RBI Grade B Recruitment 2021: ಗ್ರೇಡ್​ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RBI; ಖಾಲಿ ಇವೆ ಒಟ್ಟು 322 ಹುದ್ದೆ

| Updated By: ಸಾಧು ಶ್ರೀನಾಥ್​

Updated on: Feb 10, 2021 | 2:07 PM

RBIನ rbi.org.in ವೆಬ್​ಸೈಟ್​ಗೆ ಹೋಗಿ, ಅಲ್ಲಿಂದಲೇ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್​ಲೈನ್​ ಅರ್ಜಿ ಭರ್ತಿ ಮಾಡಲು ಅನುಸರಿಸಬೇಕಾದ ಎಲ್ಲ ರೀತಿಯ ಸೂಚನೆಗಳು, ನಿಯಮಗಳು RBI ವೆಬ್​ಸೈಟ್​​​ನ Appendix-I (ಅನುಬಂಧ-1)ನಲ್ಲಿ ಇವೆ.

RBI Grade B Recruitment 2021: ಗ್ರೇಡ್​ ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RBI; ಖಾಲಿ ಇವೆ ಒಟ್ಟು 322 ಹುದ್ದೆ
ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ (ಸಾಂದರ್ಭಿಕ ಚಿತ್ರ)
Follow us on

ರಿಸರ್ವ್​ ಬ್ಯಾಂಕ್ ಆಫ್​ ಇಂಡಿಯಾ ಗ್ರೇಡ್ ಬಿ- ಡಿಆರ್​(ಜನರಲ್​){Grade B- DR (General)} ಹಾಗೂ ಡಿಇಪಿಆರ್​/ಡಿಎಸ್​ಐಎಂ-2021 ( DEPR/DSIM-2021) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ. ಹಾಗೇ, ಆರ್​​ಬಿಐ ಗ್ರೇಡ್​ ಬಿ ನೇಮಕಾತಿ-2021ರ ನೇಮಕಾತಿ ಸಂಬಂಧ ಅರ್ಜಿ ಸ್ವೀಕೃತಿ ಈಗಾಗಲೇ ಪ್ರಾರಂಭವಾಗಿದ್ದು, ಕೊನೆಯ ದಿನಾಂಕ ಫೆ.15. ಆಸಕ್ತರು ಅಪ್ಲಿಕೇಶನ್ ಹಾಕಬಹುದು ಎಂದು ಆರ್​ಬಿಐ ತಿಳಿಸಿದೆ. ಒಟ್ಟೂ 322 ಹುದ್ದೆಗಳು ಖಾಲಿಯಿದ್ದು, ಆಸಕ್ತ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. http://rbi.org.in ವೆಬ್​ಸೈಟ್​ಗೆ ಹೋಗಿ, ಅಲ್ಲಿಯೇ ಹೋಗಿ ಅರ್ಜಿ ಭರ್ತಿ ಮಾಡಿ ಸಲ್ಲಿಸಬೇಕು. ಇದರ ಹೊರತು ಬೇರೆ ಯಾವುದೇ ರೀತಿಯಲ್ಲಿ ಅರ್ಜಿ ಸಲ್ಲಿಸಿದರೂ ಮಾನ್ಯ ಮಾಡುವುದಿಲ್ಲ ಎಂದು ಆರ್​ಬಿಐ (RBI) ತಿಳಿಸಿದೆ.

RBI Recruitment 2021: ಖಾಲಿ ಹುದ್ದೆಗಳ ವಿವರ ಹೀಗಿದೆ..
ಒಟ್ಟು ಖಾಲಿ ಇರುವ ಹುದ್ದೆಗಳು 322
ಗ್ರೇಡ್​ ಬಿ (ಡಿಆರ್​)- ಜನರಲ್​ ಹುದ್ದೆಗಳು 270, ಡಿಇಪಿಆರ್​-29, ಡಿಎಸ್​ಐಎಂ 23 ಹುದ್ದೆಗಳು ಖಾಲಿ ಇವೆ.

