ತಾನೇ ಅತ್ಯಾಚಾರವೆಸಗಿದ್ದ ಯುವತಿಯನ್ನು ಮದುವೆಯಾಗುವುದಾಗಿ ಹೇಳಿದ ಎಸಿಪಿ ಮೊಹ್ಸಿನ್
ತಾನೇ ಅತ್ಯಾಚಾರವೆಸಗಿರುವ ಯುವತಿಯನ್ನು ಮದುವೆಯಾಗುವುದಾಗಿ ಎಸಿಪಿ ಮೊಹಮ್ಮದ್ ಮೊಹ್ಸಿನ್ ಭರವಸೆ ನಿಡಿದ್ದಾರೆ. ಕಾನ್ಪುರದಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಮೊಹಮ್ಮದ್ ಮೊಹ್ಸಿನ್ ಖಾನ್ ಐಐಟಿ-ಕಾನ್ಪುರದಲ್ಲಿ ಪ್ರೊಫೆಸರ್ ಮೇಲೆ ಅತ್ಯಾಚಾರ ಆರೋಪದ ಬಳಿಕ ವರ್ಗಾವಣೆ ಮಾಡಲಾಗಿತ್ತು. ವಂಚನೆ ಮಾಡಿ ಅತ್ಯಾಚಾರವೆಸಗಿದ್ದರು ಎನ್ನುವ ಆರೋಪದ ಮೇಲೆ ಕಲ್ಯಾಣಪುರ ಪೊಲೀಸ್ ಠಾಣೆಯಲ್ಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಉಪ ಪೊಲೀಸ್ ಆಯುಕ್ತರಾದ ಅಂಕಿತಾ ಶರ್ಮಾ ತಿಳಿಸಿದ್ದಾರೆ.
ತಾನೇ ಅತ್ಯಾಚಾರವೆಸಗಿರುವ ಯುವತಿಯನ್ನು ಮದುವೆಯಾಗುವುದಾಗಿ ಎಸಿಪಿ ಮೊಹಮ್ಮದ್ ಮೊಹ್ಸಿನ್ ಭರವಸೆ ನಿಡಿದ್ದಾರೆ. ಕಾನ್ಪುರದಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಮೊಹಮ್ಮದ್ ಮೊಹ್ಸಿನ್ ಖಾನ್ ಐಐಟಿ-ಕಾನ್ಪುರದಲ್ಲಿ ವಿಧ್ವಾಂಸೆ ಮೇಲೆ ಅತ್ಯಾಚಾರ ಆರೋಪದ ಬಳಿಕ ವರ್ಗಾವಣೆ ಮಾಡಲಾಗಿತ್ತು. ವಂಚನೆ ಮಾಡಿ ಅತ್ಯಾಚಾರವೆಸಗಿದ್ದರು ಎನ್ನುವ ಆರೋಪದ ಮೇಲೆ ಕಲ್ಯಾಣಪುರ ಪೊಲೀಸ್ ಠಾಣೆಯಲ್ಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಇನ್ನೂ ಬಂಧಿಸಿಲ್ಲ ಎಂದು ಉಪ ಪೊಲೀಸ್ ಆಯುಕ್ತರಾದ ಅಂಕಿತಾ ಶರ್ಮಾ ತಿಳಿಸಿದ್ದಾರೆ.
ಪ್ರಕರಣದ ತನಿಖೆಗಾಗಿ ಪೊಲೀಸರು ಹೆಚ್ಚುವರಿ ಡಿಸಿಪಿ (ಟ್ರಾಫಿಕ್) ಅರ್ಚನಾ ಸಿಂಗ್ ನೇತೃತ್ವದಲ್ಲಿ ಐವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸುವಂತೆ ಎಸ್‌ಐಟಿಗೆ ಸೂಚಿಸಲಾಗಿದ್ದು, ಸತ್ಯಾಂಶ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೈಬರ್ ಕ್ರೈಮ್ ಮತ್ತು ಕ್ರಿಮಿನಾಲಜಿಯಲ್ಲಿ ಪಿಎಚ್‌ಡಿ ಮಾಡಲು ಎಸಿಪಿ ಐದು ತಿಂಗಳ ಹಿಂದೆ ಐಐಟಿ-ಕಾನ್ಪುರಕ್ಕೆ ಸೇರಿಕೊಂಡಿದ್ದರು.
ಮತ್ತಷ್ಟು ಓದಿ:ಅತ್ಯಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದು ಸಂತ್ರಸ್ತೆಯನ್ನು ಕೊಂದು ತುಂಡರಿಸಿದ ಆರೋಪಿ
ಇನ್‌ಸ್ಟಿಟ್ಯೂಟ್‌ನಲ್ಲಿದ್ದ ಸಮಯದಲ್ಲಿ, ಅವರು ತಮ್ಮ ಪತ್ನಿಗೆ ವಿಚ್ಛೇದನ ನೀಡಿದ ನಂತರ ಅವರನ್ನು ಮದುವೆಯಾಗುವುದಾಗಿ ಭರವಸೆ ನೀಡಿ ವಿಧ್ವಾಂಸೆ ಜತೆ ಸಂಬಂಧ ಬೆಳೆಸಿದ್ದರು. ಆದರೆ ಬಳಿಕ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಆರೋಪಿಸಿರುವ ಯುವತಿ ಅತ್ಯಾಚಾರ ದೂರು ದಾಖಲಿಸಿದ್ದಾರೆ.
ಖಾನ್ ವಿರುದ್ಧದ ಆರೋಪಗಳು ನಂಬಲರ್ಹವೆಂದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ಅವರನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಐಐಟಿ-ಕಾನ್ಪುರದ ನಿರ್ದೇಶಕ ಮಣಿಂದ್ರ ಅಗರವಾಲ್ ಪ್ರಕರಣದ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ವಿಧ್ವಾಂಸೆ ಒಬ್ಬರು ಪೊಲೀಸ್ ಅಧಿಕಾರಿಯ ಮೇಲೆ ಲೈಂಗಿಕ ಶೋಷಣೆಯ ಆರೋಪ ಮಾಡಿ ದೂರು ದಾಖಲಿಸಿದ್ದಾರೆ. ಈ ಕಷ್ಟದ ಸಮಯದಲ್ಲಿ ಆಕೆಗೆ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ಬರೆದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:18 am, Fri, 13 December 24