ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಚಯ, ಮದುವೆಯಾಗುವುದಾಗಿ ನಂಬಿಸಿ ಹಣಕ್ಕೆ ಬ್ಲ್ಯಾಕ್​ಮೇಲ್: ಆರೋಪಿ ಅರೆಸ್ಟ್

ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಚಯ ಆಗಿ ಮದುವೆಯಾಗುವುದಾಗಿ ನಂಬಿಸಿ ಮಹಿಳೆ ಜತೆ ಸ್ನೇಹ ಬೆಳೆಸಿದ್ದ ಆರೋಪಿ ವಿಜಯ್‌, ಮಹಿಳೆ ಜೊತೆ ಸಲುಗೆಯಿಂದ ಇದ್ದ ಸಮಯದಲ್ಲಿ ತೆಗೆದ ಕೆಲವು ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದ.

ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಚಯ, ಮದುವೆಯಾಗುವುದಾಗಿ ನಂಬಿಸಿ ಹಣಕ್ಕೆ ಬ್ಲ್ಯಾಕ್​ಮೇಲ್: ಆರೋಪಿ ಅರೆಸ್ಟ್
ಆರೋಪಿ ವಿಜಯ್‌ ಕುಮಾರ್‌
Follow us
TV9 Web
| Updated By: ಆಯೇಷಾ ಬಾನು

Updated on:Jan 20, 2022 | 8:04 AM

ಬೆಂಗಳೂರು: ಮಹಿಳೆ ಮದುವೆಯಾಗುವುದಾಗಿ ನಂಬಿಸಿ ಹಣಕ್ಕೆ ಬ್ಲ್ಯಾಕ್‌ಮೇಲ್ ಮಾಡಿದ ಹಿನ್ನೆಲೆ ಆರೋಪಿ ವಿಜಯ್‌ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮ್ಯಾಟ್ರಿಮೊನಿಯಲ್ಲಿ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ ಮದುವೆಯಾಗುವುದಾಗಿ ನಂಬಿಸಿ ಬ್ಲ್ಯಾಕ್‌ಮೇಲ್ ಮಾಡಿದ್ದ.

ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಚಯ ಆಗಿ ಮದುವೆಯಾಗುವುದಾಗಿ ನಂಬಿಸಿ ಮಹಿಳೆ ಜತೆ ಸ್ನೇಹ ಬೆಳೆಸಿದ್ದ ಆರೋಪಿ ವಿಜಯ್‌, ಮಹಿಳೆ ಜೊತೆ ಸಲುಗೆಯಿಂದ ಇದ್ದ ಸಮಯದಲ್ಲಿ ತೆಗೆದ ಕೆಲವು ಫೋಟೋಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದ. ಐವತ್ತು ಸಾವಿರ ಹಣ ನೀಡಿಬೇಕು ಇಲ್ಲವಾದ್ರೆ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಮಹಿಳೆ ಹಣ ನೀಡದ ಹಿನ್ನೆಲೆ ಮಹಿಳೆ ಹೆಸರಲ್ಲಿ ಇನ್‌ಸ್ಟಾಗ್ರಾಂನಲ್ಲಿ 3 ಖಾತೆ ತೆರೆದಿದ್ದ. ಇಬ್ಬರೂ ಜೊತೆಯಲ್ಲಿರುವ ಫೋಟೋವನ್ನು ಮಹಿಳೆ ಕುಟುಂಬಸ್ಥರಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಿದ್ದ.

ಆಗ ಕುಟುಂಬಸ್ಥರ ಮುಂದೆ ಮಾನ ಹೋಯ್ತು ಅಂತ ನೊಂದ ಮಹಿಳೆ ಫೋಟೋ ಡಿಲೀಟ್ ಮಾಡಲು ಆರೋಪಿ ವಿಜಯ್‌ ಕುಮಾರ್ಗೆ ಬೇಡಿಕೊಂಡಿದ್ದಳು. ಆಗ ಆರೋಪಿ ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದ. ಮಹಿಳೆ ಫೋನ್ ಪೇ ಮೂಲಕ 50 ಸಾವಿರ ಹಣ ನೀಡಿದ್ದಳು. ಇದಾದ ನಂತರ ಆರೋಪಿ ವಿಜಯ್ ಪದೇಪದೆ ಮಹಿಳೆ ಬಳಿ ಹಣಕ್ಕೆ ಬೇಡಿಕೆ ಇಡ್ತಿದ್ದ. ಇದರಿಂದ ಬೇಸತ್ತ ಮಹಿಳೆ ಈಶಾನ್ಯ ವಿಭಾಗ CEN ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿಜಯ್ ಬಳಿ ಎರಡು ಮೊಬೈಲ್ ಫೋನ್, ಡಾಂಗಲ್ ವಶಕ್ಕೆ‌ ಪಡೆಯಲಾಗಿದೆ.

ಇದನ್ನೂ ಓದಿ: Petrol and Diesel Rate Today: ಬೆಂಗಳೂರು ಸೇರಿದಂತೆ ಇತರ ನಗರಗಳ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

Published On - 7:58 am, Thu, 20 January 22