ಎಟಿಎಂಗಳ ಸಂಖ್ಯೆ ಕಡಿಮೆ ಮಾಡಲು ಆರ್​ಬಿಐ ನಿರ್ಧಾರ

|

Updated on: Nov 04, 2019 | 2:39 PM

ಬೆಂಗಳೂರು: ಹಣ.. ಝಣ ಝಣ ಕಾಂಚಣ.. ಎಟಿಎಂಗೆ ಕಾರ್ಡ್ ಹಾಕಿ ಪಾಸ್​ವರ್ಡ್ ಕೊಟ್ರೆ ಗರಿ ಗರಿ ನೋಟ್.. ಅದೇ ಖುಷಿಯಲ್ಲಿ ಎಣಿಸ್ಕೊಂಡ್ ಜೇಬಿಗಿಟ್ಟುಕೊಳ್ತಿದ್ರು.. ಏನೇ ತಗೊಳ್ಬೇಕು ಅಂದ್ರೂ ಕಾಸು ಕೊಟ್ಟು ಫಟಾಫಟ್ ಪರ್ಚೇಸ್ ಮಾಡ್ತಿದ್ರು. ಬಟ್ ಇನ್ಮುಂದೆ ಅಕೌಂಟ್​ನಲ್ಲಿ ಕಾಸಿದ್ರೂ ಜೇಬಲ್ಲಿ ಕಾಸಿರೋಲ್ಲ ಅನ್ಸುತ್ತೆ. ಎಟಿಎಂಗಳ ಸಂಖ್ಯೆ ಕಡಿಮೆ ಮಾಡಲು ಮುಂದಾದ ಆರ್​ಬಿಐ? ನೋಟ್ ಬ್ಯಾನ್ ಮಾಡಿದ್ದ ಮೋದಿ ಸರ್ಕಾರ ಇದೀಗ, ಎಟಿಎಂಗಳ ಮೇಲೆ ಕಣ್ಣಾಕ್ಕಿದೆಯಂತೆ. ಇತ್ತಿಚೆಗಷ್ಟೇ ಬ್ಯಾಂಕ್​ಗಳ ವಿಲೀನ ಮಾಡಿದ್ದ ಕೇಂದ್ರಸರ್ಕಾರ ಇದೀಗ ಎಟಿಎಂಗಳನ್ನೂ ಮುಚ್ಚಲು […]

ಎಟಿಎಂಗಳ ಸಂಖ್ಯೆ ಕಡಿಮೆ ಮಾಡಲು ಆರ್​ಬಿಐ ನಿರ್ಧಾರ
Follow us on

ಬೆಂಗಳೂರು: ಹಣ.. ಝಣ ಝಣ ಕಾಂಚಣ.. ಎಟಿಎಂಗೆ ಕಾರ್ಡ್ ಹಾಕಿ ಪಾಸ್​ವರ್ಡ್ ಕೊಟ್ರೆ ಗರಿ ಗರಿ ನೋಟ್.. ಅದೇ ಖುಷಿಯಲ್ಲಿ ಎಣಿಸ್ಕೊಂಡ್ ಜೇಬಿಗಿಟ್ಟುಕೊಳ್ತಿದ್ರು.. ಏನೇ ತಗೊಳ್ಬೇಕು ಅಂದ್ರೂ ಕಾಸು ಕೊಟ್ಟು ಫಟಾಫಟ್ ಪರ್ಚೇಸ್ ಮಾಡ್ತಿದ್ರು. ಬಟ್ ಇನ್ಮುಂದೆ ಅಕೌಂಟ್​ನಲ್ಲಿ ಕಾಸಿದ್ರೂ ಜೇಬಲ್ಲಿ ಕಾಸಿರೋಲ್ಲ ಅನ್ಸುತ್ತೆ.

ಎಟಿಎಂಗಳ ಸಂಖ್ಯೆ ಕಡಿಮೆ ಮಾಡಲು ಮುಂದಾದ ಆರ್​ಬಿಐ?
ನೋಟ್ ಬ್ಯಾನ್ ಮಾಡಿದ್ದ ಮೋದಿ ಸರ್ಕಾರ ಇದೀಗ, ಎಟಿಎಂಗಳ ಮೇಲೆ ಕಣ್ಣಾಕ್ಕಿದೆಯಂತೆ. ಇತ್ತಿಚೆಗಷ್ಟೇ ಬ್ಯಾಂಕ್​ಗಳ ವಿಲೀನ ಮಾಡಿದ್ದ ಕೇಂದ್ರಸರ್ಕಾರ ಇದೀಗ ಎಟಿಎಂಗಳನ್ನೂ ಮುಚ್ಚಲು ಹೊರಟಿದೆ. ಹಿಂದೆ ಪ್ರತಿ ಬ್ಯಾಂಕ್​ನಿಂದ ಒಂದೊಂದು ಕಿಲೋ ಮೀಟರ್​ಗೊಂದು ಎಟಿಎಂಗಳಿದ್ವು. ಈಗ ಬ್ಯಾಂಕ್​ಗಳ ವಿಲೀನದಿಂದ ಬಹುತೇಕ ಎಟಿಎಂಗಳನ್ನ ಮುಚ್ಚಲಾಗಿದೆ. ಇದ್ರ ಜೊತೆಗೆ ಮತ್ತಷ್ಟು ಎಟಿಎಂಗಳನ್ನ ಮುಚ್ಚಲು ನಿರ್ಧರಿಸಲಾಗಿದ್ಯಂತೆ.

‘ATM’ಗಳ ಯುಗಾಂತ್ಯ?
ಸದ್ಯ ರಾಜ್ಯದಲ್ಲಿ ಒಟ್ಟು 17,253 ಎಟಿಎಂಗಳಿದ್ದು, ಬೆಂಗಳೂರು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಒಟ್ಟಾರೆ 7,825 ಎಟಿಎಂಗಳಿವೆ. ಈ ಪೈಕಿ ಬಹುತೇಕ ಎಟಿಎಂಗಳನ್ನ ಮುಚ್ಚಲು ನಿರ್ಧಾರ ಮಾಡಲಾಗಿದೆ. ಮೊದ್ಲೆಲ್ಲಾ ಪ್ರತಿ 1ಕಿಲೋ ಮೀಟರ್​ಗೆ ಎಟಿಎಂಗಳಿದ್ವು. ಆದ್ರೆ ಇನ್ಮುಂದೆ 2 ಕಿಲೋ ಮೀಟರ್​ಗೊಂದು ಎಟಿಎಂಗಳ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಈ ಮೂಲಕ ಆರ್​ಬಿಐ ನೋಟ್ ಪ್ರಿಂಟ್ ನಿಲ್ಲಿಸಿ ಕ್ಯಾಶ್​ಲೆಸ್ ವ್ಯವಹಾರಕ್ಕೆ ಹೆಚ್ಚು ಆದ್ಯತೆ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಈ ಮೂಲಕ ನೋಟ್ ವ್ಯವಹಾರ ನಿಲ್ಲಿಸಿ ಹೆಚ್ಚೆಚ್ಚು ಡಿಜಿಟಲ್ ವ್ಯವಹಾರವನ್ನ ಜನ ಬಳಸಿಕೊಳ್ಳುವಂತೆ ಮಾಡೋ ತಯಾರಿ ನಡೆದಿದೆ ಎನ್ನಲಾಗಿದೆ. ಇತ್ತ ಆರ್​ಬಿಐ ಕೂಡಾ ಎಟಿಎಂಗಳನ್ನ ಮುಚ್ಚಲು ನಿರ್ದೇಶನ ಕೊಟ್ಟಿದೆಯಂತೆ. ನಗರದಲ್ಲಿರುವ ಒಟ್ಟು 7,825 ಎಟಿಎಂಗಳ ಪೈಕಿ ಬಹುತೇಕ ಎಟಿಎಂಗಳನ್ನ ಮುಚ್ಚಲು ಸೂಚನೆ ನೀಡಿದ್ದಾರಂತೆ.

ಎಟಿಎಂಗಳ ಸಂಖ್ಯೆ ಕಡಿಮೆಯಾಗುತ್ತೆ:
ಬ್ಯಾಂಕ್​ಗಳು ವಿಲೀನಗೊಂಡ ಹಿನ್ನೆಲೆಯಲ್ಲಿ ಆಯಾ ಬ್ಯಾಂಕ್​ಗಳ ಎಟಿಎಂಗಳು ಮುಚ್ಚಲಿವೆ. ಜೊತೆಗೆ ಪೇಪರ್​ಲೆಸ್ ವ್ಯವಹಾರಕ್ಕೆ ಮಾನ್ಯತೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಟಿಎಂಗಳ ಸಂಖ್ಯೆ ಕಡಿಮೆ ಆಗಲಿದೆ. ಆದ್ರೆ ಜನ ಸಾಮಾನ್ಯರಿಗೆ ಅನಾನುಕೂಲ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಆರ್​ಬಿಐ ಸ್ಪಷ್ಟ ಪಡಿಸಿದೆ.

Published On - 3:09 pm, Sun, 3 November 19