ದೆಹಲಿಯಲ್ಲಿ ನಿರಂತರ ಮಳೆ; ಏರ್ಪೋರ್ಟ್ ಒಳಗೂ ತುಂಬಿದ ನೀರು, ವಿಮಾನ ಹಾರಾಟ ರದ್ದು
ನಿನ್ನೆಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಲಾವೃತಗೊಂಡಿದೆ. ಏರ್ಪೋರ್ಟ್ ಒಳಗೆ ಕೆಂಪು ನೀರು ನಿಂತಿತ್ತು.
ಇಂದು ಬೆಳಗ್ಗೆಯಿಂದಲೂ ದೆಹಲಿ (Delhi)ಯಲ್ಲಿ ಸಿಕ್ಕಾಪಟೆ ಮಳೆ (Heavy Rainfall)ಯಾಗುತ್ತಿದೆ. ಒಂದೇ ಸಮ ಸುರಿಯುತ್ತಿರುವ ಮಳೆಯಿಂದ ವಿಪರೀತ ಅವ್ಯವಸ್ಥೆ ಸೃಷ್ಟಿಯಾಗಿದೆ. ದೆಹಲಿಯ ರಸ್ತೆ, ಬಸ್ಸ್ಟ್ಯಾಂಡ್, ಏರ್ಪೋರ್ಟ್ಗಳೆಲ್ಲ ನೀರಿನಲ್ಲಿ ಮುಳುಗಿವೆ. ಈ ವರ್ಷ ಮಾನ್ಸೂನ್ (Monsoon)ನಿಂದ ದೆಹಲಿಯಲ್ಲಿ ಇಲ್ಲಿಯವರೆಗೆ 1,100 ಎಂಎಂ ಮಳೆಯಾಗಿದೆ. ಕಳೆದ 46ವರ್ಷಗಳಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದ ಮಳೆ. ಅದರಲ್ಲೂ ಕಳೆದ ವರ್ಷಕ್ಕಿಂತ ಸುಮಾರು 2 ಪಟ್ಟು ಹೆಚ್ಚು ಮಳೆಯಾದಂತೆ ಆಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಹಾಗೇ, ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ದೆಹಲಿ ಜನರು ಇಂದು ಬೆಳಗ್ಗೆ ಏಳುತ್ತಲೇ ಮಳೆಯೇ ಸ್ವಾಗತ ನೀಡಿದೆ. ನಿನ್ನೆ ರಾತ್ರಿಯಿಂದ ಶುರುವಾದ ಮಳೆಯಿಂದಾಗಿ ರಸ್ತೆಗಳೆಲ್ಲ ಜಲಾವೃತಗೊಂಡಿದೆ. ಏರ್ಪೋರ್ಟ್ನಲ್ಲಿ ನೀರು ನಿಂತ ಪರಿಣಾಮ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮನೆ, ರಸ್ತೆಗಳಿಗೆಲ್ಲ ನೀರು ತುಂಬಿ ಅನೇಕರು ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ಮುಖ್ಯವಾಗಿ ಮೋತಿ ಭಾಗ್, ಆರ್.ಕೆ.ಪುರಂ, ಮಧು ವಿಹಾರ, ಹರಿನಗರ, ರೋಹ್ಟಕ್ ರಸ್ತೆ, ಸೋಮ್ ವಿಹಾರ್, ರಿಂಗ್ ರೋಡ್ ಸೇರಿ ಅನೇಕ ಕಡೆ ರಸ್ತೆಗಳಲ್ಲಿ ನೀರು ತುಂಬಿ ವಾಹನ ಮತ್ತು ಜನಸಂಚಾರಕ್ಕೆ ತೀವ್ರ ಕಷ್ಟವಾಗಿತ್ತು.
