Omicron ಒಮಿಕ್ರಾನ್ 3 ಪಟ್ಟು ಹೆಚ್ಚು ಸಾಂಕ್ರಾಮಿಕ, ವಾರ್ ರೂಮ್‌ಗಳನ್ನು ಸಕ್ರಿಯಗೊಳಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್​​ ಸಹಿ ಮಾಡಿರುವ ಪತ್ರದಲ್ಲಿ ಇನ್ನೂ ಹೆಚ್ಚಿನ ದೂರದೃಷ್ಟಿ, ದತ್ತಾಂಶ ವಿಶ್ಲೇಷಣೆ ಮತ್ತು ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳಲು ಕರೆ ನೀಡಲಾಗಿದೆ.

Omicron ಒಮಿಕ್ರಾನ್ 3 ಪಟ್ಟು ಹೆಚ್ಚು ಸಾಂಕ್ರಾಮಿಕ, ವಾರ್ ರೂಮ್‌ಗಳನ್ನು ಸಕ್ರಿಯಗೊಳಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ
ರಾಜೇಶ್ ಭೂಷಣ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 21, 2021 | 8:49 PM

ದೆಹಲಿ: ಕೊರೊನಾವೈರಸ್ (Coronavirus) ಡೆಲ್ಟಾ ರೂಪಾಂತರಕ್ಕಿಂತ (Delta variant) ಒಮಿಕ್ರಾನ್ (Omicron) ಮೂರು ಪಟ್ಟು ಸಾಂಕ್ರಾಮಿಕವಾಗಿದೆ ಮತ್ತು ಅದನ್ನು ನಿಯಂತ್ರಿಸಲು ವಾರ್ ರೂಮ್‌ಗಳನ್ನು ಸಕ್ರಿಯಗೊಳಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರ ಬರೆದು ತಿಳಿಸಿದೆ. ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ (Health Secretary Rajesh Bhushan) ಸಹಿ ಮಾಡಿರುವ ಪತ್ರದಲ್ಲಿ “ಇನ್ನೂ ಹೆಚ್ಚಿನ ದೂರದೃಷ್ಟಿ, ದತ್ತಾಂಶ ವಿಶ್ಲೇಷಣೆ ಮತ್ತು ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳಲು”ಗೆ ಕರೆ ನೀಡಲಾಗಿದೆ.ಮೂಲ ಮಾರ್ಗಸೂಚಿಗಳೊಂದಿಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು “ನಿಯಂತ್ರಣ ಕ್ರಮಗಳು, ಮಿತಿಗಳನ್ನು ತಲುಪುವ ಮೊದಲೇ ನಿರ್ಬಂಧಗಳನ್ನು” ತೆಗೆದುಕೊಳ್ಳಬೇಕು ಎಂದು ಕೇಂದ್ರ ಹೇಳಿದೆ. ಕಳೆದ ಒಂದು ವಾರದಲ್ಲಿ ಶೇಕಡಾ 10 ಅಥವಾ ಅದಕ್ಕಿಂತ ಹೆಚ್ಚಿನ ಪರೀಕ್ಷಾ ಧನಾತ್ಮಕತೆ ಅಥವಾ ಆಮ್ಲಜನಕ ಬೆಂಬಲಿತ, ICU ಹಾಸಿಗೆಗಳ ಮೇಲೆ ಶೇಕಡಾ 40 ರಷ್ಟು ರೋಗಿಗಳು ಭರ್ತಿಯಾಗಿದ್ದಾರೆ ಎಂದು ಕೇಂದ್ರ ಹೇಳಿದೆ. ಒಮಿಕ್ರಾನ್ ಜೊತೆಗೆ ಡೆಲ್ಟಾ ರೂಪಾಂತರವು ದೇಶದ ವಿವಿಧ ಭಾಗಗಳಲ್ಲಿ “ಇನ್ನೂ ಇದೆ” ಎಂದು ಪತ್ರದಲ್ಲಿ ಬರೆದಿದೆ. ಆದ್ದರಿಂದ ಸ್ಥಳೀಯ ಮತ್ತು ಜಿಲ್ಲಾ ಮಟ್ಟದಲ್ಲಿ ಇನ್ನೂ ಹೆಚ್ಚಿನ ದೂರದೃಷ್ಟಿ, ದತ್ತಾಂಶ ವಿಶ್ಲೇಷಣೆ, ಕ್ರಿಯಾತ್ಮಕ ನಿರ್ಧಾರ ತೆಗೆದುಕೊಳ್ಳುವುದು ಮತ್ತು ಕಟ್ಟುನಿಟ್ಟಾದ ಮತ್ತು ತ್ವರಿತ ನಿಯಂತ್ರಣ ಕ್ರಮದ ಅಗತ್ಯವಿದೆ. ರಾಜ್ಯ/ಕೇಂದ್ರಾಡಳಿತ ಪ್ರದೇಶ ಮತ್ತು ಜಿಲ್ಲಾ ಮಟ್ಟದಲ್ಲಿ ನಿರ್ಧಾರ ಕೈಗೊಳ್ಳುವುದು ಅತ್ಯಂತ ತ್ವರಿತವಾಗಿ ಮತ್ತು  ಕೇಂದ್ರೀಕೃತವಾಗಿರಬೇಕು. ಈ ಮಿತಿಗಳನ್ನು ತಲುಪುವ ಮೊದಲೇ ನಿಯಂತ್ರಣ ಕ್ರಮಗಳು ಮತ್ತು ನಿರ್ಬಂಧಗಳನ್ನು ತೆಗೆದುಕೊಳ್ಳಬೇಕು ಎಂದು ಕೇಂದ್ರ ಹೇಳಿದೆ.

