Rajnath Singh: ನಾನು ಸೇನೆಗೆ ಸೇರಬೇಕೆಂದು ಪರೀಕ್ಷೆಯನ್ನೂ ಬರೆದಿದ್ದೆ, ಆದರೆ…; ಹಳೆಯ ನೆನಪು ಬಿಚ್ಚಿಟ್ಟ ರಾಜನಾಥ್ ಸಿಂಗ್

| Updated By: ಸುಷ್ಮಾ ಚಕ್ರೆ

Updated on: Aug 19, 2022 | 2:21 PM

ನಾನು ಸಹ ಸೈನ್ಯಕ್ಕೆ ಸೇರಲು ಬಯಸಿದ್ದೆ. ಅದಕ್ಕಾಗಿ ಒಮ್ಮೆ ನಾನು ಶಾರ್ಟ್ ಸರ್ವಿಸ್ ಕಮಿಷನ್ ಪರೀಕ್ಷೆಗೆ ಹಾಜರಾಗಿದ್ದೆ. ಆದರೆ, ನನ್ನ ತಂದೆಯ ಸಾವಿನಿಂದ ನಾನು ಸೈನ್ಯಕ್ಕೆ ಸೇರಲು ಸಾಧ್ಯವಾಗಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

Rajnath Singh: ನಾನು ಸೇನೆಗೆ ಸೇರಬೇಕೆಂದು ಪರೀಕ್ಷೆಯನ್ನೂ ಬರೆದಿದ್ದೆ, ಆದರೆ...; ಹಳೆಯ ನೆನಪು ಬಿಚ್ಚಿಟ್ಟ ರಾಜನಾಥ್ ಸಿಂಗ್
ಮಣಿಪುರದಲ್ಲಿ ಸೈನಿಕರೊಂದಿಗೆ ರಾಜನಾಥ್ ಸಿಂಗ್
Follow us on

ಮಣಿಪುರ: ನಾನು ಭಾರತೀಯ ಸೇನೆಗೆ (Indian Army) ಸೇರಲು ಬಯಸಿದ್ದೆ. ಅದಕ್ಕಾಗಿ ಪರೀಕ್ಷೆಯನ್ನೂ ಬರೆದಿದ್ದೆ. ಆದರೆ, ನಮ್ಮ ಕುಟುಂಬದಲ್ಲಿನ ಸಮಸ್ಯೆಗಳಿಂದಾಗಿ ಸೇನೆಗೆ ಸೇರಲು ಸಾಧ್ಯವಾಗಲಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh)  ಹೇಳಿದ್ದಾರೆ. ಮಣಿಪುರದ ಇಂಫಾಲ್‌ನಲ್ಲಿ ಅಸ್ಸಾಂ ರೈಫಲ್ಸ್ ಮತ್ತು ಭಾರತೀಯ ಸೇನೆಯ 57ನೇ ಮೌಂಟೇನ್ ವಿಭಾಗದ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಸೇನಾ ಪಡೆಗಳಿಗೆ ಪ್ರವೇಶಿಸಲು ತಾವು ಯಾವ ರೀತಿಯಲ್ಲಿ ಪರೀಕ್ಷೆ ಬರೆದರೆಂಬ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ನಿಮ್ಮೊಂದಿಗೆ ನಾನು ನನ್ನ ಬಾಲ್ಯದ ಕತೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಾನು ಸಹ ಸೈನ್ಯಕ್ಕೆ ಸೇರಲು ಬಯಸಿದ್ದೆ. ಅದಕ್ಕಾಗಿ ಒಮ್ಮೆ ನಾನು ಶಾರ್ಟ್ ಸರ್ವಿಸ್ ಕಮಿಷನ್ ಪರೀಕ್ಷೆಗೆ ಹಾಜರಾಗಿದ್ದೆ. ನಾನು ಲಿಖಿತ ಪರೀಕ್ಷೆಯನ್ನು ಬರೆದಿದ್ದೇನೆ. ಆದರೆ, ನನ್ನ ಕುಟುಂಬದಲ್ಲಿನ ಕೆಲವು ಸಮಸ್ಯೆಗಳು, ನನ್ನ ತಂದೆಯ ಸಾವಿನಿಂದ ನಾನು ಸೈನ್ಯಕ್ಕೆ ಸೇರಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Rajnath Singh: ಭಾರತದ ಒಂದಿಂಚು ಜಾಗವನ್ನೂ ಚೀನಾಗೆ ಕಬಳಿಸಲು ಬಿಡುವುದಿಲ್ಲ; ರಕ್ಷಣಾ ಸಚಿವ ರಾಜನಾಥ್ ಸಿಂಗ್

