ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಇಂದಿನಿಂದ ಭವ್ಯ ರಾಮ ದೇವಾಲಯದ ನಿರ್ಮಾಣವು ಪ್ರಾರಂಭವಾಗಲಿದೆ. ಕರಸೇವಕರ ಕನಸು ನನಸಾಗುತ್ತಿದೆ. ಅದರ ಅಡಿಪಾಯಕ್ಕಾಗಿ ಮೊದಲ ಇಟ್ಟಿಗೆಗಳನ್ನು ಹಾಕಲಾಗುವುದು ಎಂದು ದೇವಾಲಯದ ಟ್ರಸ್ಟ್ ಮುಖ್ಯಸ್ಥರು ತಿಳಿಸಿದ್ದಾರೆ.
ಕಳೆದ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪನ್ನು ನೀಡಿತ್ತು. ದೇವಾಲಯಕ್ಕೆ ಹಂಚಿಕೆಯಾದ ರಾಮ ಜನ್ಮಭೂಮಿ ತಾಣದಲ್ಲಿರುವ ಕುಬರ್ ತಿಲಾ ದೇಗುಲದಲ್ಲಿ ಶಿವನಿಗೆ ಪ್ರಾರ್ಥನೆ ಮಾಡಲಾಗಿತ್ತು.
ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಬದಲಿಗೆ ಕಮಲ್ ನಯನ್ ದಾಸ್ ಮತ್ತು ಇತರ ಪುರೋಹಿತರು ಪ್ರಾರ್ಥನೆ ಸಲ್ಲಿಸಿ. ಬೆಳಿಗ್ಗೆ 8 ಗಂಟೆ ಸುಮಾರಿಗೆ ಆಚರಣೆ ಶುರು ಮಾಡಲಿದ್ದಾರೆ.
ನಂತರ ಈ ಧಾರ್ಮಿಕ ಸಮಾರಂಭವು ಕನಿಷ್ಠ ಎರಡು ಗಂಟೆಗಳ ಕಾಲ ಇರುತ್ತದೆ. ಮತ್ತು ಅದರ ನಂತರ ರಾಮ ಮಂದಿರದ ನಿರ್ಮಾಣವು ಮಂದಿರ ರಚನೆಯ ಅಡಿಪಾಯವನ್ನು ಹಾಕುವ ಮೂಲಕ ಪ್ರಾರಂಭವಾಗುತ್ತದೆ ಎಂದು ಕಮಲ್ ನಯನ್ ದಾಸ್ ತಿಳಿಸಿದ್ರು.
Published On - 8:09 am, Wed, 10 June 20