Kannada News National Sambalpur district administration shifted 47 homeless persons and beggars to the newly built 112 room Integrated Infrastructure Complex in Odisha
ಭಿಕ್ಷುಕರ ನೆಮ್ಮದಿಯ ಬದುಕಿಗೆ ಬೆನ್ನೆಲುಬಾಗಿ ನಿಂತ ಸರ್ಕಾರ, ಏನದು ವ್ಯವಸ್ಥೆ? ಇಲ್ಲಿದೆ ನೋಡಿ
ಒಡಿಶಾ ಸರ್ಕಾರ ಜನಪರ ಕಾಳಜಿಯೊಂದಿಗಿನ ತನ್ನ ಕೆಲಸ ಮುಂದುವರಿಸಿದ್ದು, ಈ ಬಾರಿ ಭಿಕ್ಷುಕರು, ನಿರ್ಗತಿಕರಿಗೆ ಬೆನ್ನೆಲುಬಾಗಿ ನಿಂತಿದೆ. ಅವರಿಗೆಂದೇ ಐಷಾರಾಮಿ ಎನಿಸುವಂತಹ ವ್ಯವಸ್ಥೆ ಮಾಡಿದೆ. ಸಂಬಲಪುರ ಜಿಲ್ಲಾಡಳಿತ ಈ ವ್ಯವಸ್ಥೆ ನಿರ್ಮಿಸಿಕೊಟ್ಟಿದೆ. ಭಿಕ್ಷುಕರಿಗೆ ಉತ್ತಮ ನೆಲೆ ಕಲ್ಪಿಸುವ ಮೂಲಕ ಅವರ ಜೀವನ ಸುಧಾರಣೆ ಮಾಡುವುದರ ಜೊತೆಗೆ ಸಂಬಲಪುರವನ್ನು ಭಿಕ್ಷುಕರೇ ಇಲ್ಲದ ನಗರವನ್ನಾಗಿ ಮಾಡುವುದು ಇದರ ಸದುದ್ದೇಶವಾಗಿದೆ.