ಆರ್​​ಬಿಐ ಮತ್ತು ಖಾಸಗಿ ವಲಯದ ಎರಡು ಬ್ಯಾಂಕ್‌ಗಳಿಗೆ ಬಾಂಬ್ ಬೆದರಿಕೆ ಇಮೇಲ್

|

Updated on: Dec 26, 2023 | 8:24 PM

ಆರ್‌ಬಿಐ ಗವರ್ನರ್ ಮತ್ತು ಹಣಕಾಸು ಸಚಿವರು ತಮ್ಮ ಸ್ಥಾನಗಳಿಗೆ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಹಗರಣದ ಸಂಪೂರ್ಣ ಬಹಿರಂಗಪಡಿಸುವಿಕೆಯೊಂದಿಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಅವರಿಬ್ಬರಿಗೂ ಮತ್ತು ಭಾಗಿಯಾಗಿರುವ ಎಲ್ಲರಿಗೂ ಅವರು ಅರ್ಹವಾದ ಶಿಕ್ಷೆಯನ್ನು ನೀಡಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಇಮೇಲ್ ನಲ್ಲಿ ಹೇಳಿದೆ.

ಆರ್​​ಬಿಐ ಮತ್ತು ಖಾಸಗಿ ವಲಯದ ಎರಡು ಬ್ಯಾಂಕ್‌ಗಳಿಗೆ ಬಾಂಬ್ ಬೆದರಿಕೆ ಇಮೇಲ್
ಆರ್​ಬಿಐ
Follow us on

ದೆಹಲಿ ಡಿಸೆಂಬರ್ 26: ಮುಂಬೈನಲ್ಲಿ ಪ್ರಧಾನ ಕಛೇರಿ ಹೊಂದಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI)ಮತ್ತು ನಗರದ ಎರಡು  ಖಾಸಗಿ ವಲಯದ ಬ್ಯಾಂಕ್‌ಗಳಾದ HDFC ಮತ್ತು ICICI ಬ್ಯಾಂಕ್​​ಗೆ ಮಂಗಳವಾರ ಬೆದರಿಕೆ ಇಮೇಲ್‌ (Threat Email) ಬಂದಿರುವುದಾಗಿ ವರದಿ ಆಗಿದೆ. ಇಮೇಲ್ ನಲ್ಲಿ RBI ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಹಗರಣ ನಡೆಸುತ್ತಿವೆ ಎಂದು ಆರೋಪಿಸಿದ್ದು, ಆರ್ಥಿಕ ರಾಜಧಾನಿಯಾದ್ಯಂತ 11 ಸ್ಥಳಗಳಲ್ಲಿ ಬಾಂಬ್‌ಗಳನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದೆ ಎಂದು ಮುಂಬೈ ಪೊಲೀಸರನ್ನು ಉಲ್ಲೇಖಿಸಿ ಮಿಂಟ್ ವರದಿ ಮಾಡಿದೆ.

ಇಮೇಲ್ ನಲ್ಲಿ ಈ ಹಗರಣದಲ್ಲಿ ಭಾಗಿಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಲಾಗಿದೆ.

ಆರ್‌ಬಿಐ ಗವರ್ನರ್ ಮತ್ತು ಹಣಕಾಸು ಸಚಿವರು ತಮ್ಮ ಸ್ಥಾನಗಳಿಗೆ ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಹಗರಣದ ಸಂಪೂರ್ಣ ಬಹಿರಂಗಪಡಿಸುವಿಕೆಯೊಂದಿಗೆ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಬೇಕು ಎಂದು ನಾವು ಒತ್ತಾಯಿಸುತ್ತೇವೆ. ಅವರಿಬ್ಬರಿಗೂ ಮತ್ತು ಭಾಗಿಯಾಗಿರುವ ಎಲ್ಲರಿಗೂ ಅವರು ಅರ್ಹವಾದ ಶಿಕ್ಷೆಯನ್ನು ನೀಡಬೇಕೆಂದು ನಾವು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಇಮೇಲ್ ನಲ್ಲಿ ಹೇಳಿದೆ

ಎಲ್ಲೆಲ್ಲಿ ಬಾಂಬ್ ಇರಿಸಲಾಗಿದೆ? ಇಮೇಲ್​​ನಲ್ಲೇನಿದೆ?

ಇಮೇಲ್​​ನಲ್ಲಿ ಬಾಂಬ್‌ಗಳನ್ನು ಇಟ್ಟಿರುವುದಾಗಿ ಹೇಳಿಕೊಂಡ ಸ್ಥಳಗಳಲ್ಲಿ ಮೂರು: RBI-ಹೊಸ ಕೇಂದ್ರೀಯ ಕಟ್ಟಡ, ಫೋರ್ಟ್; HDFC ಹೌಸ್-ಚರ್ಚ್‌ಗೇಟ್, ಮತ್ತು ICICI ಬ್ಯಾಂಕ್ ಟವರ್ಸ್, BKC (ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್). ಮಧ್ಯಾಹ್ನ 1:30ಕ್ಕೆ ಸ್ಫೋಟಕಗಳನ್ನು ಸ್ಫೋಟಿಸುವುದಾಗಿ ಇಮೇಲ್‌ಗಳಲ್ಲಿ ಎಚ್ಚರಿಕೆ ನೀಡಲಾಗಿತ್ತು.

ಇದನ್ನೂ ಓದಿ: ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಕೇಳಿ ಬಂತು ಭಾರೀ ಸದ್ದು; ಏನೂ ಪತ್ತೆಯಾಗಿಲ್ಲ ಎಂದ ಪೊಲೀಸ್

ಪೊಲೀಸರಿಗೆ ಸಿಕ್ಕಿದ್ದೇನು?

ಇಮೇಲ್‌ ಸಿಕ್ಕಿರುವ ಮಾಹಿತಿ ಸಿಕ್ಕಿದ ಕೂಡಲೇ ಪೊಲೀಸರು ತಮ್ಮ ಸಿಬ್ಬಂದಿಯನ್ನು ಪ್ರತಿ 11 ಸ್ಥಳಗಳಿಗೆ ಕಳುಹಿಸಿದರು, ಆದರೂ ಏನೂ ಕಂಡುಬಂದಿಲ್ಲ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