Tornado: ಅಸ್ಸಾಂನಲ್ಲಿ ಕಾಣಿಸಿಕೊಂಡ ಅಪರೂಪದ ಸುಂಟರಗಾಳಿ; ವಿಡಿಯೋ ಇಲ್ಲಿದೆ

| Updated By: shivaprasad.hs

Updated on: May 08, 2022 | 9:58 AM

Rare Tornado in Assam: ಚೆಂಗಾ ಜಿಲ್ಲೆಯ ಬರ್ಪೇಟಾದಲ್ಲಿ ಕಾಣಿಸಿಕೊಂಡ ಸುಂಟರಗಾಳಿ ಕಡಿಮೆ ತೀವ್ರತೆಯದ್ದಾಗಿದೆ. ಸುಂಟರಗಾಳಿಯು ಈ ಪ್ರದೇಶದಲ್ಲಿ ಅಪರೂಪವಾಗಿದ್ದರಿಂದ ಸ್ಥಳೀಯರಲ್ಲಿ ಆಶ್ಚರ್ಯ ಹಾಗೂ ಆತಂಕ ಉಂಟುಮಾಡಿದೆ.

Tornado: ಅಸ್ಸಾಂನಲ್ಲಿ ಕಾಣಿಸಿಕೊಂಡ ಅಪರೂಪದ ಸುಂಟರಗಾಳಿ; ವಿಡಿಯೋ ಇಲ್ಲಿದೆ
ಅಸ್ಸಾಂನಲ್ಲಿ ಕಾಣಿಸಿಕೊಂಡ ಸುಂಟರಗಾಳಿ
Follow us on

ಅಸ್ಸಾಂನಲ್ಲಿ ಅಪರೂಪವಾದ ಸುಂಟರಗಾಳಿ (Tornado) ಅಪ್ಪಳಿಸಿದ್ದು, ದೃಶ್ಯಗಳು ಸೆರೆಯಾಗಿವೆ. ಶನಿವಾರ ಅಸಾನಿ ಚಂಡಮಾರುತಕ್ಕೆ ಮುನ್ನ ಬರ್ಪೇಟಾದಲ್ಲಿ ಸುಂಟರಗಾಳಿ ಕಾಣಿಸಿಕೊಂಡಿದ್ದು, ಧೂಳು ಸೇರಿದಂತೆ ಹಲವನ್ನು ಸಾಗಿಸುತ್ತಾ ಗಾಳಿಯು ಸುತ್ತುತ್ತಿರುವ ದೃಶ್ಯ ಗೋಚರವಾಗಿದೆ. ಚೆಂಗಾ ಜಿಲ್ಲೆಯ ಬರ್ಪೇಟಾದಲ್ಲಿ ಕಾಣಿಸಿಕೊಂಡ ಸುಂಟರಗಾಳಿ ಕಡಿಮೆ ತೀವ್ರತೆಯದ್ದಾಗಿದೆ. ಜತೆಗೆ ಇದು ಚಂಡಮಾರುತವಲ್ಲ ಎಂದು ಗುವಾಹಟಿಯ ಪ್ರಾದೇಶಿಕ ಹವಾಮಾನ ಕೇಂದ್ರದ ಹವಾಮಾನ ಇಲಾಖೆಯ ಉಪ ಮಹಾನಿರ್ದೇಶಕ ಸಂಜಯ್ ಒ‘ನೀಲ್ ಶಾ ಅವರು ಹೇಳಿದ್ದಾರೆ. ಸುಂಟರಗಾಳಿಯು ಈ ಪ್ರದೇಶದಲ್ಲಿ ಅಪರೂಪವಾಗಿದ್ದರಿಂದ ಸ್ಥಳೀಯರಲ್ಲಿ ಆಶ್ಚರ್ಯ ಹಾಗೂ ಆತಂಕ ಉಂಟುಮಾಡಿದೆ.

