ಕೊವ್ಯಾಕ್ಸಿನ್​, ಕೊವಿಶೀಲ್ಡ್ ಲಸಿಕೆಗಳ ನಿಯಮಿತ ಮಾರುಕಟ್ಟೆ ಅನುಮೋದನೆಗಾಗಿ ಸಿಡಿಎಸ್​ಸಿಒ ವಿಷಯ ತಜ್ಞರ ಸಮಿತಿಯಿಂದ ಶಿಫಾರಸ್ಸು

| Updated By: Lakshmi Hegde

Updated on: Jan 20, 2022 | 8:16 AM

ಕೊವಿಡ್​ 19 ಲಸಿಕೆಗಳ ಮಾರುಕಟ್ಟೆ ಬಳಕೆಗೆ ಅನುಮತಿ ನೀಡಬೇಕು ಎಂದು ಸೀರಮ್​ ಇನ್​ಸ್ಟಿಟ್ಯೂಟ್​ ಮತ್ತು ಭಾರತ್​ ಬಯೋಟೆಕ್​ ಎರಡೂ ಕಂಪನಿಗಳು ಎರಡನೇ ಬಾರಿ ಸಿಡಿಎಸ್​ಸಿಒದ ವಿಷಯ ತಜ್ಞರ ಸಮಿತಿಗೆ ಅರ್ಜಿ ಸಲ್ಲಿಸಿದ್ದವು.

ಕೊವ್ಯಾಕ್ಸಿನ್​, ಕೊವಿಶೀಲ್ಡ್ ಲಸಿಕೆಗಳ ನಿಯಮಿತ ಮಾರುಕಟ್ಟೆ ಅನುಮೋದನೆಗಾಗಿ ಸಿಡಿಎಸ್​ಸಿಒ ವಿಷಯ ತಜ್ಞರ ಸಮಿತಿಯಿಂದ ಶಿಫಾರಸ್ಸು
ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​
Follow us on

ತುರ್ತು ಪರಿಸ್ಥಿತಿಯಲ್ಲಿ  ಷರತ್ತುಬದ್ಧ ಅನುಮತಿ ಪಡೆದಿರುವ ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳಿಗೆ ಸಂಪೂರ್ಣವಾಗಿ ನಿಯಮಿತ ಮಾರುಕಟ್ಟೆ ಬಳಕೆಗೆ ಅನುಮೋದನೆ ನೀಡುವಂತೆ ಭಾರತದ ಔಷಧ ನಿಯಂತ್ರಕರ ವಿಷಯ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ. ಲಸಿಕೆಗಳಿಗೆ ಮಾರುಕಟ್ಟೆ ದೃಢೀಕರಣ ಸಿಕ್ಕರೆ, ಅವು ಔಷಧ ಮಾರುಕಟ್ಟೆಯಲ್ಲಿ ಸಿಗಲಿವೆ. ಸೀರಂ ಇನ್​ಸ್ಟಿಟ್ಯೂಟ್​​ನ ಕೊವಿಶೀಲ್ಡ್​ ಮತ್ತು ಭಾರತ್​ ಬಯೋಟೆಕ್​​ನ ಕೊವ್ಯಾಕ್ಸಿನ್​  ಲಸಿಕೆಗಳ ಸ್ಥಿತಿಯನ್ನು ಅಪ್​ಗ್ರೇಡ್ ಮಾಡಬೇಕು ಅಂದರೆ, ಸದ್ಯ ಅವುಗಳನ್ನು ತುರ್ತುಸಂದರ್ಭದಲ್ಲಿ ವಯಸ್ಕರಿಗೆ ಷರತ್ತುಬದ್ಧವಾಗಿ, ನಿಯಂತ್ರಿತವಾಗಿ ನೀಡಲಾಗುತ್ತಿದೆ.  ಈ ತುರ್ತು ಪರಿಸ್ಥಿತಿಯಲ್ಲಿ ನಿಯಂತ್ರಿತ ಬಳಕೆ ಎಂಬ ಲೇಬಲ್​ ತೆಗೆದುಹಾಕಿ, ಮಾರುಕಟ್ಟೆ ಬಳಕೆಗೆ ಅನುಮೋದನೆ ನೀಡಬೇಕು ಎಂದು ಡ್ರಗ್ಸ್​ ಕಂಟ್ರೋಲರ್ ಜನರಲ್​​ ಆಫ್​ ಇಂಡಿಯಾ(ಡಿಸಿಜಿಐ)ಕ್ಕೆ ವಿಷಯ ತಜ್ಞರ ಸಮಿತಿ ಸಲಹೆ ನೀಡಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್​ಸಿಒ), ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳ ಸ್ಥಿತಿಯನ್ನು ನವೀಕರಿಸಿ, ಅವುಗಳಿಗೆ ಮಾರುಕಟ್ಟೆ ಬಳಕೆ ಅನುಮತಿ ನೀಡಬೇಕು ಎಂದು ಸಿಡಿಎಸ್​ಸಿಒದ ವಿಷಯ ತಜ್ಞರ ಸಮಿತಿ ಡಿಸಿಜಿಐಗೆ ಶಿಫಾರಸ್ಸು ಮಾಡಿದೆ. ಶಿಫಾರಸ್ಸನ್ನು ಡಿಸಿಜಿಐ ಮೌಲ್ಯಮಾಪನ ಮಾಡಲಿದ್ದು, ನಂತರ ನಿರ್ಧಾರ ಪ್ರಕಟಿಸಲಿದೆ ಎಂದು  ಹೇಳಿದೆ. ತಮ್ಮ ಕೊವಿಡ್​ 19 ಲಸಿಕೆಗಳ ಮಾರುಕಟ್ಟೆ ಬಳಕೆಗೆ ಅನುಮತಿ ನೀಡಬೇಕು ಎಂದು ಸೀರಮ್​ ಇನ್​ಸ್ಟಿಟ್ಯೂಟ್​ ಮತ್ತು ಭಾರತ್​ ಬಯೋಟೆಕ್​ ಎರಡೂ ಕಂಪನಿಗಳು ಎರಡನೇ ಬಾರಿ ಸಿಡಿಎಸ್​ಸಿಒದ ವಿಷಯ ತಜ್ಞರ ಸಮಿತಿಗೆ ಅರ್ಜಿ ಸಲ್ಲಿಸಿದ್ದವು. ಅದನ್ನು ಬುಧವಾರ ಪರಿಶೀಲನೆ ಮಾಡಿದ ಸಮಿತಿ, ಡಿಸಿಜಿಐಗೆ ಶಿಫಾರಸ್ಸು ಸಲ್ಲಿಸಿದೆ. ಹಾಗೇ, ಪೂರ್ಣಪ್ರಮಾಣದ ಮಾರುಕಟ್ಟೆ ಬಳಕೆಗೂ ಕೆಲವು ಷರತ್ತುಗಳು ಅನ್ವಯ ಆಗಲಿವೆ  ಎಂದು ಪಿಟಿಐ ವರದಿ ಮಾಡಿದೆ.

