ತಿರುಪತಿ ಲಡ್ಡು ವಿವಾದ ಹಿನ್ನೆಲೆ ಪ್ರಸಾದದ ಕುರಿತು ಮಹತ್ವದ ನಿರ್ಧಾರ ತೆಗೆದುಕೊಂಡ ರಾಮ ಮಂದಿರ
ವಿಶ್ವವಿಖ್ಯಾತ ತಿರುಪತಿ ಲಡ್ಡು ಪರಿಶುದ್ಧತೆಯ ಬಗ್ಗೆ ಭಕ್ತರಲ್ಲಿ ಹೆಚ್ಚುತ್ತಿರುವ ಕಳವಳದ ನಡುವೆ ಅಯೋಧ್ಯೆಯ ರಾಮ ಮಂದಿರವು ಪ್ರಸಾದದ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದೆ.
ವಿಶ್ವವಿಖ್ಯಾತ ತಿರುಪತಿ ಲಡ್ಡು ಪರಿಶುದ್ಧತೆಯ ಬಗ್ಗೆ ಭಕ್ತರಲ್ಲಿ ಹೆಚ್ಚುತ್ತಿರುವ ಕಳವಳದ ನಡುವೆ ಅಯೋಧ್ಯೆಯ ರಾಮ ಮಂದಿರವು ಪ್ರಸಾದದ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದೆ. ಹೊರಗಡೆ ಏಜೆನ್ಸಿಗಳಿಂದ ತಯಾರಾಗುವ ಪ್ರಸಾದವನ್ನು ನಿಷೇಧಿಸಿದೆ. ನಿಷೇಧಿಸಿದೆ. ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಲಡ್ಡುಗಳನ್ನು ತಯಾರಿಸಲು ಕಲಬೆರಕೆ ತುಪ್ಪವನ್ನು ಬಳಸಲಾಗುತ್ತಿದೆ ಎಂಬ ಆರೋಪದ ನಡುವೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ತಿರುಪತಿಯಲ್ಲಿ ದೇವಾಲಯದ ಅಧಿಕಾರಿಗಳು ಪ್ರಾಯಶ್ಚಿತ್ತ ವಿಧಿಗಳನ್ನು ನಡೆಸಿದ್ದರು.
ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಮಾತನಾಡಿ, ದೇಶಾದ್ಯಂತ ಮಾರಾಟವಾಗುತ್ತಿರುವ ತುಪ್ಪದ ಶುದ್ಧತೆಯನ್ನು ಪ್ರಶ್ನಿಸಿದ್ದಾರೆ. ದೇವಾಲಯದ ಅರ್ಚಕರ ಮೇಲ್ವಿಚಾರಣೆಯಲ್ಲಿ ಮಾತ್ರ ಪ್ರಸಾದ ತಯಾರಿಸಬೇಕು ಎಂದು ಹೇಳಿದ್ದಾರೆ.
ಎಲ್ಲಾ ಪ್ರಮುಖ ದೇವಾಲಯಗಳು ಹಾಗೂ ಮಠಗಳಲ್ಲಿ ಹೊರಗಡೆ ಯಾವುದೇ ಸಂಸ್ಥೆಯು ಸಿದ್ಧಪಡಿಸಿರುವ ಪ್ರಸಾದದ ಮೇಲೆ ಸಂಪೂರ್ಣ ನಿಷೇಧ ಹೇರಲಾಗುವುದು ಎಂದರು. ದೇವರಿಗೆ ಪ್ರಸಾದವನ್ನು ದೇವಾಲಯದ ಅರ್ಚಕರ ಮೇಲ್ವಿಚಾರಣೆಯಲ್ಲಿ ತಯಾರಿಸಬೇಕು ಮತ್ತು ಅಂತಹ ಪ್ರಸಾದವನ್ನು ಮಾತ್ರ ದೇವರಿಗೆ ಅರ್ಪಿಸಬೇಕು.
ಮತ್ತಷ್ಟು ಓದಿ: ತಿರುಪತಿ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು, ತನಿಖೆ ನಡೆಸಲು 9 ಸದಸ್ಯರ ತಂಡ ರಚಿಸಿದ ಆಂಧ್ರ ಸರ್ಕಾರ
ತಿರುಪತಿ ಬಾಲಾಜಿಯ ಪ್ರಸಾದದಲ್ಲಿ ಕೊಬ್ಬು ಮತ್ತು ಮಾಂಸವನ್ನು ಬಳಸಲಾಗಿದೆ ಎಂಬ ಆರೋಪದ ವಿವಾದವು ದೇಶಾದ್ಯಂತ ಉಲ್ಬಣಗೊಳ್ಳುತ್ತಿದೆ.
ನೈವೇದ್ಯದಲ್ಲಿ ಮಾಂಸ ಮತ್ತು ಕೊಬ್ಬನ್ನು ಬೆರೆಸಿ ದೇಶದ ಮಠ-ಮಂದಿರಗಳನ್ನು ಅಪವಿತ್ರಗೊಳಿಸುವ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಆರೋಪಿಸಿ, ರಾಷ್ಟ್ರವ್ಯಾಪಿ ಮಾರಾಟವಾಗುತ್ತಿರುವ ತೈಲ ಮತ್ತು ತುಪ್ಪದ ಶುದ್ಧತೆಯನ್ನು ಪರಿಶೀಲಿಸುವ ಅಗತ್ಯವನ್ನು ಅವರು ಪುನರುಚ್ಚರಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