ಅಸ್ಸಾಂನಲ್ಲಿ ಕಾಣಿಸಿಕೊಂಡಿರುವ ಸುಂಟರಗಾಳಿಯ ವಿಡಿಯೋ ಇಲ್ಲಿದೆ:

ಇದನ್ನೂ ಓದಿ
ಅಪಘಾತ ತಪ್ಪಿಸಲು ಹೋಗಿ 2 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್; ಮೈ ಜುಂ ಎನಿಸುವಂತಿದೆ ಅಪಘಾತದ ದೃಶ್ಯಗಳು
Viral Video: ಕಾಡಿನ ರಾಜ ಸಿಂಹವನ್ನು ಬರಿಯ ಕೋಲಿನಿಂದ ಅಟ್ಟಿದ ವ್ಯಕ್ತಿ; ವೈರಲ್ ಆಯ್ತು ವಿಡಿಯೋ
ರಸ್ತೆ ಅಪಘಾತದಲ್ಲಿ ಖ್ಯಾತ ನಟಿ ಸುನೇತ್ರಾ ಪಂಡಿತ್​ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು
Viral News: ಗೆಳೆಯನಿಂದ ಗರ್ಭಿಣಿಯಾಗಲೇಬೇಕೆಂಬ ಹಠದಿಂದ ಎಡವಟ್ಟು ಮಾಡಿಕೊಂಡ ಮಹಿಳೆ; ಅಷ್ಟಕ್ಕೂ ಆಗಿದ್ದೇನು?

ಸಾಮಾನ್ಯವಾಗಿ ಸುಂಟರಗಾಳಿಯನ್ನು ಟ್ವಿಸ್ಟರ್ ಅಥವಾ ಸೈಕ್ಲೋನ್ ಎಂದೂ ಕರೆಯಲಾಗುತ್ತದೆ. ವಿವಿಧ ಆಕಾರ ಹಾಗೂ ಗಾತ್ರಗಳಲ್ಲಿ ಸುಂಟರಗಾಳಿಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಸುಂಟರಗಾಳಿಗಳಲ್ಲಿ ಗಾಳಿಯ ವೇಗ 180 km/h (110 mph) ಗಿಂತ ಕಡಿಮೆ ಇರುತ್ತದೆ. ಅವು ಸುಮಾರು 80 m (250 feet) ಅಡ್ಡಲಾಗಿರುತ್ತವೆ. ಚದುರಿಹೋಗುವ ಮೊದಲು ಹಲವಾರು ಕಿಲೋಮೀಟರ್​ ಸಾಗುತ್ತವೆ.

ಅತ್ಯಂತ ತೀವ್ರವಾದ ಸುಂಟರಗಾಳಿಗಳಲ್ಲಿ ಗಾಳಿಯ ವೇಗವು 480 km/h (300 mph) ಗಿಂತ ಹೆಚ್ಚಿರಬಹುದು. ಅವುಗಳ ವ್ಯಾಸ 3 km (2 ಮೈಲುಗಳು) ಗಿಂತ ಹೆಚ್ಚೂ ಇರಬಹುದು. 100 km ಗಿಂತ ಹೆಚ್ಚು ನೆಲದ ಮೇಲೆ ಅವು ಪ್ರಯಾಣಿಸಬಹುದು.

ಸುಂಟರಗಾಳಿಗಳು ಉತ್ತರ ಅಮೆರಿಕಾದಲ್ಲಿ ಹೆಚ್ಚಾಗಿ ಸಂಭವಿಸುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ ಅಮೇರಿಕಾದ ಮಧ್ಯ ಮತ್ತು ಆಗ್ನೇಯ ಪ್ರದೇಶಗಳಲ್ಲಿ ಕಂಡುಬರುತ್ತವೆ. ಆಡುಮಾತಿನಲ್ಲಿ ‘ಟೊರ್ನಾಡೋ ಅಲ್ಲೆ’ ಎಂದು ಕರೆಯಲಾಗುತ್ತದೆ. ಯುಎಸ್ ಮತ್ತು ಕೆನಡಾದಲ್ಲಿ ಪ್ರಪಂಚದ ಯಾವುದೇ ದೇಶಗಳಿಗಿಂತ ಹೆಚ್ಚು ಸುಂಟರಗಾಳಿ ಪ್ರಕರಣಗಳು ಸಂಭವಿಸುತ್ತವೆ.

ಇನ್ನಷ್ಟು ಕುತೂಹಲಕರ ವಿಚಾರ ಓದಲು ಇಲ್ಲಿ ಕ್ಲಿಕ್ ಮಾಡಿ 

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:58 am, Sun, 8 May 22