ಕೊವ್ಯಾಕ್ಸಿನ್​ ಮತ್ತು ಕೊವಿಶೀಲ್ಡ್​ಗಳು ಭಾರತದಲ್ಲಿ ಕೊರೊನಾ ವಿರುದ್ಧ ಹೋರಾಟದಲ್ಲಿ ಕೈ ಹಿಡಿದ ಸ್ವದೇಶಿ ಲಸಿಕೆಗಳು. ಇವೆರಡಕ್ಕೂ 2021ರ ಜನವರಲ್ಲಿ ತುರ್ತು ಪರಿಸ್ಥಿತಿಯ ಬಳಕೆಗೆ ಅನುಮತಿ ಸಿಕ್ಕಿದೆ. ಅದರಂತೆ ಈಗಾಗಲೇ ದೇಶಾದ್ಯಂತ ಲಕ್ಷಾಂತರ ಜನರಿಗೆ ಈ ಎರಡು ಕೊರೊನಾ ಲಸಿಕೆಗಳನ್ನು ನೀಡಲಾಗುತ್ತಿದೆ.  ಎರಡೂ ಲಸಿಕೆಗಳೂ ಎರಡು ಡೋಸ್​​ನವಾಗಿದ್ದು, 2-8 ಡಿಗ್ರಿ ಸೆಲ್ಸಿಯಸ್​​ ತಾಪಮಾನದಲ್ಲಿ ರಕ್ಷಿಸಬೇಕಾಗುತ್ತದೆ. ಇದೀಗ ಒಮ್ಮೆ ಮಾರುಕಟ್ಟೆ ಬಳಕೆಗೆ ಅನುಮೋದನೆ ಸಿಕ್ಕರೂ, ಕೂಡಲೇ ಚಿಲ್ಲರೆ ಮಾರುಕಟ್ಟೆಯಲ್ಲಿ ಲಸಿಕೆಗಳು ಸಿಗಲಾರವು ಎಂದು ಹೇಳಲಾಗಿದೆ.

ಇದನ್ನೂ ಓದಿ:  ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಚಯ, ಮದುವೆಯಾಗುವುದಾಗಿ ನಂಬಿಸಿ ಹಣಕ್ಕೆ ಬ್ಲ್ಯಾಕ್​ಮೇಲ್: ಆರೋಪಿ ಅರೆಸ್ಟ್