ರಾಜೀವ್ ಗಾಂಧಿ ಗುಂಪು ಹತ್ಯೆಯ ಪಿತಾಮಹ; ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

| Updated By: ಸುಷ್ಮಾ ಚಕ್ರೆ

Updated on: Dec 21, 2021 | 6:43 PM

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 2014ರ ಮೊದಲು, 'ಲಿಂಚಿಂಗ್ (ಹತ್ಯೆ)' ಎಂಬ ಪದವನ್ನು ಪ್ರಾಯೋಗಿಕವಾಗಿ ನಾವು ಯಾರೂ ಕೇಳಿರಲಿಲ್ಲ. ಧನ್ಯವಾದಗಳು ಮೋದಿಜೀ ಎಂದು ಟ್ವೀಟ್ ಮೂಲಕ ಲೇವಡಿ ಮಾಡಿದ್ದರು.

ರಾಜೀವ್ ಗಾಂಧಿ ಗುಂಪು ಹತ್ಯೆಯ ಪಿತಾಮಹ; ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು
ರಾಜೀವ್ ಗಾಂಧಿ
Follow us on

ನವದೆಹಲಿ: ಇತ್ತೀಚೆಗೆ ಹೆಚ್ಚಾಗಿರುವ ಗುಂಪು ಹತ್ಯೆಯ (Mob Lynching) ಕುರಿತು ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ (Rajiv Gandhi) ವಿರುದ್ಧ ಬಿಜೆಪಿ ನಾಯಕರು ದಾಳಿ ನಡೆಸಿದ್ದಾರೆ. ರಾಜೀವ್ ಗಾಂಧಿ ಗುಂಪು ಹತ್ಯೆಯ ಪಿತಾಮಹ ಎಂದು ಬಿಜೆಪಿ ನಾಯಕರು ಜರಿದಿದ್ದಾರೆ. 

ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಇಂದಿರಾ ಗಾಂಧಿಯವರ ಹತ್ಯೆಯ ನಂತರ ಸಿಖ್ಖರ “ಹತ್ಯಾಕಾಂಡ”ವನ್ನು ಕಾಂಗ್ರೆಸ್ ಸಮರ್ಥಿಸುತ್ತಿದೆ ಎಂದು ಆರೋಪಿಸಿದರು. ಅವರು ಆ ವರ್ಷ ರಾಜೀವ್ ಗಾಂಧಿಯವರ ಭಾಷಣದ ಆಯ್ದ ಭಾಗವಾದ ‘ಜಬ್ ಭೀ ಬಡಾ ಪೆಡ್ ಗಿರ್ತಾ ಹೈ, ಧರ್ತಿ ಹಿಲ್ತಿ ಹೈ’ ಅಥವಾ ‘ದೊಡ್ಡ ಮರ ಬಿದ್ದಾಗ ಭೂಮಿ ನಡುಗುತ್ತದೆ’ ಎಂದು ಪೋಸ್ಟ್ ಮಾಡಿದ್ದಾರೆ

1969 ಮತ್ತು 1993ರ ನಡುವೆ ಕಾಂಗ್ರೆಸ್ ಆಡಳಿತದಲ್ಲಿ ನಡೆದ ಗಲಭೆಗಳ ಬಗ್ಗೆಯೂ ಮಾಳವಿಯಾ ಪೋಸ್ಟ್ ಮಾಡಿದ್ದಾರೆ. ಅಹಮದಾಬಾದ್ (1969), ಜಲಗಾಂವ್ (1970), ಮೊರಾದಾಬಾದ್ (1980), ನೆಲ್ಲಿ (1983), ಭಿವಂಡಿ (1984), ದೆಹಲಿ (1984), ಅಹಮದಾಬಾದ್ (1985), ಭಾಗಲ್ಪುರ್ (1989), ಹೈದರಾಬಾದ್ (1990), ಕಾನ್ಪುರ (1992) , ಮುಂಬೈ (1993) ಹೀಗೆ ಕಾಂಗ್ರೆಸ್ ಅವಧಿಯಲ್ಲಿ ಅದೆಷ್ಟೋ ಹತ್ಯಾಕಾಂಡಗಳಾಗಿವೆ. ಇದು ನೆಹರೂ-ಗಾಂಧಿ ಪರಿವಾರದ ಮೇಲ್ವಿಚಾರಣೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಒಂದು ಸಣ್ಣ ಪಟ್ಟಿ ಎಂದು ಅವರು ಬರೆದಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 2014ರ ಮೊದಲು, ‘ಲಿಂಚಿಂಗ್ (ಹತ್ಯೆ)’ ಎಂಬ ಪದವನ್ನು ಪ್ರಾಯೋಗಿಕವಾಗಿ ನಾವು ಯಾರೂ ಕೇಳಿರಲಿಲ್ಲ. ನಿಮ್ಮ ಅವಧಿಯಲ್ಲಿ ಈ ಪದ ಎಲ್ಲರಿಗೂ ಪರಿಚಿತವಾಗಿದೆ. ಧನ್ಯವಾದಗಳು ಮೋದಿಜೀ ಎಂದು ಟ್ವೀಟ್ ಮೂಲಕ ಲೇವಡಿ ಮಾಡಿದ್ದರು. ಆ ಟ್ವೀಟ್​ಗೆ ಪ್ರತಿಕ್ರಿಯೆಯಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ನಡೆದ ಹತ್ಯಾಕಾಂಡಗಳ ಪಟ್ಟಿಯನ್ನು ನೀಡಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಅಮರಿಂದರ್ ಸಿಂಗ್ ದುರಹಂಕಾರಿ ರಾಜ; ಪಂಜಾಬ್ ಲೋಕ ಕಾಂಗ್ರೆಸ್-ಬಿಜೆಪಿ ಮೈತ್ರಿ ಬಗ್ಗೆ ನವಜೋತ್ ಸಿಂಗ್ ಸಿಧು ವಾಗ್ದಾಳಿ

ಗಂಗಾನದಿಯಲ್ಲಿ ಏಕಾಂಗಿಯಾಗಿ ಪವಿತ್ರ ಸ್ನಾನ ಮಾಡುವವರು ಹಿಂದುತ್ವವಾದಿ; ರಾಹುಲ್ ಗಾಂಧಿ ಹೊಸ ವ್ಯಾಖ್ಯಾನ

Published On - 6:40 pm, Tue, 21 December 21