ಪತ್ರವು ರಾತ್ರಿ ಕರ್ಫ್ಯೂ, ದೊಡ್ಡ ಕೂಟಗಳ ನಿಯಂತ್ರಣ, ಕಚೇರಿಗಳು ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಸಂಖ್ಯೆಯಲ್ಲಿ ನಿರ್ಬಂಧಗಳನ್ನು ಒಳಗೊಂಡಿರುವ ಕಂಟೇನ್ ಮೆಂಟ್ ಕ್ರಮಗಳನ್ನು ಪಟ್ಟಿಮಾಡಿದೆ. ಆಸ್ಪತ್ರೆಯ ಹಾಸಿಗೆಗಳು, ಆಂಬ್ಯುಲೆನ್ಸ್‌ಗಳು, ಆಮ್ಲಜನಕ ಉಪಕರಣಗಳು ಮತ್ತು ಔಷಧಗಳು ಸೇರಿದಂತೆ ವೈದ್ಯಕೀಯ ಮೂಲಸೌಕರ್ಯವನ್ನು ಹೆಚ್ಚಿಸಲು ತುರ್ತು ನಿಧಿಯನ್ನು ಬಳಸಬೇಕೆಂದು ಸೂಚಿಸಲಾಗಿದೆ.

ಪರೀಕ್ಷೆ ಮತ್ತು ಕಣ್ಗಾವಲು ವಿಧಾನಗಳ ಭಾಗವಾಗಿ, ಕೇಂದ್ರವು ಮನೆ-ಮನೆಯ ಪ್ರಕರಣಗಳ ಹುಡುಕಾಟಗಳು, ಎಲ್ಲಾ ಕೊವಿಡ್ ಪಾಸಿಟಿವ್ ವ್ಯಕ್ತಿಗಳ ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಒಮಿಕ್ರಾನ್‌ಗಾಗಿ ಕ್ಲಸ್ಟರ್ ಮಾದರಿಗಳ ಪರೀಕ್ಷೆಯನ್ನು ಉಲ್ಲೇಖಿಸಿದೆ. 100 ರಷ್ಟು ವ್ಯಾಕ್ಸಿನೇಷನ್ ವ್ಯಾಪ್ತಿಯನ್ನು ವೇಗಗೊಳಿಸಲು ರಾಜ್ಯಗಳನ್ನು ಕೇಳಲಾಗಿದೆ.

ಭಾರತದ ಕೊವಿಡ್ ವ್ಯಾಕ್ಸಿನೇಷನ್ ವ್ಯಾಪ್ತಿ ಮಂಗಳವಾರ 138.89 ಕೋಟಿ (138,89,29,333) ದಾಟಿದೆ. ಇಂದು ಸಂಜೆ 7 ಗಂಟೆಯವರೆಗೆ 51 ಲಕ್ಷಕ್ಕೂ ಹೆಚ್ಚು (51,30,949) ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ

ಇದನ್ನೂ ಓದಿ: Omicron: ಡೆಲ್ಟಾಗಿಂತ ಒಮಿಕ್ರಾನ್ ವೇಗವಾಗಿ ಹರಡುತ್ತದೆ, ಲಸಿಕೆ ಪಡೆದವರಿಗೂ ತಗಲುತ್ತದೆ; WHO ವಿಜ್ಞಾನಿ

Published On - 8:45 pm, Tue, 21 December 21