#WATCH | Buses stuck amid waterlogged roads following heavy rains in the National Captial; visuals from Madhu Vihar area. pic.twitter.com/3TyZJWxAix
— ANI (@ANI) September 11, 2021
ತುಂಬಿದ ನೀರಲ್ಲಿ ರಾಫ್ಟಿಂಗ್ ಮಾಡಿದ ಬಿಜೆಪಿ ನಾಯಕ ದೆಹಲಿಯಾದ್ಯಂತ ನೀರು ತುಂಬಿ ಒಂದೆಡೆ ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ, ಬಿಜೆಪಿಯ ದೆಹಲಿ ವಕ್ತಾರ ತಜಿಂದರ್ ಸಿಂಗ್, ಕುತ್ತಿಗೆವರೆಗೆ ನೀರು ನಿಂತ ಭಜನ್ಪುರ ಪ್ರದೇಶದ ರಸ್ತೆಯಲ್ಲಿ ರಾಫ್ಟಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲ, ಸಿಎಂ ಕೇಜ್ರಿವಾಲ್ರ ಗಮನ ಸೆಳೆದಿದ್ದಾರೆ.
ವಿಮಾನನಿಲ್ದಾಣದಲ್ಲೆಲ್ಲ ನೀರು, ನೀರು.. ನಿನ್ನೆಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಲಾವೃತಗೊಂಡಿದೆ. ಟ್ವೀಟ್ ಮಾಡಿದ ದೆಹಲಿ ಏರ್ಪೋರ್ಟ್ ಆಡಳಿತ, ಅತಿಯಾದ ಮಳೆಯಿಂದಾಗಿ ವಿಮಾನನಿಲ್ದಾಣದಲ್ಲಿ ನೀರು ತುಂಬಿದೆ. ಅದನ್ನು ಸರಿಪಡಿಸಲು ನಮ್ಮ ಸಿಬ್ಬಂದಿ ಶ್ರಮಿಸಿದರು. ಇನ್ನು ಅತಿಯಾದ ಮಳೆ, ಏರ್ಪೋರ್ಟ್ನಲ್ಲಿ ನೀರು ತುಂಬಿದ ಕಾರಣಕ್ಕೆ ಇಂದು 5 ವಿಮಾನಗಳ ಹಾರಾಟ ರದ್ದುಪಡಿಸಲಾಯಿತು ಎಂದು ಹೇಳಿದೆ.
बूँद-बूँद से बनता है सागर ??♀️#DelhiAirport claims it’s all clear now and the water has been drained out.
Latest pics below pic.twitter.com/5U1tKeFtUR
— Poulomi Saha (@PoulomiMSaha) September 11, 2021
ಮನೆ ಕುಸಿತ ಪೂರ್ವ ದೆಹಲಿಯ ರೋಹಿಣಿ ಸೆಕ್ಟರ್ 22ರಲ್ಲಿ ಇಂದು ಮುಂಜಾನೆ 7ಗಂಟೆ ಹೊತ್ತಿಗೆ ನಾಲ್ಕು ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದಿದೆ. ಈ ಕಟ್ಟಡ ತುಂಬ ಹಳೆಯದಾಗಿತ್ತು. ಮಳೆಯಿಂದಾಗಿ ಕುಸಿದಿದೆ. ಈ ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ. ಈ ದೊಡ್ಡ ಕಟ್ಟದ ಅಕ್ಕಪಕ್ಕದ ಮನೆಗಳ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಆ ಮನೆಗಳೂ ಖಾಲಿ ಇದ್ದುದರಿಂದ ಯಾವುದೇ ಅಪಾಯ ಆಗಲಿಲ್ಲ.
ಇದನ್ನೂ ಓದಿ: ಕೆಲವೊಮ್ಮೆ ರೈತರ ಪರವಾಗಿ ನಿಂತರೂ ವಿಲನ್ ಆಗುತ್ತೇವೆ; ಸತೀಶ್ ನೀನಾಸಂ ನೇರ ಮಾತು
Bhoot Police: ಗೆಳೆಯ ಅರ್ಜುನ್ ಕಪೂರ್ ನಟನೆಯ ‘ಭೂತ್ ಪೊಲೀಸ್’ ಚಿತ್ರಕ್ಕೆ ಮಲೈಕಾ ರಿಯಾಕ್ಷನ್ ಏನು?
Published On - 5:27 pm, Sat, 11 September 21