಬರೂ ಅಧಿಕಾರಿಗಳು ಪಾನಮತ್ತರಾಗಿದ್ದರು.

ಜೂನ್ 11ರ ರಾತ್ರಿ 2 ಗಂಟೆಯ ವೇಳೆಗೆ ಪ್ರಕರಣ ನಡೆದಿದೆ. ಅದರ ವಿಡಿಯೋ ಮಂಗಳವಾರ ಹೊರಬಿದ್ದಿದೆ. ವೀಡಿಯೋ ಬಹಿರಂಗವಾದ ನಂತರ ಸರ್ಕಾರ ಇಬ್ಬರೂ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.

ಐಎಎಸ್ ಗಿರ್ಧರ್ ಅವರು ಅಜ್ಮೀರ್ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದರು.
ಐಎಎಸ್ ಮತ್ತು ಐಪಿಎಸ್ ಜೊತೆಗೆ ಗೇಗಲ್ ಪೊಲೀಸ್ ಠಾಣೆಯ ಎಎಸ್‌ಐ ರೂಪರಾಮ್, ಕಾನ್‌ಸ್ಟೆಬಲ್ ಗೌತಮ್, ಮುಖೇಶ್ ಯಾದವ್, ಟೋಂಕ್‌ನ ಕಾನ್‌ಸ್ಟೆಬಲ್ ಮುಖೇಶ್ ಜಾಟ್ ಮತ್ತು ಟೋಂಕ್ ಜಿಲ್ಲೆಯ ತಹಸಿಲ್‌ನ ಜೂನಿಯರ್ ಅಸಿಸ್ಟೆಂಟ್ ಹನುಮಾನ್ ಪ್ರಸಾದ್, ಟೋಂಕ್ ಪಟ್ವಾರಿ ನರೇಂದ್ರ ಸಿಂಗ್ ದಹಿಯಾ ಅವರನ್ನು ಅಮಾನತುಗೊಳಿಸಲಾಗಿದೆ.

ಮತ್ತಷ್ಟು ಓದಿ: ಐಪಿಎಸ್-ಐಎಫ್ಎಸ್ ಅಧಿಕಾರಿ ದಂಪತಿ ಕಾನೂನು ಸಮರ; ಪತಿಯ ವಿರುದ್ಧ ಆ್ಯಸಿಡ್ ದಾಳಿ, ಜೀವ ಬೆದರಿಕೆ ದೂರು ದಾಖಲಿಸಿದ ವರ್ತಿಕಾ

ಶಾಂತಿ ಕದಡಿದ್ದಕ್ಕಾಗಿ ಟೋಂಕ್ ನಿವಾಸಿ ಕಾನ್‌ಸ್ಟೆಬಲ್ ಮುಖೇಶ್ ಕುಮಾರ್, ಕಿರಿಯ ಸಹಾಯಕ, ನಾಗೌರ್ ನಿವಾಸಿ ಸುರೇಂದ್ರ ಜಾಟ್, ಸಿಕರ್ ನಿವಾಸಿ ಮುಖೇಶ್ ಜಾಟ್ ಮತ್ತು ಟೋಂಕ್ ಪಟ್ವಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಎಸ್‌ಡಿಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜಾಮೀನು ಪಡೆದಿದ್ದಾರೆ. ಆದರೂ ಪೊಲೀಸರು ಇದನ್ನು ಖಚಿತಪಡಿಸುತ್ತಿಲ್ಲ.

ರಾಜ್ಯ ಸರ್ಕಾರವು ಇತ್ತೀಚೆಗೆ ಐಪಿಎಸ್ ಅಧಿಕಾರಿ ಸುಶೀಲ್ ಬಿಷ್ಣೋಯ್ ಅವರನ್ನು ರಾಜ್ಯದಲ್ಲಿ ಹೊಸದಾಗಿ ರಚನೆಯಾದ ಗಂಗಾಪುರ ಜಿಲ್ಲೆಯ ಒಎಸ್‌ಡಿಯಾಗಿ ನೇಮಿಸಿತ್ತು. ಘಟನೆ ಕುರಿತು ಹೋಟೆಲ್ ಮಾಲೀಕರಿಂದ ಮಾಹಿತಿ ಪಡೆದ ಪೊಲೀಸರು ಕೂಡಲೇ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಪ್ರಕರಣದಲ್ಲಿ ಆರೋಪಿಯಾಗಿರುವ ಬಿಷ್ಣೋಯ್, ಹೋಟೆಲ್ ಉದ್ಯೋಗಿಗಳು ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