ಪಶ್ಚಿಮ ಬಂಗಾಳದ ಇಂಡಿಯನ್ ಆಯಿಲ್ ಘಟಕದಲ್ಲಿ ಬೆಂಕಿ ಅವಘಡ; ಮೂವರು ಸಾವು, 35ಕ್ಕೂ ಅಧಿಕ ಜನರಿಗೆ ಗಾಯ
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಆವರಣದ ಒಳಗೆ ಇಂದು ಡ್ರಿಲ್ಲಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಸ್ಫೋಟ ಸಂಭವಿಸಿ, ಬೆಂಕಿ ಹೊತ್ತಿಕೊಂಡಿದೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳದ ಹಲ್ದಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಘಟಕದ ಆವರಣದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಮೂವರು ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿ ನಂದಿಸುವ ಪ್ರಯತ್ನ ನಡೆಯುತ್ತಿದೆ.
ಈಗಾಗಲೇ ಈ ಬೆಂಕಿ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಇದೀಗ ಬೆಂಕಿಯನ್ನು ಆರಿಸುವ ಪ್ರಯತ್ನ ಭರದಿಂದ ಸಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ನ ಆಸ್ಪತ್ರೆ ಹಾಗೂ ಕೊಲ್ಕತ್ತಾ ಪೋರ್ಟ್ ಟ್ರಸ್ಟ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮೂಲಗಳ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೋರೇಷನ್ ಆವರಣದ ಒಳಗೆ ಇಂದು ಡ್ರಿಲ್ಲಿಂಗ್ ಕೆಲಸ ನಡೆಯುತ್ತಿತ್ತು. ಈ ವೇಳೆ ಸ್ಫೋಟ ಸಂಭವಿಸಿ, ಬೆಂಕಿ ಹೊತ್ತಿಕೊಂಡಿದೆ.
Deeply anguished by the fire in IOC, Haldia.
Three precious lives were lost and my thoughts are with the bereaved families in this hour of grief. Those injured are being brought to Kolkata through a green corridor. GoWB will extend all assistance to ensure their speedy recovery.
— Mamata Banerjee (@MamataOfficial) December 21, 2021
ಹಲ್ದಿಯಾದಲ್ಲಿ ಉಂಟಾದ ಬೆಂಕಿ ಅವಘಡದಲ್ಲಿ ಮೂವರು ಸಾವನ್ನಪ್ಪಿರುವುದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸಂತಾಪ ಸೂಚಿಸಿದ್ದಾರೆ.
3 dead & more than 40 injured in a blast at Naptha-Hydrogen mixing plant of @IndianOilcl Haldia Refinery #Bengal. 25 injured shifted to kolkata,15 reportedly critical.Refinery was shut since Dec 1st week for maintenance.Maintenance work was on & blast is feared due to flash fire pic.twitter.com/95WKWQsA5f
— Tamal Saha (@Tamal0401) December 21, 2021
ಘಟನೆ ನಡೆದ ಸ್ಥಳಕ್ಕೆ 10 ಅಗ್ನಿಶಾಮಕ ದಳದ ವಾಹನಗಳು ಆಗಮಿಸಿ, ಬೆಂಕಿಯನ್ನು ಆರಿಸುತ್ತಿವೆ. ಇದರಿಂದ ಪರಿಸ್ಥಿತಿ ಕೊಂಚ ನಿಯಂತ್ರಣಕ್ಕೆ ಬಂದಿದೆ. ಈ ಘಟನೆಯ ಬಗ್ಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತನಿಖೆಗೆ ಆದೇಶಿಸಿದೆ. ಹಾಗೇ, ಸ್ಥಳೀಯ ಆಡಳಿತ ಕೂಡ ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಿದೆ.
ಇದನ್ನೂ ಓದಿ: Video: ಬೆಂಕಿ ಹೊತ್ತಿ ಉರಿಯುತ್ತಿದ್ದ ಎತ್ತರದ ಕಟ್ಟಡದ ಕಿಟಕಿಯಿಂದ ಪಾರಾದ ಇಬ್ಬರು; ಭಯಾನಕ ದೃಶ್ಯ ನೋಡಿ ನೆಟ್ಟಿಗರು ಕಂಗಾಲು