ಜನವರಿ 26ರಂದು ರಾಜಪಥ್​ನಲ್ಲಿ ಮೊಳಗಲಿದೆ ಕನ್ನಡದ ಧ್ವನಿ

|

Updated on: Jan 23, 2020 | 10:27 AM

ದೆಹಲಿ: ವಿವಿಧತೆಯಲ್ಲಿ ಏಕತೆ… ಹಲವು ಧರ್ಮಗಳಿದ್ದರೂ ಒಂದೇ ಭಾವೈಕ್ಯತೆ… ಸರ್ವಜನಾಂಗದ ಶಾಂತಿಯ ತೋಟವೇ ಭಾರತ… ಗಣರಾಜ್ಯೋತ್ಸವ ಅಂದ್ರೆ ಇಡೀ ರಾಷ್ಟ್ರಪ್ರೇಮ ಎಲ್ಲರನ್ನೂ ಉಕ್ಕುತ್ತೆ. ಅದ್ರಲ್ಲೂ, ಭಾರತಾಂಬೆಯ ನೆಲದ ಅಷ್ಟೂ ಸಾಂಸ್ಕೃತಿಕ ಭಾವೈಕ್ಯತೆ ಬಿಂಬಿಸುವ ಸ್ತಬ್ಧಚಿತ್ರಗಳೇ ಸೆಂಟರ್​ ಹಾಫ್​ ಅಟ್ರ್ಯಾಕ್ಷನ್. ದೆಹಲಿಯ ರಾಜಪಥ್​ನಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​ ಈ ಬಾರಿ ಕರ್ನಾಟಕಕ್ಕೆ ವಿಶೇಷವಾಗಿದೆ. ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನುಭವ ಮಂಟಪ! ದೆಹಲಿಯ ರಾಜಪಥ್​ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ. ಈ ಬಾರಿಯ ಪರೇಡ್​ನಲ್ಲಿ ಕರ್ನಾಟಕದ 12ನೇ ಶತಮಾನದ ಲಾರ್ಡ್​ […]

ಜನವರಿ 26ರಂದು ರಾಜಪಥ್​ನಲ್ಲಿ ಮೊಳಗಲಿದೆ ಕನ್ನಡದ ಧ್ವನಿ
Follow us on

ದೆಹಲಿ: ವಿವಿಧತೆಯಲ್ಲಿ ಏಕತೆ… ಹಲವು ಧರ್ಮಗಳಿದ್ದರೂ ಒಂದೇ ಭಾವೈಕ್ಯತೆ… ಸರ್ವಜನಾಂಗದ ಶಾಂತಿಯ ತೋಟವೇ ಭಾರತ… ಗಣರಾಜ್ಯೋತ್ಸವ ಅಂದ್ರೆ ಇಡೀ ರಾಷ್ಟ್ರಪ್ರೇಮ ಎಲ್ಲರನ್ನೂ ಉಕ್ಕುತ್ತೆ. ಅದ್ರಲ್ಲೂ, ಭಾರತಾಂಬೆಯ ನೆಲದ ಅಷ್ಟೂ ಸಾಂಸ್ಕೃತಿಕ ಭಾವೈಕ್ಯತೆ ಬಿಂಬಿಸುವ ಸ್ತಬ್ಧಚಿತ್ರಗಳೇ ಸೆಂಟರ್​ ಹಾಫ್​ ಅಟ್ರ್ಯಾಕ್ಷನ್. ದೆಹಲಿಯ ರಾಜಪಥ್​ನಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​ ಈ ಬಾರಿ ಕರ್ನಾಟಕಕ್ಕೆ ವಿಶೇಷವಾಗಿದೆ.

ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅನುಭವ ಮಂಟಪ!
ದೆಹಲಿಯ ರಾಜಪಥ್​ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ. ಈ ಬಾರಿಯ ಪರೇಡ್​ನಲ್ಲಿ ಕರ್ನಾಟಕದ 12ನೇ ಶತಮಾನದ ಲಾರ್ಡ್​ ಬಸವೇಶ್ವರ ಹಾಗೂ ಅನುಭವ ಮಂಟಪ ಸ್ತಬ್ಧ ಚಿತ್ರ ರಾರಾಜಿಸಲಿದೆ. ಜಾತಿ, ಮತ, ಲಿಂಗಭೇದ, ಧರ್ಮಭೇದದಿಂದ ನಲುಗಿದ್ದ ಸಮಾಜದಲ್ಲಿ ಪರಿವರ್ತನೆಗಾಗಿ ಬಸವೇಶ್ವರರು ನಡೆಸಿದ ಸಾಮಾಜಿಕ ಕ್ರಾಂತಿರೂಪವೇ ಅನುಭವ ಮಂಟಪ. ದೆಹಲಿಯ ಮಿಲಿಟರಿ ಕಂಟೋನ್‌ಮೆಂಟ್‌ನಲ್ಲಿ ಕಳೆದ 20 ದಿನಗಳಿಂದ ಈ ಸ್ತಬ್ಧಚಿತ್ರ ನಿರ್ಮಿಸಲಾಗಿದೆ. ಕಲಾವಿದ ಶಶಿಧರ್ ಅಡಪ ನೇತೃತ್ವದಲ್ಲಿ ಈ ಸ್ತಬ್ಧ ಚಿತ್ರ ನಿರ್ಮಾಣವಾಗಿದೆ. ಸ್ತಬ್ಧಚಿತ್ರದ ಮುಂಭಾಗ ಕಾಯಕವೇ ಕೈಲಾಸ ಪರಿಕಲ್ಪನೆಗೆ ಒತ್ತುಕೊಟ್ಟ ಲಾರ್ಡ್ ಬಸವೇಶ್ವರರ ಮೂರ್ತಿ ನಿರ್ಮಿಸಲಾಗಿದೆ. ಸ್ತಬ್ಧ ಚಿತ್ರದೊಂದಿಗೆ ಸಾಣೆಹಳ್ಳಿಯ ಶಿವಸಂಚಾರ ನಾಟಕ ತಂಡದ 27 ಕಲಾವಿದರು ಭಾಗವಹಿಸುತ್ತಿದ್ದು, ಈ ಕಲಾವಿದರು ವಿವಿಧ ಶರಣರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೇ ನೃತ್ಯ ಪ್ರದರ್ಶನ ಮಾಡಲಿದ್ದಾರೆ.

ಅನುಭವ ಮಂಟಪದಲ್ಲಿ ಮಾದಾರ ಚೆನ್ನಯ್ಯ, ಮೊಳಿಗೆ ಮಾರಯ್ಯ, ಅಕ್ಕಮಹಾದೇವಿ, ಉಡುತಡಿಯ ಮಹಾದೇವಿ, ಮಡಿವಾಳ ಮಾಚಿದೇವ ಪಾತ್ರಧಾರಿ ಕಲಾವಿದರು ಸ್ತಬ್ಧಚಿತ್ರದಲ್ಲಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ಮೋದಿ ಹಾಗೂ ಈ ಬಾರಿ ವಿದೇಶಿ ಅತಿಥಿ ಬ್ರೆಜಿಲ್ ಅಧ್ಯಕ್ಷ ಜೈರ್‌ ಬಲಸನೋರ್‌ ಈ ದೃಶ್ಯಗಳನ್ನ ಕಣ್ತುಂಬಿಕೊಳ್ಳಲಿದ್ದಾರೆ.

ಸ್ತಬ್ಧಚಿತ್ರಕ್ಕೆ ಸಂಬಂಧಿಸಿದ ಹಾಡು, ವಚನಗಳು ಕೂಡ ಮಾರ್ದನಿಸಲಿವೆ. ಜನವರಿ 26ರಂದು ರಾಜಪಥ್​ನಲ್ಲಿ ಕನ್ನಡದ ಧ್ವನಿ ಮೊಳಗಲಿದೆ. ನಾಡಿದ್ದು ರಾಜಪಥ್ ನಲ್ಲಿ ಪರೇಡ್ ರಿಹರ್ಸಲ್‌ ನಡೆಯಲಿದೆ. ಕಳೆದ 20 ವರ್ಷಗಳಲ್ಲಿ 11ನೇ ಭಾರಿಗೆ ಕರ್ನಾಟಕದ ಸ್ತಬ್ದಚಿತ್ರವು ಪರೇಡ್‌ಗೆ ಆಯ್ಕೆಯಾಗಿದೆ.