ಜೊತೆಯಲ್ಲಿದ್ದವರಿಗೆ ಕೊರೊನಾ ಪಾಸಿಟಿವ್: ನಟ ರಜನಿಕಾಂತ್​ ಆಸ್ಪತ್ರೆಗೆ ದಾಖಲು

ರಜನಿಕಾಂತ್ ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳೂ ಕಾಣಿಸಿಕೊಂಡಿಲ್ಲ. ಕೊರೊನಾ ಪರೀಕ್ಷೆಯ ವರದಿಯಲ್ಲಿಯೂ ನೆಗೆಟಿವ್ ಬಂದಿದೆ. 

  • TV9 Web Team
  • Published On - 13:28 PM, 25 Dec 2020
ಜೊತೆಯಲ್ಲಿದ್ದವರಿಗೆ ಕೊರೊನಾ ಪಾಸಿಟಿವ್: ನಟ ರಜನಿಕಾಂತ್​ ಆಸ್ಪತ್ರೆಗೆ ದಾಖಲು
ರಜನೀಕಾತ್​

ಹೈದರಾಬಾದ್: ರಕ್ತದ ಒತ್ತಡ ಏರುಪೇರಾದ ಹಿನ್ನೆಲೆಯಲ್ಲಿ ಸೂಪರ್​ಸ್ಟಾರ್ ರಜನಿಕಾಂತ್​ ಅವರನ್ನು ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೂಟಿಂಗ್​ಗಾಗಿ ರಜನಿಕಾಂತ್ ಹತ್ತು ದಿನಗಳಿಂದ ಹೈದರಾಬಾದ್​ನಲ್ಲಿದ್ದರು. ಚಿತ್ರೀಕರಣ ತಂಡದಲ್ಲಿರುವ ಕೆಲವರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು ತಪಾಸಣೆಗೆ ಒಳಪಡಿಸಿದಾಗ ಸೋಂಕು ಇರುವುದು ದೃಢಪಟ್ಟಿತ್ತು.

ಡಿ.22ರಂದು ರಜನಿಕಾಂತ್​ ಅವರಿಗೆ ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಕೊರೊನಾ ಪರೀಕ್ಷೆಯ ವರದಿಯಲ್ಲಿಯೂ ನೆಗೆಟಿವ್ ಬಂದಿತ್ತು. ನಂತರ ಅವರು ಐಸೊಲೇಷನ್​ನಲ್ಲಿದ್ದರು.

ರಜನಿಕಾಂತ್ ಆರೋಗ್ಯ ಪರಿಸ್ಥಿತಿಯನ್ನು ವೈದ್ಯರು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ರಜನಿಕಾಂತ್​ ಅವರ ರಕ್ತದೊತ್ತಡ ಏರುಪೇರಾಗಲು ಕಾರಣ ಏನಿರಬಹುದು ಎಂಬ ಬಗ್ಗೆಯೂ ವೈದ್ಯರು ಹಲವು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ರಕ್ತದೊತ್ತಡ ಸರಿಯಾಗಿ, ಬಳಲಿಕೆಯಿಂದ ಚೇತರಿಸಿಕೊಳ್ಳುವವರೆಗೂ ಡಿಸ್​ಚಾರ್ಜ್​ ಮಾಡುವುದಿಲ್ಲ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಸೂಪರ್​​ಸ್ಟಾರ್ ರಜನಿಕಾಂತ್ ಪಕ್ಷದ ಹೆಸರು ‘ಮಕ್ಕಳ್ ಸೇವೈ ಕಟ್ಚಿ’ ಪಕ್ಷದ ಚಿಹ್ನೆ ಆಟೋರಿಕ್ಷಾ?