NEET PG Counselling 2021: ನೀಟ್​ ಪಿಜಿ ಕೌನ್ಸಿಲಿಂಗ್ ರಿಜಿಸ್ಟ್ರೇಶನ್​ ಪ್ರಾರಂಭ​; ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ವಿಧಾನ ಹೀಗಿದೆ

| Updated By: Lakshmi Hegde

Updated on: Jan 12, 2022 | 4:03 PM

ನ್ಯಾಶನಲ್​ ಬೋರ್ಡ್ ಆಫ್ ಎಕ್ಸಾಮಿನೇಶನ್​ ನಡೆಸಿದ ನೀಟ್​ ಪಿಜಿಯಲ್ಲಿ, ಶ್ರೇಣಿಗಳ ಆಧಾರದ ಮೇಲೆ ಆಲ್​ ಇಂಡಿಯಾ ಕೋಟಾ ಸೀಟುಗಳಿಗೆ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳೂ ಕೂಡ ನೀಟ್​ ಪಿಜಿ ಕೌನ್ಸಿಲಿಂಗ್​​ಗೆ ಅರ್ಹರಾಗಿರುತ್ತಾರೆ.

NEET PG Counselling 2021: ನೀಟ್​ ಪಿಜಿ ಕೌನ್ಸಿಲಿಂಗ್ ರಿಜಿಸ್ಟ್ರೇಶನ್​ ಪ್ರಾರಂಭ​; ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳುವ ವಿಧಾನ ಹೀಗಿದೆ
ಸಾಂಕೇತಿಕ ಚಿತ್ರ (ಪಿಟಿಐ ಚಿತ್ರ)
Follow us on

ಬಹುದಿನಗಳಿಂದಲೂ ವಿಳಂಬವಾಗಿದ್ದ ನೀಟ್ ಪಿಜಿ ಕೌನ್ಸಿಲಿಂಗ್ (NEET PG Counselling) ಇಂದಿನಿಂದ ಶುರುವಾಗಿದ್ದು, ವೈದ್ಯಕೀಯ ಕೌನ್ಸಿಲಿಂಗ್​ ಸಮಿತಿ (MCC-Medical Conselling Committee) ನೋಂದಣಿ ಪ್ರಕ್ರಿಯೆಯನ್ನು ಶುರು ಮಾಡಿದೆ. ಅರ್ಹ ಅಭ್ಯರ್ಥಿಗಳು ಈ ಎಂಸಿಸಿಯ ಅಧಿಕೃತ ವೆಬ್​ಸೈಟ್ mcc.nic.inಗೆ  ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಒಂದನೇ ಹಂತದ ಕೌನ್ಸಿಲಿಂಗ್​ಗೆ ಅರ್ಜಿ ಸಲ್ಲಿಸಲು (ನೋಂದಣಿ ಮಾಡಿಕೊಳ್ಳಲು) ಕೊನೇ ದಿನ ಜನವರಿ 17 ಎಂದು ತಿಳಿಸಲಾಗಿದೆ. ಆಲ್​ ಇಂಡಿಯಾ ಕೋಟಾದ ನೀಟ್​ ಪಿಜಿ ಕೌನ್ಸಿಲಿಂಗ್​​ ಈ ಬಾರಿ ಆನ್​ಲೈನ್​ನಲ್ಲಿ ನಡೆಯಲಿದ್ದು ಒಟ್ಟು ನಾಲ್ಕು ಸುತ್ತುಗಳಿರುತ್ತವೆ.( ರೌಂಡ್​-1, ರೌಂಡ್​-2, ಎಐಕ್ಯೂ ಮಾಪ್ ಅಪ್​ ರೌಂಡ್​ ಮತ್ತು ಎಐಕ್ಯೂ ಸ್ಟ್ರೇ ವೆಕೆನ್ಸಿ ರೌಂಡ್​). ನ್ಯಾಶನಲ್​ ಬೋರ್ಡ್ ಆಫ್ ಎಕ್ಸಾಮಿನೇಶನ್​ ನಡೆಸಿದ ನೀಟ್​ ಪಿಜಿಯಲ್ಲಿ, ಶ್ರೇಣಿಗಳ ಆಧಾರದ ಮೇಲೆ ಆಲ್​ ಇಂಡಿಯಾ ಕೋಟಾ ಸೀಟುಗಳಿಗೆ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳೂ ಕೂಡ ನೀಟ್​ ಪಿಜಿ ಕೌನ್ಸಿಲಿಂಗ್​​ಗೆ ಅರ್ಹರಾಗಿರುತ್ತಾರೆ. ಕೌನ್ಸಿಲಿಂಗ್​ಗೆ ಅಗತ್ಯವಿರುವ ಮಾಹಿತಿಗಳು ನಿಮಗೆ ಎಂಸಿಸಿ ವೆಬ್​ಸೈಟ್​ನಲ್ಲಿ ಸಿಗಲಿದೆ.

