ಚೆನ್ನೈ: ತಮಿಳುನಾಡು ರಾಜಕೀಯ ರಂಗಕ್ಕೆ ಎಂಟ್ರಿಕೊಟ್ಟಿರುವ ಸೂಪರ್ಸ್ಟಾರ್ ರಜನಿಕಾಂತ್ ಅವರ ಪಕ್ಷದ ಹೆಸರು ‘ಮಕ್ಕಳ್ ಸೇವೈ ಕಟ್ಚಿ’ ಹಾಗೂ ಪಕ್ಷದ ಚಿಹ್ನೆ ಆಟೋ ಎಂದು ಸುದ್ದಿಮೂಲಗಳು ವರದಿ ಮಾಡಿವೆ.
ಮಕ್ಕಳ್ ಸೇವೈ ಕಟ್ಚಿ ಪಕ್ಷದ ಚಿಹ್ನೆಯಾಗಿ ಆಟೋರಿಕ್ಷಾ ಬಳಕೆಗೆ ಚುನಾವಣಾ ಆಯೋಗ ಅನುಮತಿ ನೀಡಿದೆ. ಅಂದ ಹಾಗೆ, ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ರಜನಿಕಾಂತ್ ಹೆಸರು ಉಲ್ಲೇಖಿಸಲಾಗಿದೆ. ಆದರೆ, ಅರ್ಜಿ ಸಲ್ಲಿಸಿದವರ ಹೆಸರು ಸದ್ಯ ಬಹಿರಂಗವಾಗಿಲ್ಲ.
ಪಕ್ಷದ ಚಿಹ್ನೆಯಾಗಿ ‘ಹಸ್ತ ಮುದ್ರೆ’ ಬೇಕು ಎಂದು ಮಕ್ಕಳ್ ಸೇವೈ ಕಟ್ಚಿ ಪಕ್ಷ ಮನವಿ ಸಲ್ಲಿಸಿತ್ತು. ಆದರೆ, ಈಗಾಗಲೇ ಹಸ್ತ ಚಿಹ್ನೆ ಕಾಂಗ್ರೆಸ್ ಪಕ್ಷದ ಚಿಹ್ನೆಯಾಗಿರುವುದರಿಂದ , ಮಕ್ಕಳ್ ಸೇವೈ ಕಟ್ಚಿ ಪಕ್ಷಕ್ಕೆ ಆಟೋರಿಕ್ಷಾ ಚಿಹ್ನೆ ನೀಡಲಾಗಿದೆ. ಅಂದ ಹಾಗೆ, 1995ರಲ್ಲಿ ರಿಲೀಸ್ ಆದ ಬ್ಲಾಕ್ ಬಸ್ಟರ್ ಸಿನಿಮಾ ಬಾಷಾದಲ್ಲಿ ರಜನಿಕಾಂತ್ ಆಟೋಚಾಲಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ವದಂತಿಗೆ ಸ್ಪಷ್ಟನೆ ನೀಡಿದ ಸೂಪರ್ಸ್ಟಾರ್ ರಜಿನಿಕಾಂತ್
ಒಳ್ಳೆಯದನ್ನು ಯೋಚಿಸೋಣ, ಒಳ್ಳೇದು ಮಾತಾಡೋಣ. ಒಳ್ಳೆಯದನ್ನು ಮಾಡೋಣ, ಒಳ್ಳೆಯದು ಸಂಭವಿಸುತ್ತದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗುವವರೆಗೂ ಕಾಯಬೇಕು ಎಂದು ರಜನಿಕಾಂತ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ
ರಜನಿ ಹೊಸ ಪಕ್ಷ ಸ್ಥಾಪನೆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಅಭಿಮಾನಿಗಳು, ಬೆಂಬಲಿಗರು ಅಧಿಕೃತ ಘೋಷಣೆ ಆಗುವವರೆಗೂ ಕಾಯಬೇಕು ಎಂದು ಅವರು ಹೇಳಿದ್ದಾರೆ.
Published On - 12:07 pm, Tue, 15 December 20