RBI Recruitment 2021 ಗ್ರೇಡ್​ ಬಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ನಿಯಮಗಳು..
ಆರ್​ಬಿಐನ rbi.org.in ವೆಬ್​ಸೈಟ್​ಗೆ ಹೋಗಿ, ಅಲ್ಲಿಂದಲೇ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್​ಲೈನ್​ ಅರ್ಜಿ ಭರ್ತಿ ಮಾಡಲು ಅನುಸರಿಸಬೇಕಾದ ಎಲ್ಲ ರೀತಿಯ ಸೂಚನೆಗಳು, ನಿಯಮಗಳು RBI ವೆಬ್​ಸೈಟ್​​​ನ Appendix-I (ಅನುಬಂಧ-1)ನಲ್ಲಿ ಇವೆ.
ಒಬ್ಬ ಅರ್ಜಿದಾರ ಒಂದೇ ಅರ್ಜಿಯನ್ನು ಭರ್ತಿ ಮಾಡಿ ಕಳಿಸಬೇಕು ಎಂದು ಸೂಚಿಸಲಾಗಿದೆ. ಅದರ ಹೊರತಾಗಿ ಯಾರಿಗಾದರೂ, ಯಾವುದೇ ಅನಿವಾರ್ಯ ಪರಿಸ್ಥಿತಿ ಉಂಟಾದರೆ ಅವರು ಇನ್ನೊಂದು ಅರ್ಜಿ ಭರ್ತಿ ಮಾಡಿ ಸಲ್ಲಿಸಬಹುದು. ಹೀಗೆ ಎರಡನೇ ಬಾರಿಗೆ ಅಥವಾ ಮೂರನೇ ಬಾರಿಗೆ ಅರ್ಜಿ ಸಲ್ಲಿಸುವವರು ಅದರೊಂದಿಗೆ, ತಮ್ಮ ಸಂಪೂರ್ಣ ವಿವರ, ಪರೀಕ್ಷಾ ಕೇಂದ್ರ, ಫೋಟೋಕಾಪಿ, ಸಹಿ, ಎಡಗೈನ ಹೆಬ್ಬೆರಳ ಗುರುತು, ಕೈಬರಹ, ಶುಲ್ಕದ ಸಂಪೂರ್ಣ ವಿವರಗಳನ್ನು ಒಳಗೊಂಡ ಹೈಯರ್​ ರಿಜಿಸ್ಟ್ರೇಶನ್​ ಐಡಿ(RID)ಯನ್ನೂ ಹೊಂದಿಸಿ ಕಳಿಸಬೇಕು.

ಆಕರ್ಷಕ ಸಂಬಳ
ಇನ್ನು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ಸಂಬಳವನ್ನು ನಿಗದಿಪಡಿಸಲಾಗಿದೆ. ತಿಂಗಳಿಗೆ ಬೇಸಿಕ್​ 35,150 ರೂ. ನೀಡಲಾಗುವುದು. ಇದರಲ್ಲಿ ತುಟ್ಟಿ ಭತ್ಯೆ ( Dearness Allowance) ಮನೆ ಬಾಡಿಗೆ ಭತ್ಯೆ, Local Allowance, Family allowance, Grade Allowanceಗಳು ಒಳಗೊಂಡಿರುತ್ತವೆ.

ಅರ್ಜಿದಾರರು ನೀಡಬೇಕಾದ ಶುಲ್ಕ
ಎಸ್​ಸಿ/ಎಸ್​ಟಿ/ ಪಿಡಬ್ಲ್ಯೂಬಿಡಿ-100 ರೂ.
ಜನರಲ್​/ಒಬಿಸಿ/ಇಡಬ್ಲ್ಯೂಎಸ್​ಎಸ್​-850ರೂ.

ಅರ್ಜಿದಾರರು ನೆನಪಿಟ್ಟುಕೊಳ್ಳಬೇಕಾದ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೇ ದಿನ-ಫೆಬ್ರವರಿ 15
ಆರ್​ಬಿಐ ಗ್ರೇಡ್​ ಬಿ ಪ್ರಿಲಿಮ್ಸ್​ ಪರೀಕ್ಷೆ ಮಾರ್ಚ್​ 1
ಡಿಇಪಿಆರ್​/ಡಿಎಸ್​​ಐಎಂ ಪೇಪರ್​ 2 ಮತ್ತು 3ರ ಪರೀಕ್ಷೆ -ಮಾರ್ಚ್​ 31
Officers in Gr B (DR)- DSIM@ – ಒಂದನೇ ಹಂತದ ಮೊದಲ ಪರೀಕ್ಷೆ (ಆನ್​ಲೈನ್​)-ಮಾರ್ಚ್​ 6
Officers in Gr B (DR)- DSIM@ -ಎರಡನೇ ಹಂತದ ಎರಡು ಮತ್ತು ಮೂರನೇ ಪರೀಕ್ಷೆ (ಲಿಖಿತ) ಮಾರ್ಚ್​ 31.

 

ಫೇಸ್​ಬುಕ್​ನಲ್ಲಿ ಸಮಯ ವ್ಯಯಿಸುವುದನ್ನು ಕಡಿಮೆ ಮಾಡುವುದು ಹೇಗೆ?