ದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿದೆ. ರಾಮಮಂದಿರದ ಅಡಿಪಾಯ ನಿರ್ಮಿಸುವ ಕೆಲಸವನ್ನು ರೋಲರ್ ಕಂಪಾಕ್ಟ್ ಕಾಂಕ್ರೀಟ್ ತಂತ್ರ ಬಳಸಿ ಮಾಡಲಾಗುವುದು. ಹಾಗೇ, ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಎಲ್ಲ ಕೆಲಸಗಾರರ ಸುರಕ್ಷತೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದೂ ಟ್ರಸ್ಟ್ ತಿಳಿಸಿದೆ.
ರಾಮಮಂದಿರ ನಿರ್ಮಾಣಕ್ಕೆ ಯಾವುದೇ ವಿಘ್ನಗಳೂ ಇಲ್ಲ. ಅಡೆತಡೆಯಿಲ್ಲದೆ ಕೆಲಸ ಮುಂದುವರಿದಿದೆ. ಈಗಾಗೇ ಸುಮಾರು 1,20,000 ಘನ ಮೀಟರ್ ವಿಸ್ತಾರದ ಪ್ರದೇಶದಲ್ಲಿ ಪುಡಿಕಲ್ಲುಗಳನ್ನು ತೆಗೆದು, ಸ್ವಚ್ಛಗೊಳಿಸಲಾಗಿದೆ. ಆರ್ಸಿಸಿಯ ಒಂದು ಪದರ ಹಾಕಲು 4-5ದಿನ ತೆಗೆದುಕೊಳ್ಳುತ್ತದೆ. ಸದ್ಯ ಸ್ಥಳದಲ್ಲಿ ಹಲವು ಇಂಜಿನಿಯರ್ಗಳು, ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರೆಲ್ಲ ಸುರಕ್ಷಿತವಾಗಿದ್ದಾರೆ. ಆರೋಗ್ಯವಾಗಿಯೂ ಇದ್ದಾರೆ. ಅಕ್ಟೋಬರ್ ಒಳಗೆ ಆರ್ಸಿಸಿ ಹಾಕುವ ಕೆಲಸ ಮುಗಿಯುವ ಭರವಸೆ ಇದೆ ಎಂದೂ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ವೀಟ್ ಮಾಡಿದೆ.
ರೋಲರ್ ಕಾಂಪಾಕ್ಟ್ ಮೂಲಕ ರಾಮಮಂದಿರಕ್ಕೆ ಅಡಿಪಾಯ ಹಾಕುವುದನ್ನು ತಜ್ಞರೊಂದಿಗೆ ಚರ್ಚಿಸಿದ ಬಳಿಕ ನಿರ್ಧಾರ ಕೈಗೊಳ್ಳಲಾಗಿದೆ. ಹೀಗೆ ಮಾಡಿದರೆ 1,20,000 ಚದರ ಅಡಿ ವಿಸ್ತೀರ್ಣಕ್ಕೆ, 4 ಲೇಯರ್ಗಳಷ್ಟು ಅಡಿಪಾಯ ಹಾಕಲು 40-45 ದಿನಗಳು ಬೇಕು ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ವೀಟ್ ಮಾಡಿದೆ.
श्री रामजन्मभूमि परिसर में नींव के लिए लगातार चली खुदाई के बाद विशेषज्ञों की सलाह से यह निर्णय किया गया कि नींव भराई का कार्य Roller Compacted Concrete तकनीक से किया जाएगा। लगभग 1,20,000 स्क्वायर फ़ीट क्षेत्र में अभी 4 परत बिछाई जा चुकी हैं। कुल 40-45 ऐसी ही परत बिछाई जाएंगी। pic.twitter.com/BcG2CpiHoA
— Shri Ram Janmbhoomi Teerth Kshetra (@ShriRamTeerth) May 31, 2021