AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Delhi Violence ಕೇಂದ್ರದಿಂದ ಟ್ವಿಟರ್​ ಸಂಸ್ಥೆಗೆ ನೋಟಿಸ್​; ಆದೇಶ ಪಾಲಿಸದಿದ್ದರೆ ಕಾನೂನು ಕ್ರಮದ ಎಚ್ಚರಿಕೆ

#ModiPlanningFarmerGenocide ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ಶುರು ಮಾಡಿದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲೂ ಅದು ಟ್ರೆಂಡ್ ಆಗುತ್ತಿದೆ. ಅದರಲ್ಲೂ ಜ.26ರ ಹಿಂಸಾಚಾರ ನಡೆದ ಬಳಿಕ ಮೋದಿಯವರು ರೈತರ ನರಮೇಧ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂಬಂತ ಟ್ವೀಟ್​ಗಳು ಹರಿದಾಡಿದ್ದವು.

Delhi Violence ಕೇಂದ್ರದಿಂದ ಟ್ವಿಟರ್​ ಸಂಸ್ಥೆಗೆ ನೋಟಿಸ್​; ಆದೇಶ ಪಾಲಿಸದಿದ್ದರೆ ಕಾನೂನು ಕ್ರಮದ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us
Lakshmi Hegde
| Updated By: ಸಾಧು ಶ್ರೀನಾಥ್​

Updated on: Feb 03, 2021 | 6:12 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ರೈತರ ನರಮೇಧ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ (Modi Planning Farmer Genocide) ಎಂಬರ್ಥದ ಹ್ಯಾಷ್​ಟ್ಯಾಗ್​ಗಳನ್ನು ಬಳಸಿ ಮಾಡಲಾದ ಟ್ವೀಟ್​ಗಳನ್ನು, ಅಂಥ ಟ್ವಿಟರ್​ ಖಾತೆಗಳನ್ನು ತೆಗೆದುಹಾಕುವಂತೆ ಆದೇಶಿಸಿ ಕೇಂದ್ರ ಸರ್ಕಾರ ಟ್ವಿಟರ್ ಕಂಪನಿಗೆ ನೋಟಿಸ್​ ನೀಡಿದ್ದು, ನಮ್ಮ ಈ ಸೂಚನೆಯನ್ನು ಅನುಸರಿಸದೆ ಇದ್ದರೆ ಕಾನೂನಿನಡಿ ಶಿಕ್ಷಾರ್ಹ ಕ್ರಮ ಕೈಗೊಳ್ಳಲಾಗುವುದು ಎಂದೂ ತಿಳಿಸಿದೆ.

ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ಶುರು ಮಾಡಿದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲೂ ಅದು ಟ್ರೆಂಡ್ ಆಗುತ್ತಿದೆ. ಅದರಲ್ಲೂ ಜ. 26ರ ಟ್ರ್ಯಾಕ್ಟರ್​ ಱಲಿಯಂದು ಹಿಂಸಾಚಾರ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ರೈತರ ನರಮೇಧ ಮಾಡಲು ಸಂಚು ರೂಪಿಸುತ್ತಿದ್ದಾರೆ ಎಂಬಂತಹ ಟ್ವೀಟ್​ಗಳು ಹರಿದಾಡಿದ್ದವು. ಹಲವು ಟ್ವಿಟರ್​ ಅಕೌಂಟ್​ಗಳಿಂದ #ModiPlanningFarmerGenocide #FarmerGenocide ಎಂಬ ಹ್ಯಾಷ್​ಟ್ಯಾಗ್​​ನಡಿ ಟ್ವೀಟ್​, ರೀಟ್ವೀಟ್ ಆಗಿದ್ದವು.

ಇಂಥ ಹ್ಯಾಷ್​ಟ್ಯಾಗ್​ ಬಳಸಿದ 250ಕ್ಕೂ ಅಕೌಂಟ್​​ಗಳನ್ನು, ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬ್ಲಾಕ್​ ಮಾಡಿದ್ದ ಟ್ವಿಟರ್​ ಮತ್ತೆ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡು ಎಲ್ಲವನ್ನೂ ಅನ್​ಬ್ಲಾಕ್ ಮಾಡಿದೆ. ಆದರೆ ಟ್ವಿಟರ್​ ಅವಶ್ಯವಾಗಿ ನಮ್ಮ ಆದೇಶವನ್ನು ಪಾಲಿಸಬೇಕಾಗುತ್ತದೆ. ಇಲ್ಲದೆ ಹೋದರೆ ಕ್ರಮ ಅನಿವಾರ್ಯ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Delhi violence ನಟ ದೀಪ್​ ಸಿಧು ಪತ್ತೆಗೆ ಸಹಾಯ ಮಾಡಿದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ದೆಹಲಿ ಪೊಲೀಸರು