Mumbai Fire Attack: ನವಿ ಮುಂಬೈನ ಶೋರೂಂನಲ್ಲಿ ಭಾರಿ ಅಗ್ನಿದುರಂತ; ಸುಟ್ಟು ಕರಕಲಾದ 40 ಬಿಎಂಡಬ್ಲ್ಯೂ ಕಾರುಗಳು, ಕೋಟ್ಯಂತರ ರೂಪಾಯಿ ನಷ್ಟ
ಬೆಂಕಿಯ ತೀವ್ರತೆ ಅತಿಹೆಚ್ಚಾಗಿ ಇದ್ದುದರಿಂದ ಕೇವಲ ಎಂಐಡಿಸಿ ಪ್ರದೇಶದ ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನ ಸಾಕಾಗಲಿಲ್ಲ. ನೆರುಲ್, ವಶಿಯಿಂದಲೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದರು. ಒಟ್ಟು 10 ಫೈರ್ ಫೈಟ್ ಟ್ರಕ್ಗಳನ್ನು ತರಲಾಗಿತ್ತು.
ನವಿ ಮುಂಬೈನ ಟುರ್ಬೆ ಎಂಐಡಿಸಿ ಏರಿಯಾದಲ್ಲಿರುವ ಶೋರೂಮ್ನಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಆಗಿದ್ದು, ಸುಮಾರು 40 ಬಿಎಂಡಬ್ಲ್ಯೂ ಕಾರುಗಳು ಸುಟ್ಟುಕರಕಲಾಗಿವೆ. ಅವಘಡದಲ್ಲಿ ಯಾರೂ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಈ ಶೋರೂಂನಲ್ಲಿಯೇ ಕಾರುಗಳನ್ನು ಪಾರ್ಕ್ ಮಾಡಲಾದ ಗೋಡೌನ್ ಕೂಡ ಇತ್ತು. ಇಂದು ಮುಂಜಾನೆ 5.30ರಹೊತ್ತಿಗೆ ಬೆಂಕಿ ಬಿದ್ದಿದೆ ಎಂದು ಎಂಐಡಿಸಿ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಆರ್.ಬಿ.ಪಾಟೀಲ್ ತಿಳಿಸಿದ್ದಾರೆ.
#BMWcar fire video https://t.co/mH0c4Sl5HQ pic.twitter.com/0I6qfQnIMq
— Indrajeet chaubey (@indrajeet8080) December 8, 2021
ಬೆಂಕಿಯ ತೀವ್ರತೆ ಅತಿಹೆಚ್ಚಾಗಿ ಇದ್ದುದರಿಂದ ಕೇವಲ ಎಂಐಡಿಸಿ ಪ್ರದೇಶದ ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನ ಸಾಕಾಗಲಿಲ್ಲ. ನೆರುಲ್, ವಶಿಯಿಂದಲೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದರು. ಒಟ್ಟು 10 ಫೈರ್ ಫೈಟ್ ಟ್ರಕ್ಗಳನ್ನು ತರಲಾಗಿತ್ತು. ಎಲ್ಲ ಸೇರಿ ಹೋರಾಟ ಮಾಡಿದರೂ ಬೆಂಕಿ ನಂದಿಸಲು 6ಗಂಟೆಗಳ ಕಾಲ ಬೇಕಾಯಿತು ಎಂದು ವರದಿಯಾಗಿದೆ. ಶೋರೂಂ ಮತ್ತು ಗೋಡೌನ್ಗೆ ಬೆಂಕಿ ಬೀಳಲು ನಿಜವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ. ಮೊದಲು ಬೆಂಕಿ ಹೊತ್ತಿದ್ದು ಕಾರು ಶೋರೂಂಗೆ ಸೇರಿದ ಮಳಿಗೆಯಲ್ಲಿ ಪಾರ್ಕ್ ಮಾಡಲಾಗಿದ್ದ ಡಿ-207 ಬಿಎಂಡಬ್ಲ್ಯೂ ಕಾರಿನಲ್ಲಿ. ಅದು ಒಮ್ಮೆಲೇ ಪಸರಿಸುತ್ತ ಹೋಗಿ ಸುಮಾರು 40 ಕಾರುಗಳು ಧಗಧಗನೆ ಹೊತ್ತಿ ಉರಿದಿವೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಇದನ್ನೂ ಓದಿ: ಒಮಿಕ್ರಾನ್ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ತೀವ್ರವಾಗಿಲ್ಲ, ಈಗಿರುವ ಕೊವಿಡ್ ಲಸಿಕೆಗಳು ಇದಕ್ಕೆ ಸಾಕು: ವಿಶ್ವ ಆರೋಗ್ಯ ಸಂಸ್ಥೆ
Published On - 1:01 pm, Wed, 8 December 21