Sign In

By signing in or creating an account, you agree with Associated Broadcasting Company's Terms & Conditions and Privacy Policy.

Kajal Aggarwal: 5ನೇ ವಯಸ್ಸಿನಿಂದಲೂ ಈ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ ನಟಿ ಕಾಜಲ್ ಅಗರ್​ವಾಲ್

ಇನ್​ ಹೇಲರ್​ನ್ನು ಖಾಸಗಿಯಾಗಲೀ, ಸಾರ್ವಜನಿಕವಾಗಿ ಆಗಲೀ ಬಳಸಲು ಯಾವುದೇ ಮುಜುಗರ ಬೇಡ.. ಅದರಲ್ಲಿ ನಾಚಿಕೆ ಪಡುವ ವಿಷವೇನೂ ಇಲ್ಲ. ಇಡೀ ದೇಶ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಕಾಜಲ್​ ಅಗರ್​ವಾಲ್ (Kajal Aggarwal)​ ಹೇಳಿದ್ದಾರೆ.

Kajal Aggarwal: 5ನೇ ವಯಸ್ಸಿನಿಂದಲೂ ಈ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ ನಟಿ ಕಾಜಲ್ ಅಗರ್​ವಾಲ್
ನಟಿ ಕಾಜಲ್​​ ಅಗರ್​ವಾಲ್​
Follow us
Lakshmi Hegde
|

Updated on:Feb 10, 2021 | 11:58 AM

ನಟಿ ಕಾಜಲ್ ಅಗರ್​ವಾಲ್​ (Kajal Aggarwal) ತಮಗಿರುವ ಒಂದು ಆರೋಗ್ಯ ಸಮಸ್ಯೆ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ. ತಾವು 5ನೇ ವರ್ಷದಲ್ಲಿ ಇದ್ದಾಗಿನಿಂದಲೂ ಶ್ವಾಸನಾಳದ ಅಸ್ತಮಾ (Bronchial Asthma) ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಕಾಜಲ್​ ಅಗರ್​ವಾಲ್​ಗೆ ಈಗ 35 ವರ್ಷ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗಲೂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಅಸ್ತಮಾ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಪೋಸ್ಟ್ ಹಾಕಿಕೊಂಡಿದ್ದು, ಕಾಯಿಲೆಯೊಂದಿಗೆ ತಾವು ಹೋರಾಡಿದ ರೀತಿ, ಇನ್ ​ಹೇಲರ್​ ಬಳಕೆಯ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಯ ಬಗ್ಗೆಯೂ ಹೇಳಿಕೊಂಡಿದ್ದಾರೆ.

ನಾನು 5ನೇ ವಯಸ್ಸಿನಲ್ಲಿ ಇದ್ದಾಗ ನನ್ನಲ್ಲಿ ಶ್ವಾಸನಾಳದ ಅಸ್ತಮಾ ಇರುವುದು ಪತ್ತೆಯಾಯಿತು. ಆಗ ನನಗೆ ಆಹಾರದಲ್ಲೂ ಕಟ್ಟುನಿಟ್ಟಾದ ನಿರ್ಬಂಧ ಹೇರಲಾಯಿತು. ಅದರಲ್ಲೂ ಡೇರಿ ಉತ್ಪನ್ನಗಳನ್ನು ತಿನ್ನಲು ಬಿಡುತ್ತಿರಲಿಲ್ಲ. ಆಗ ನಾನಿನ್ನೂ ಮಗು.. ಎಲ್ಲ ಮಕ್ಕಳಂತೆ ನನಗೂ ಚಾಕಲೇಟ್​, ಐಸ್​ಕ್ರೀಂನಂಥ ತಿಂಡಿಗಳೆಲ್ಲ ಇಷ್ಟವೇ ಇದ್ದರೂ ಅದನ್ನೆಲ್ಲ ಬಿಡಲೇಬೇಕಿತ್ತು. ನಾನು ಬೆಳೆಯುತ್ತ ಹೋದಂತೆ ಅಸ್ತಮಾವನ್ನು ಎದುರಿಸುತ್ತ ಸಾಗುವುದು ಅಷ್ಟು ಸುಲಭವಾಗಿರಲಿಲ್ಲ. ಪ್ರತಿ ಬಾರಿ ಎಲ್ಲಿಗಾದರೂ ಪ್ರಯಾಣ ಮಾಡಿದಾಗ, ಚಳಿಗಾಲದಲ್ಲಿ ಅಥವಾ ಧೂಳು, ಹೊಗೆಗೆ ನನ್ನನ್ನು ನಾನು ಒಡ್ಡಿಕೊಂಡಾಗ ನನ್ನಲ್ಲಿರುವ ಅಸ್ತಮಾ ಹೆಚ್ಚಾಗುತ್ತಿತ್ತು. ಆಮೇಲೆ ಬೇರೆ ದಾರಿ ಕಾಣದೆ ಈ ಕಷ್ಟದಿಂದ ಪಾರಾಗಲು ಇನ್​ ಹೇಲರ್​ ಬಳಸಲು ಪ್ರಾರಂಭಿಸಿದೆ. ಹಾಗೇ, ಇನ್​ ಹೇಲರ್​ ತೆಗೆದುಕೊಳ್ಳುವುದರಿಂದ ಕೂಡಲೇ ನನಗೆ ಪರಿಹಾರವೂ ಸಿಗುತ್ತಿತ್ತು.