ನೋಂದಣಿ ಮಾಡಿಕೊಳ್ಳುವ ವಿಧಾನ ಇಲ್ಲಿದೆ..

1.ವೈದ್ಯಕೀಯ ಕೌನ್ಸಿಲಿಂಗ್​ ಸಮಿತಿಯ ಅಧಿಕೃತ ವೆಬ್​ಸೈಟ್​ mcc.nic.in.ಗೆ ಭೇಟಿ ಕೊಡಿ
2. ಹೋಮ್​ ಪೇಜ್​​ನಲ್ಲಿ ಕಾಣಿಸುವ ‘Registration for NEET PG Counselling 2021’ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
3. ಆಗ ಹೊಸದೊಂದು ಸ್ಕ್ರೀನ್​ ತೆರೆದುಕೊಳ್ಳುತ್ತದೆ.
4. ಅಲ್ಲಿ ಕೇಳಲಾದ ಮಾಹಿತಿಗಳನ್ನು ತುಂಬಿ, ಸಬ್​ಮಿಟ್​ ಮಾಡಿ.
5. ಆಗ ಕಾಣಿಸಿಕೊಳ್ಳುವ ಅರ್ಜಿಯನ್ನು ಸರಿಯಾಗಿ ತುಂಬಿ Submit ಮಾಡಿ ಮತ್ತು ಶುಲ್ಕವನ್ನು ಪಾವತಿಸಿ.  ಹಾಗೇ, ತುಂಬಲಾದ ಅರ್ಜಿಯ ಒಂದು ಪ್ರಿಂಟ್​ ಕೂಡ ತೆಗೆದಿಟ್ಟುಕೊಳ್ಳಿ.

ಬೇಕಾಗುವ ದಾಖಲೆಗಳೇನು?: 1) 2021 ನೀಟ್​ ಪರೀಕ್ಷೆಯ ಪ್ರವೇಶ ಪತ್ರ 2)2021ನೇ ನೀಟ್ ಪರೀಕ್ಷೆಯ ಫಲಿತಾಂಶ ಪಟ್ಟಿ, ಯಾವುದೇ ರ್ಯಾಂಕ್​ ಬಂದಿದ್ದರೆ ಅದರ ಕಾರ್ಡ್​ 3)10ನೇ ತರಗತಿ ಪಾಸ್​ ಆಗಿರುವ ಪ್ರಮಾಣ ಪತ್ರ 4)12ನೇ ತರಗತಿ ಉತ್ತೀರ್ಣವಾಗಿರುವ ಸರ್ಟಿಫಿಕೇಟ್​ 5)ಸರ್ಕಾರ ಮಾನ್ಯ ಮಾಡಿರುವ ಐಡಿ ಕಾರ್ಡ್​ 6)ಪಾಸ್​ಪೋರ್ಟ್​ ಸೈಝ್​ ಫೋಟೋ 7)ಎಂಬಿಬಿಎಸ್​, ಬಿಡಿಎಸ್​ ಅಂಕಪಟ್ಟಿ 8)ಜಾತಿ ಪ್ರಮಾಣ ಪತ್ರ 9)ಇಂಟರ್ನ್​ಶಿಪ್​ ಲೆಟರ್​ 10)ಎಂಸಿಐನಿಂದ ನೀಡಲಾದ ನೋಂದಣಿ ಸರ್ಟಿಫಿಕೇಟ್​.

2021ನೇ ಸಾಲಿನ ನೀಟ್ ಪಿಜಿ ಕೌನ್ಸಿಲಿಂಗ್​ ಜನವರಿ 12ರಿಂದ ಪ್ರಾರಂಭವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಭಾನುವಾರ ಘೋಷಣೆ ಮಾಡಿದ್ದರು. ಹಿಂದಿಯಲ್ಲಿ ಟ್ವೀಟ್ ಮಾಡಿದ್ದ ಅವರು, ಸುಪ್ರೀಂಕೋರ್ಟ್​ ಆದೇಶವನ್ನು ಗೌರವಿಸಲಾಗುತ್ತದೆ. ಜನವರಿ 12ರಿಂದ ಕೌನ್ಸಿಲಿಂಗ್ ನಡೆಸುವುದಾಗಿ ಆರೋಗ್ಯ ಸಚಿವಾಲಯ ರೆಸಿಡೆಂಟ್​ ವೈದ್ಯರಿಗೆ ಭರವಸೆ ನೀಡುತ್ತಿದೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ದೇಶಕ್ಕೆ ಇನ್ನಷ್ಟು ಶಕ್ತಿ ತುಂಬಲಾಗುವುದು ಎಂದು ತಿಳಿಸಿದ್ದರು.

ಇದನ್ನೂ ಓದಿ: ನೀಟ್​ ಪಿಜಿ ಮತ್ತು ಯುಜಿ ಕೌನ್ಸೆಲಿಂಗ್ ಅಧಿಸೂಚನೆಗೆ ಅನುಗುಣವಾಗಿ ನಡೆಯಲಿದೆ: ಸುಪ್ರೀಂಕೋರ್ಟ್