ಅ.10ರೊಳಗೆ ನಿಮ್ಮ 40 ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಿ, ಕೆನಡಾಕ್ಕೆ ಭಾರತ ಕಟ್ಟಾಜ್ಞೆ
ಭಾರತ ಮತ್ತು ಕೆನಡಾದ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಈ ಮಧ್ಯೆ ಭಾರತ ಸರ್ಕಾರವು 40 ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಕೆನಡಾಕ್ಕೆ ಹೇಳಿದೆ. ಅಕ್ಟೋಬರ್ 10ರೊಳಗೆ ನಿಮ್ಮ 40 ರಾಜತಾಂತ್ರಿಕ ಅಧಿಕಾರಿಗಳು ಕೆನಡಾಕ್ಕೆ ವಾಪಸ್ಸು ಕರೆಸಿಕೊಳ್ಳುವಂತೆ ಭಾರತ ಸರ್ಕಾರ ಹೇಳಿದೆ. ಇನ್ನು ಇದು ಭಾರತ ಕೆನಡಾದ ಮೇಲೆ ಬೆದರಿಕೆ ಹಾಕುತ್ತಿದೆ ಎಂದು ಕೆನಡಾ ಹೇಳಿದೆ.
ದೆಹಲಿ, ಅ.3: ಭಾರತ ಮತ್ತು ಕೆನಡಾದ (India and Canada) ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದೆ. ಈ ಮಧ್ಯೆ ಭಾರತ ಸರ್ಕಾರವು 40 ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುವಂತೆ ಕೆನಡಾಕ್ಕೆ ಹೇಳಿದೆ. ಅಕ್ಟೋಬರ್ 10ರೊಳಗೆ ನಿಮ್ಮ 40 ರಾಜತಾಂತ್ರಿಕ ಅಧಿಕಾರಿಗಳು ಕೆನಡಾಕ್ಕೆ ವಾಪಸ್ಸು ಕರೆಸಿಕೊಳ್ಳುವಂತೆ ಭಾರತ ಸರ್ಕಾರ ಹೇಳಿದೆ. ಇನ್ನು ಇದು ಭಾರತ ಕೆನಡಾದ ಮೇಲೆ ಬೆದರಿಕೆ ಹಾಕುತ್ತಿದೆ ಎಂದು ಕೆನಡಾ ಹೇಳಿದೆ. ಸಿಖ್ಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತ ಸರ್ಕಾರದ ಏಜೆಂಟ್ಗಳ ಕೈವಾಡ ಇದೆ ಎಂದು ಕೆನಡಾ ಆರೋಪಿಸಿತ್ತು. ಇದರ ಜತೆಗೆ ಈ ಘಟನೆಗೆ ಭಾರತವೇ ನೇರ ಕಾರಣ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡ್ ಆರೋಪಿಸಿರುವ ಕಾರಣ ಎರಡು ದೇಶಗಳ ನಡುವೆ ಭಾರೀ ಉದ್ವಿಗ್ನತೆಗೆ ಕಾರಣವಾಗಿದೆ.
ಈ ಘರ್ಷಣೆ ಪ್ರಾರಂಭವಾದ ದಿನದಿಂದ ಕೆನಡಾ ಭಾರತದ ಹಿರಿಯ ರಾಜತಾಂತ್ರಿ ಅಧಿಕಾರಿಯನ್ನು ಹೊರಗೆ ಹಾಕಿತ್ತು, ಇದಕ್ಕೆ ಪ್ರತಿಯಾಗಿ ಭಾರತವು ಕೂಡ ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಭಾರತದಿಂದ ಹೋಗುವಂತೆ ತಿಳಿಸಿತ್ತು. ಇದರ ಜತೆಗೆ ಭಾರತ ಕೆನಾಡಿಯನ್ನರಿಗೆ ವೀಸಾವನ್ನು ರದ್ದು ಮಾಡಿತ್ತು. ಇದೀಗ ಭಾರತದಲ್ಲಿರುವ ಕೆನಡಾದ 40 ರಾಜತಾಂತ್ರಿರನ್ನು ವಾಪಸು ಕರೆಸಿಕೊಳ್ಳುವಂತೆ ಹೇಳಿದೆ.
ಇದನ್ನೂ ಓದಿ: 1980ರಿಂದಲೇ ಕೆನಡಾದೊಂದಿಗೆ ಸಂಘರ್ಷವಿದೆ; ಬ್ಲಿಂಕೆನ್, ಸುಲ್ಲಿವಾನ್ ಜತೆ ಮಾತನಾಡಿರುವೆ: ಜೈಶಂಕರ್
ಇನ್ನು ಭಾರತಕ್ಕೆ ಹೋಲಿಸಿದರೆ ಭಾರತದಲ್ಲಿ ಕೆನಡಾದ ರಾಜತಾಂತ್ರಿಕ ಅಧಿಕಾರಿಗಳು ಹೆಚ್ಚು ಇದ್ದರೆ. ಹಾಗಾಗಿ ಎರಡು ರಾಷ್ಟ್ರಗಳಲ್ಲಿ ಸಮಾನತೆ ಕಾಣುವ ದೃಷ್ಟಿಯಿಂದ ಈ ಕ್ರಮವನ್ನು ಅನುಸರಿಸಲಾಗಿದೆ ಎಂದು ಭಾರತ ಹೇಳಿದೆ. ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಪಾಕಿಸ್ತಾನದ ಕೈವಾಡ ಇದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆನಡಾ ಉತ್ತರಿಸಿದ್ದು, ಇದು ಭಾರತದ ಕೆಲಸ ಎಂದು ಹೇಳಿದೆ. ಭಾರತದ ಮೇಲೆ ಆರೋಪ ಮಾಡಿದ ಕೆನಡಾಕ್ಕೆ ಬಿಜೆಪಿ ನಾಯಕ ತೇಜಿಂದರ್ ಪಾಲ್ ಸಿಂಗ್ ವಿವಾದತ್ಮಕ ಹೇಳಿಕೆ ನೀಡಿದ್ದಾರೆ. ನಿಜ್ಜರ್ ಸಲಿಂಗಕಾಮಿ ಮತ್ತು ಟ್ರೂಡೊ ಅವರನ್ನು ಇಷ್ಟಪಡುತ್ತಿದ್ದರು ಎಂದು ಹೇಳಿದ್ದಾರೆ.
2020ರಲ್ಲಿ ಭಾರತ ನಿಜ್ಜರ್ನ್ನು ಭಯೋತ್ಪಾದಕ ಎಂದು ಘೋಷಣೆ ಮಾಡಿತ್ತು. ಇದರ ನಂತರ ಜೂನ್ 18ರಂದು ಸರ್ರೆ ಗುರುದ್ವಾರದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