ಈಗಲೂ ಸಹ ನಾನು ಎಲ್ಲಿಗೇ ಹೋದರೂ ನನ್ನೊಂದಿಗೆ ಇನ್​ ಹೇಲರ್​​ನ್ನು ಕೊಂಡೊಯ್ಯುತ್ತೇನೆ. ನನ್ನ ಕೈಯ್ಯಲಿ ಇನ್​ಹೇಲರ್​ ನೋಡಿ ಅದೆಷ್ಟೋ ಬಾರಿ ಹಲವರು ನನಗೆ ವಿಚಿತ್ರ, ವ್ಯಂಗ್ಯಭರಿತ ಪ್ರಶ್ನೆ ಕೇಳಿದ್ದಾರೆ. ಹಾಗೇ, ಅವರೇ ಒಂದು ನಿರ್ಣಯಕ್ಕೆ ಬಂದಂತೆ ನೋಟದಲ್ಲೇ ಚುಚ್ಚಿದವರೂ ಇದ್ದಾರೆ. ಆದರೆ ನಾನು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಮ್ಮ ದೇಶದಲ್ಲಿ ಲಕ್ಷಾಂತರ ಜನರಿಗೆ ಈ ಇನ್​ ಹೇಲರ್​ ಅಗತ್ಯವಿದೆ. ಆದರೆ ಇದೇ ಕಾರಣಕ್ಕೆ, ಅಂದರೆ ಮುಜುಗರವಾಗುತ್ತದೆ, ಸಮಾಜ ಬೇರೆ ತರ ನೋಡುತ್ತದೆ ಎಂಬ ಕಾರಣಕ್ಕೆ ಇನ್​ ಹೇಲರ್​ ಇಟ್ಟುಕೊಳ್ಳದೆ ಕಷ್ಟಪಡುತ್ತಾರೆ.

ಆದರೆ ನಾನು ನಿಶ್ಚಿತವಾಗಿ ಹೇಳುತ್ತೇನೆ..ಇನ್​ ಹೇಲರ್​ನ್ನು ಖಾಸಗಿಯಾಗಲೀ, ಸಾರ್ವಜನಿಕವಾಗಿ ಆಗಲೀ ಬಳಸಲು ಯಾವುದೇ ಮುಜುಗರ ಬೇಡ.. ಅದರಲ್ಲಿ ನಾಚಿಕೆ ಪಡುವ ವಿಷವೇನೂ ಇಲ್ಲ. ಇಡೀ ದೇಶ ಇದನ್ನು ಅರ್ಥ ಮಾಡಿಕೊಳ್ಳಬೇಕು. ಇನ್​ ಹೇಲರ್​ ಬಳಸುವವರನ್ನು ಬೇರೆಯದ್ದೇ ದೃಷ್ಟಿಯಿಂದ ನೋಡುವುದನ್ನು ಬಿಡಬೇಕು. ಹಾಗೇ, ಅಸ್ತಮಾ ರೋಗಿಗಳು ಇನ್​ ಹೇಲರ್​ ಬಳಕೆ ಮಾಡಲು ಮುಜುಗರ ಪಡುವುದನ್ನೂ ಬಿಡಬೇಕು.

ಇಂದು ನಾನು #SayYesToInhalers (Say Yes to inhalers-ನಾನು ಇನ್​ ಹೇಲರ್​ ಬಳಸುತ್ತಿದ್ದೇನೆ) ಎಂದು ಹೇಳುತ್ತಿದ್ದೇನೆ. ಹಾಗೇ, ಈ #SayYesToInhalers ಅಭಿಯಾನದಲ್ಲಿ ಕೈ ಜೋಡಿಸಿ ಎಂದು ನನ್ನ ಸ್ನೇಹಿತರು, ಫಾಲೋವರ್ಸ್​, ಕುಟುಂಬದವರ ಬಳಿ ಕೇಳಿಕೊಳ್ಳುತ್ತಿದ್ದೇನೆ. ನಮಗೆ ಎಲ್ಲರ ಸಹಾಯ, ಬೆಂಬಲ ಬೇಕು. ಹಾಗಾದಾಗ ಎಲ್ಲರಲ್ಲೂ ಅಸ್ತಮಾ, ಇನ್​ ಹೇಲರ್​ ಬಳಕೆಯ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಕಾಜಲ್​ ಅಗರ್​ವಾಲ್​ ಬರೆದುಕೊಂಡಿದ್ದಾರೆ.

Akhilesh Yadav: ಚಳುವಳಿಗಳ ಹೀಗಳೆಯದಿರಿ; ‘ಆಂದೋಲನ್ ಜೀವಿ’ ಟೀಕೆಗೆ ಅಖಿಲೇಶ್ ಯಾದವ್ ಪ್ರತ್ಯುತ್ತರ

Published On - 11:55 am, Wed, 10 February 21

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು