Bomb Threat: ಆರ್​ಬಿಐ ಕಚೇರಿಗೆ ಮತ್ತೆ ಬಾಂಬ್ ಬೆದರಿಕೆ

|

Updated on: Dec 13, 2024 | 10:22 AM

ಮುಂಬೈನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟಡಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಪೊಲೀಸರು ಅಪರಿಚಿತ ಶಂಕಿತರ ವಿರುದ್ಧ ತನಿಖೆ ಆರಂಭಿಸಿದ್ದಾರೆ. ಮುಂಬೈನಲ್ಲಿರುವ ಆರ್‌ಬಿಐ ಕಚೇರಿಗೆ ಗುರುವಾರ ಅಧಿಕೃತ ಇಮೇಲ್ ಐಡಿ ಮೂಲಕ ಬೆದರಿಕೆ ಬಂದಿತ್ತು. ಕಟ್ಟಡವನ್ನು ಸ್ಫೋಟಕಗಳಿಂದ ಸ್ಫೋಟಿಸುವುದಾಗಿ ಹೇಳಿಕೊಂಡು ಬೆದರಿಕೆ ಮೇಲ್‌ನ ವಿಷಯಗಳು ರಷ್ಯನ್ ಭಾಷೆಯಲ್ಲಿವೆ. ಪೊಲೀಸರು ಸ್ಥಳದಲ್ಲಿ ಸಂಪೂರ್ಣ ಶೋಧ ನಡೆಸಿದ್ದು, ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ.

Bomb Threat: ಆರ್​ಬಿಐ ಕಚೇರಿಗೆ ಮತ್ತೆ ಬಾಂಬ್ ಬೆದರಿಕೆ
ಆರ್​ಬಿಐ
Image Credit source: India Today
Follow us on

ಮುಂಬೈನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಚೇರಿಗೆ ಡಿಸೆಂಬರ್ 13 ರಂದು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಕಟ್ಟಡದ ಮೇಲೆ ದಾಳಿಯ ಎಚ್ಚರಿಕೆ ನೀಡಲಾಗಿದೆ. ರಷ್ಯನ್ ಭಾಷೆಯಲ್ಲಿ ಬರೆದ ಇ-ಮೇಲ್ ನಲ್ಲಿ ಆರ್ ಬಿಐ ಆವರಣವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ. ಮುಂಬೈ ಪೊಲೀಸರು ಮಾತಾ ರಮಾಬಾಯಿ ಮಾರ್ಗ (MRA ಮಾರ್ಗ) ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸದ್ಯಕ್ಕೆ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಅಧಿಕಾರಿಗಳು ಬೆದರಿಕೆಯ ಮೂಲವನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಆರ್‌ಬಿಐ ಕಟ್ಟಡದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಪೊಲೀಸರು ಸ್ಥಳದಲ್ಲಿ ಸಂಪೂರ್ಣ ಶೋಧ ನಡೆಸಿದ್ದು, ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ.

ನವೆಂಬರ್ 17ರಂದು ಬಾಂಬ್ ಬೆದರಿಕೆ ಬಂದಿತ್ತು
ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೆ ಬೆದರಿಕೆ ಕರೆ ಬಂದಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕ ಸೇವಾ ಸಂಖ್ಯೆಗೆ ಬೆದರಿಕೆ ಕರೆ ಬಂದಿತ್ತು. ಅಲ್ಲದೆ, ಕರೆ ಮಾಡಿದ ವ್ಯಕ್ತಿ ತಾನು ಲಷ್ಕರ್-ಎ-ತೊಯ್ಬಾದ ಸಿಇಒ ಎಂದು ಹೇಳಿಕೊಂಡಿದ್ದಾನೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಬಂದಿದೆ. ಫೋನ್ ಮಾಡಿದ ವ್ಯಕ್ತಿ ತಾನು ಲಷ್ಕರ್-ಎ-ತೊಯ್ಬಾದ ಸಿಇಒ ಎಂದು ಹೇಳಿಕೊಂಡಿದ್ದಾನೆ.ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ರಿಸರ್ವ್ ಬ್ಯಾಂಕ್ ನ ಭದ್ರತಾ ಸಿಬ್ಬಂದಿ ನೀಡಿದ ದೂರಿನಂತೆ ಮಾತಾ ರಮಾಬಾಯಿ ಮಾರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಓದಿ: ಆರ್​ಬಿಐಗೆ ಲಷ್ಕರ್-ಎ-ತೊಯ್ಬಾದಿಂದ ಬಾಂಬ್ ಬೆದರಿಕೆ