“ನೀವು ಮಗುವಿಗೆ ಸೈನ್ಯದ ಸಮವಸ್ತ್ರವನ್ನು ನೀಡಿದರೆ, ಅವನ ವ್ಯಕ್ತಿತ್ವವೇ ಬದಲಾಗುತ್ತದೆ. ಈ ನಮ್ಮ ಸೇನೆಯ ಸಮವಸ್ತ್ರದಲ್ಲಿ ಒಂದು ವರ್ಚಸ್ಸು ಇದೆ” ಎಂದು ರಾಜನಾಥ್ ಸಿಂಗ್ ಹೇಳಿದರು.

ಮಂತ್ರಿಪುಖ್ರಿಯಲ್ಲಿರುವ ಅಸ್ಸಾಂ ರೈಫಲ್ಸ್ (ದಕ್ಷಿಣ) ಇನ್ಸ್‌ಪೆಕ್ಟರ್ ಜನರಲ್‌ನ ಪ್ರಧಾನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಅವರೊಂದಿಗೆ ಸಚಿವ ರಾಜನಾಥ್ ಸಿಂಗ್ ಸೈನಿಕರನ್ನು ಭೇಟಿ ಮಾಡಿದರು. ಭಾರತ-ಚೀನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭದ್ರತಾ ಪಡೆಗಳು ತೋರಿದ ಶೌರ್ಯವನ್ನು ರಾಜನಾಥ್ ಸಿಂಗ್ ನೆನಪಿಸಿಕೊಂಡರು.

“ಭಾರತ-ಚೀನಾ ಬಿಕ್ಕಟ್ಟು ನಡೆಯುತ್ತಿರುವಾಗ ಅಂದಿನ ಸೇನಾ ಮುಖ್ಯಸ್ಥರು ನಮ್ಮ ಯೋಧರು ತೋರಿದ ಶೌರ್ಯ ಮತ್ತು ಧೈರ್ಯವನ್ನು ತಿಳಿಸಿದ್ದಾರೆ. ನಮ್ಮ ದೇಶವು ಯಾವಾಗಲೂ ನಿಮಗೆ ಋಣಿಯಾಗಿದೆ. ಸೇನಾ ಸಿಬ್ಬಂದಿಯನ್ನು ಭೇಟಿಯಾಗುವುದು ನನಗೆ ಹೆಮ್ಮೆಯ ಭಾವನೆಯನ್ನು ನೀಡುತ್ತದೆ” ಎಂದು ರಾಜನಾಥ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kargil Vijay Diwas ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಜನಾಥ್ ಸಿಂಗ್

“ವೈದ್ಯರು, ಇಂಜಿನಿಯರ್‌ಗಳು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳು ಒಂದಲ್ಲ ಒಂದು ರೀತಿಯಲ್ಲಿ ದೇಶಕ್ಕೆ ಕೊಡುಗೆ ನೀಡುತ್ತಿದ್ದರೂ, ನಿಮ್ಮ ವೃತ್ತಿಯು ಉದ್ಯೋಗಕ್ಕಿಂತಲೂ ಹೆಚ್ಚಿನದು ಮತ್ತು ಸೇವೆಗಿಂತ ಹೆಚ್ಚಿನದು” ಎಂದು ರಾಜನಾಥ್ ಸಿಂಗ್ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