ಪ್ರಧಾನಿ ಮೋದಿಗೆ ಪ್ರತಿ ವರ್ಷವೂ ರಾಖಿ ಕಟ್ಟುವ ಪಾಕಿಸ್ತಾನದ ಸಹೋದರಿ ಖಮರ್ ಶೇಖ್ ಯಾರು?

ಪ್ರತಿ ವರ್ಷದಂತೆ ಈ ವರ್ಷವೂ ದೇಶಾದ್ಯಂತ ಸಹೋದರಿಯರು ರಕ್ಷಾಬಂಧನಕ್ಕೆ ತಯಾರಿ ನಡೆಸುತ್ತಿದ್ದಾರೆ. ಕೆಲವರು ತಮ್ಮ ರಾಖಿಯನ್ನು ಆನ್‌ಲೈನ್‌ನಲ್ಲಿ ಕಳುಹಿಸಿದ್ದರೆ, ಕೆಲವರು ತಮ್ಮ ಸಹೋದರನಿಗೆ ಈ ರಕ್ಷಾ ದಾರವನ್ನು ಕಟ್ಟಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನಕ್ಕೆ ಸೇರಿದ ಸಹೋದರಿಯೂ ಇದ್ದಾರೆ. ಆದಾಗ್ಯೂ, ಮದುವೆಯ ನಂತರ, ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ನೆಲೆಸಿದ್ದಾರೆ. ಅವರೇ ಖಮರ್ ಶೇಖ್.

ಪ್ರಧಾನಿ ಮೋದಿಗೆ ಪ್ರತಿ ವರ್ಷವೂ ರಾಖಿ ಕಟ್ಟುವ ಪಾಕಿಸ್ತಾನದ ಸಹೋದರಿ ಖಮರ್ ಶೇಖ್ ಯಾರು?
ಖಮರ್ ಶೇಖ್

Updated on: Aug 07, 2025 | 12:00 PM

ನವದೆಹಲಿ, ಆಗಸ್ಟ್​ 07: ರಕ್ಷಾ ಬಂಧನ(Raksha Bandhan)ವನ್ನು ಎಲ್ಲೆಡೆ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನದಂದು ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟಿ ಸದಾ ತನ್ನನ್ನು ರಕ್ಷಣೆ ಮಾಡುವಂತೆ ಕೇಳಿಕೊಳ್ಳುತ್ತಾರೆ. ಪಾಕಿಸ್ತಾನದಲ್ಲಿ ಜನಿಸಿದ ಖಮರ್ ಶೇಖ್​ ಎಂಬ ಮಹಿಳೆ ಕಳೆದ 30 ವರ್ಷಗಳಿಂದ ರಕ್ಷಾ ಬಂಧನದ ದಿನ ಪ್ರಧಾನಿ ಮೋದಿಗೆ ರಾಖಿ ಕಟ್ಟುತ್ತಿದ್ದಾರೆ. ಹಾಗಾದರೆ ಈ ಖಮರ್ ಶೇಖರ್ ಯಾರು? ಎಂಬುದನ್ನು ತಿಳಿಯೋಣ.

ಪ್ರಧಾನಿ ಮೋದಿ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಿಲ್ಲದ ದಿನದಿಂದ ಕೂಡ ಖಮರ್ ಶೇಖ್ ಮೋದಿಗೆ ರಾಖಿ ಕಟ್ಟುತ್ತಿದ್ದು, ಈ ಸಂಬಂಧವನ್ನು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿದ್ದಾರೆ. ಖಮರ್ ಶೇಖ್ ರಕ್ಷಾ ಬಂಧನದ ನಿಮಿತ್ತ ದೆಹಲಿಗೆ ಆಗಮಿಸಿದ್ದು, ಪ್ರಧಾನಿ ಮೋದಿಗೆ ರಾಖಿ ಕಟ್ಟಲಿದ್ದಾರೆ.