ದೆಹಲಿ ಶಾಲೆಗಳಿಗೆ ಬಾಂಬ್ ಬೆದರಿಕೆ
ದೆಹಲಿಯ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ(Bomb Threat) ಬಂದಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಆತಂಕಕ್ಕೊಳಗಾಗಿದ್ದಾರೆ. ವಾರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಆಗಮಿಸಿದ್ದು, ಅನುಮಾನಾಸ್ಪದವಾಗಿ ಏನೂ ಕೂಡ ಕಂಡುಬಂದಿಲ್ಲ. ಸೋಮವಾರ ದೆಹಲಿಯ 44 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿತ್ತು, ಇ-ಮೇಲ್ ಮಾಡಿದವರು 30 ಸಾವಿರ ಯುಎಸ್ ಡಾಲರ್​ ಬೇಡಿಕೆ ಇಟ್ಟಿದ್ದರು. ಕೂಲಂಕುಷವಾಗಿ ಪರಿಶೀಲನೆ ಮಾಡಿದ ಬಳಿಕ ಸುಳ್ಳು ಬೆದರಿಕೆ ಎಂಬುದು ತಿಳಿದುಬಂದಿದೆ.

ಮೇ ತಿಂಗಳಲ್ಲಿ, ನಗರದ 200 ಕ್ಕೂ ಹೆಚ್ಚು ಶಾಲೆಗಳು, ಆಸ್ಪತ್ರೆಗಳು ಮತ್ತು ಪ್ರಮುಖ ಸರ್ಕಾರಿ ಸ್ಥಾಪನೆಗಳು ಇದೇ ರೀತಿಯ ಬೆದರಿಕೆಯನ್ನು ಪಡೆದಿವೆ. ಮೇಲ್ ಅನ್ನು ವಿಪಿಎನ್ ಬಳಸಿ ಕಳುಹಿಸಿರುವುದರಿಂದ ಪ್ರಕರಣವನ್ನು ಇನ್ನೂ ಪರಿಹರಿಸಲಾಗಿಲ್ಲ. ಆಗ ಕಳುಹಿಸುವವರ ಐಪಿ ವಿಳಾಸವನ್ನು ಪಡೆಯಲು ಪೊಲೀಸರು ಕೇಂದ್ರ ಏಜೆನ್ಸಿಗಳ ಸಹಾಯವನ್ನೂ ಪಡೆದಿದ್ದರು.

ಅಗ್ನಿಶಾಮಕ ದಳ, ಪೊಲೀಸ್ ಮತ್ತು ಬಾಂಬ್ ಪತ್ತೆ ಘಟಕಗಳ ತಂಡಗಳು, ಶ್ವಾನ ದಳಗಳೊಂದಿಗೆ ಸಂಪೂರ್ಣ ತಪಾಸಣೆ ನಡೆಸಲು ಸ್ಥಳಗಳಿಗೆ ಕಳುಹಿಸಲಾಗಿದೆ. ಶಾಲೆಗಳ ಅಧಿಕಾರಿಗಳು ತಮ್ಮ ಮಕ್ಕಳನ್ನು ತರಗತಿಗಳಿಗೆ ಕಳುಹಿಸದಂತೆ ಪೋಷಕರಿಗೆ ಸಂದೇಶಗಳನ್ನು ಕಳುಹಿಸಿದ್ದಾರೆ. ತಪಾಸಣೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ನಿಮ್ಮ ಶಾಲೆಯ ಆವರಣದಲ್ಲಿ ಸ್ಫೋಟಕಗಳಿವೆ, ವಿದ್ಯಾರ್ಥಿಗಳು ನಿತ್ಯ ಶಾಲೆಗೆ ಬಂದಾಗ ಅವರ ಬ್ಯಾಗ್​ಗಳನ್ನು ನೀವು ಚೆಕ್ ಮಾಡುವುದಿಲ್ಲ ಎಂಬುದು ತಿಳಿದಿದೆ ಎಂಬುದಾಗಿ ಬರೆದಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:21 am, Fri, 13 December 24