ರೋಮಾಂಚಕಾರಿ ‘ವರ್ಟಿಕಲ್ ಚಾರ್ಲಿ’ ಹಾಗೂ ‘ಏಕಲವ್ಯ’ ಪ್ರದರ್ಶನ ತೋರಿದ ರಫೇಲ್ ಜೆಟ್ ವಿಮಾನ

| Updated By: ganapathi bhat

Updated on: Apr 06, 2022 | 8:38 PM

ಇಂದು ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನವು ನೀಡಿದ ವರ್ಟಿಕಲ್ ಚಾರ್ಲಿ ಹಾಗೂ ಏಕಲವ್ಯ ಪ್ರದರ್ಶನವು ಜನರ ಮನಸೂರೆಗೊಂಡಿತು. ಭಾರತದ ಸೇನೆಯ ಭಾಗವಾಗಿರುವ ಎಂಟು ರಫೇಲ್ ಜೆಟ್ ವಿಮಾನಗಳ ಪೈಕಿ ಒಂದು ವಿಮಾನವು 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿತು.

ರೋಮಾಂಚಕಾರಿ ‘ವರ್ಟಿಕಲ್ ಚಾರ್ಲಿ’ ಹಾಗೂ ‘ಏಕಲವ್ಯ’ ಪ್ರದರ್ಶನ ತೋರಿದ ರಫೇಲ್ ಜೆಟ್ ವಿಮಾನ
ಯುದ್ಧ ವಿಮಾನಗಳ ಪ್ರದರ್ಶನ ವೀಕ್ಷಿಸುತ್ತಿರುವ ಗಣ್ಯರು
Follow us on

ದೆಹಲಿ: ವಾಯುಪಡೆಗೆ ಈಚೆಗೆ ಸೇರ್ಪಡೆಯಾದ ರಫೇಲ್ ಜೆಟ್ ವಿಮಾನವು ಇಂದು ನಡೆದ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿತು. ಮೊತ್ತ ಮೊದಲ ಬಾರಿಗೆ ರೋಮಾಂಚಕಾರಿಯಾದ ‘ವರ್ಟಿಕಲ್ ಚಾರ್ಲಿ’ ಹಾಗೂ ‘ಏಕಲವ್ಯ’ ಕಸರತ್ತು ಪ್ರದರ್ಶನ ಮಾಡಿ ಜನರ ಮನಸೂರೆಗೊಂಡಿತು.

ಎರಡು ಜಾಗ್ವಾರ್ ವಿಮಾನಗಳೊಂದಿಗೆ, ರಫೇಲ್ ಜೆಟ್ ವಿಮಾನ ಹಾಗೂ ಎರಡು MiG-29 ವಿಮಾನಗಳು ‘ಏಕಲವ್ಯ’ ಪ್ರದರ್ಶನ ತೋರಿದವು. 300 ಮೀಟರ್ ಎತ್ತರದಲ್ಲಿ, ಗಂಟೆಗೆ 780 ಕಿಮೀ ವೇಗದಲ್ಲಿ ಐದು ಜೆಟ್ ವಿಮಾನಗಳು V ಆಕಾರ ರೂಪಿಸಿದವು. ರಫೇಲ್ ಯುದ್ಧ ವಿಮಾನ ಏಕಲವ್ಯ ಪ್ರದರ್ಶನದ, V ಆಕೃತಿಯಲ್ಲಿ ಮುಂಚೂಣಿಯಲ್ಲಿ ಹಾರಿ, ನೆರೆದ ಜನರನ್ನು ಚಕಿತಗೊಳಿಸಿತು.

ರಫೇಲ್ ಯುದ್ಧ ವಿಮಾನವನ್ನು ಹರ್​ಕಿರತ್ ಸಿಂಗ್ ಮತ್ತು ಕಿಸ್ಲಾಯ್​ಕಾಂತ್ ಗಂಟೆಗೆ 900 ಕಿಮೀ ವೇಗದಲ್ಲಿ ಹಾರಿಸಿ, ‘ವರ್ಟಿಕಲ್ ಚಾರ್ಲಿ’ ಪ್ರದರ್ಶನ ನೀಡಿದರು. ಒಂದು ಮಟ್ಟದಲ್ಲಿ ಹಾರುತ್ತಿರುವ ಯುದ್ಧ ವಿಮಾನವು ತಕ್ಷಣಕ್ಕೆ ಲಂಬವಾಗಿ ಮೇಲಕ್ಕೆ ಹಾರುತ್ತಾ, ಹಲವು ಬಾರಿ ರೋಲ್ ಆಗಿ, ಬಳಿಕ ಎತ್ತರದಲ್ಲಿ ಸ್ಥಿರವಾಗುವುದನ್ನು ‘ವರ್ಟಿಕಲ್ ಚಾರ್ಲಿ’ ಎಂದು ಕರೆಯುತ್ತಾರೆ.

ಫ್ರಾನ್ಸ್​ನಲ್ಲಿ ತಯಾರಾಗಿರುವ ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಸೇನೆ ಖರೀದಿಸಿತ್ತು. ಕಳೆದ ವರ್ಷ ಸಪ್ಟೆಂಬರ್ 10ರಂದು ವಿಮಾನಗಳು ಅಂಬಾಲಾ ವಾಯುನೆಲೆಗೆ ಬಂದಿದ್ದವು. ಇಂದು ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನವು ನೀಡಿದ ವರ್ಟಿಕಲ್ ಚಾರ್ಲಿ ಪ್ರದರ್ಶನ ಜನರ ಕುತೂಹಲಕ್ಕೆ ಕಾರಣವಾಗಿತ್ತು.

ರಫೇಲ್ ಯುದ್ಧವಿಮಾನ

ಯುದ್ಧವಿಮಾನಗಳಿಂದ ಏರ್ ಶೋ

In Depth Report | ದೆಹಲಿ ಕೆಂಪುಕೋಟೆಯಲ್ಲಿ ರೈತಧ್ವಜ, ಟ್ರ್ಯಾಕ್ಟರ್ ಪರೇಡ್ ಈವರೆಗೆ ಏನೆಲ್ಲಾ ನಡೆಯಿತು?

Published On - 8:37 pm, Tue, 26 January 21