ಪ್ರತಿ ರಕ್ಷಾ ಬಂಧನದಂದು ತಾವು ಸ್ವತಃ ಸಿದ್ಧಪಡಿಸಿದ ರಾಖಿಯನ್ನೇ ಅವರಿಗೆ ಕಟ್ಟುತ್ತಾ ಬಂದಿದ್ದೇನೆ, ಎಂದೂ ಮಾರುಕಟ್ಟೆಯಿಂದ ರಾಖಿ ಖರೀದಿಸಿಲ್ಲ. ಪ್ರತಿ ವರ್ಷ ರಕ್ಷಾ ಬಂಧನಕ್ಕೂ ಮುನ್ನ ನಾನು ಒಂದಲ್ಲ ಹಲವು ರಾಖಿಗಳನ್ನು ತಯಾರಿಸುತ್ತೇನೆ ಮತ್ತು ನನಗೆ ಹೆಚ್ಚು ಇಷ್ಟವಾದ ರಾಖಿಯನ್ನು ನರೇಂದ್ರ ಮೋದಿ ಅವರಿಗೆ ಕಟ್ಟುತ್ತೇನೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: Raksha Bandhan 2025: ರಾಖಿ ಕಟ್ಟುವಾಗ ಮೂರು ಗಂಟು ಹಾಕೋದು ಏಕೆ ಗೊತ್ತಾ?

ಖಮರ್ ಶೇಖ್ ಯಾರು?
ಖಮರ್ ಶೇಖ್ ಪಾಕಿಸ್ತಾನದ ಮಹಿಳೆ ಮತ್ತು ಭಾರತದ ಸೊಸೆ. ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಖಮರ್ 1981 ರಲ್ಲಿ ಮೊಹ್ಸಿನ್ ಶೇಖ್ ಅವರನ್ನು ವಿವಾಹವಾದರು. ಮೊಹ್ಸಿನ್ ಅವರನ್ನು ವಿವಾಹವಾದ ನಂತರ, ಅವರು ಭಾರತಕ್ಕೆ ಬಂದು ಅಹಮದಾಬಾದ್‌ನಲ್ಲಿ ನೆಲೆಸಿದರು. 1990 ರಲ್ಲಿ ಅಂದಿನ ಗುಜರಾತ್ ರಾಜ್ಯಪಾಲ ದಿವಂಗತ ಡಾ. ಸ್ವರೂಪ್ ಸಿಂಗ್ ಅವರ ಮೂಲಕ ನರೇಂದ್ರ ಮೋದಿಯವರನ್ನು ಮೊದಲ ಬಾರಿಗೆ ಭೇಟಿಯಾದೆ ಎಂದು ಖಮರ್ ಹೇಳಿಕೊಂಡಿದ್ದಾರೆ.

ಖಮರ್ ಶೇಖ್ ಮಾತು

ವಿಮಾನ ನಿಲ್ದಾಣದಲ್ಲಿ ನರೇಂದ್ರ ಮೋದಿಯವರನ್ನು ಭೇಟಿಯಾದೆ ಎಂದು ಕಮರ್ ಹೇಳುತ್ತಾರೆ. ಸಿಂಗ್ ಅವರು ತಮ್ಮನ್ನು ತಮ್ಮ ಮಗಳಂತೆ ಪರಿಗಣಿಸುವುದಾಗಿ ಮೋದಿಗೆ ಹೇಳಿದಾಗ, ಅದಕ್ಕೆ ಮೋದಿಯವರು ಆಕೆ ಹಾಗಾದರೆ ನನಗೆ ಸೋದರಿ ಎಂದು ಹೇಳಿದ್ದರು. ಇದರ ನಂತರ, ಕಮರ್ ರಕ್ಷಾ ಬಂಧನ ಹಬ್ಬದಂದು ಮೋದಿಗೆ ರಾಖಿ ಕಟ್ಟಲು ಪ್ರಾರಂಭಿಸಿದರು, ಇದು ಎಂದಿನಂತೆ ಮುಂದುವರಿಯುತ್ತಿದೆ.

ರಾಖಿ ಹೇಗಿದೆ ನೋಡಿ

ನರೇಂದ್ರ ಮೋದಿಯವರೊಂದಿಗಿನ ಆರಂಭಿಕ ಭೇಟಿಯ ನಂತರ, ಅವರು ಗುಜರಾತ್ ಮುಖ್ಯಮಂತ್ರಿಯಾಗಬೇಕೆಂದು ಪ್ರಾರ್ಥಿಸಿದ್ದೆ ಮತ್ತು ಅಂತಿಮವಾಗಿ ತನ್ನ ಆಸೆ ಈಡೇರಿತ್ತು ಎಂದು ಖಮರ್ ಹೇಳುತ್ತಾರೆ.ಮೋದಿ ಮುಖ್ಯಮಂತ್ರಿಯಾಗುವ ಆಸೆ ಈಡೇರಿದಾಗ, ತನ್ನ ಸಹೋದರ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಬೇಕೆಂದು ಪ್ರಾರ್ಥಿಸಲು ಪ್ರಾರಂಭಿಸಿದೆ. ಆ ಆಸೆಯೂ ಕೂಡ ಈಡೇರಿತು ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