AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akhilesh Yadav: ಚಳುವಳಿಗಳ ಹೀಗಳೆಯದಿರಿ; ‘ಆಂದೋಲನ್ ಜೀವಿ’ ಟೀಕೆಗೆ ಅಖಿಲೇಶ್ ಯಾದವ್ ಪ್ರತ್ಯುತ್ತರ

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರನ್ನು ಆಂದೋಲನ ಜೀವಿ ಎನ್ನುತ್ತೀರಾ? ಹಾಗಾದರೆ, ನಿಧಿ ಸಂಗ್ರಹಕ್ಕೆ ತೆರಳುತ್ತಿರುವವರನ್ನು ಏನನ್ನಬೇಕು? ಅವರೇನು ಚಂದಾ ಜೀವಿ ಸಂಘಟನೆಯವರು ಎನ್ನಬೇಕೆ: ಅಖಿಲೇಶ್ ಯಾದವ್ ಪ್ರಶ್ನೆ

Akhilesh Yadav: ಚಳುವಳಿಗಳ ಹೀಗಳೆಯದಿರಿ; ‘ಆಂದೋಲನ್ ಜೀವಿ’ ಟೀಕೆಗೆ ಅಖಿಲೇಶ್ ಯಾದವ್ ಪ್ರತ್ಯುತ್ತರ
ಅಖಿಲೇಶ್ ಯಾದವ್
Follow us
TV9 Web
| Updated By: ganapathi bhat

Updated on:Apr 06, 2022 | 8:03 PM

ದೆಹಲಿ: ಆಂದೋಲನ, ಚಳುವಳಿಗಳ ಮೂಲಕವೇ ದೇಶ ಅಸಂಖ್ಯ ಹಕ್ಕುಗಳನ್ನು ಪಡೆದಿರುವಾಗ, ಅಂಥವರನ್ನು ಆಂದೋಲನ ಜೀವಿ ಎಂದು ಗುರುತಿಸಿ ಹಣೆಪಟ್ಟಿ ಕಟ್ಟುವುದು ಒಂದು ಚೋದ್ಯ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಲೋಕಸಭೆಯಲ್ಲಿ ಮಂಗಳವಾರ (ಫೆ.9) ಹೇಳಿದರು. ಪ್ರಧಾನಿ ನರೇಂದ್ರ ಮೋದಿ, ನಿನ್ನೆ (ಫೆ.8) ರಾಜ್ಯಸಭೆಯಲ್ಲಿ ನಡೆಸಿದ ಭಾಷಣದಲ್ಲಿ ಕೆಲವರಿಗೆ ಆಂದೋಲನ ನಡೆಸುವುದೇ ಕೆಲಸ, ಅಂಥವರು ‘ಆಂದೋಲನ್ ಜೀವಿ’ ಎಂದು ಜರೆದಿದ್ದಕ್ಕೆ ಅಖಿಲೇಶ್ ಇಂದಿನ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದರು.

ಈ ವಿಚಾರಕ್ಕೆ ಇಂದು (ಫೆ.9) ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ನಾವು ಆಂದೋಲನದ ಮೂಲಕವೇ ಸ್ವಾತಂತ್ರ್ಯ ಪಡೆದೆವು. ಹಲವಾರು ಹಕ್ಕುಗಳನ್ನು ಚಳುವಳಿ ನಡೆಸಿ ಪಡೆದೆವು. ಮಹಿಳೆಯರು ಚುನಾವಣೆಯಲ್ಲಿ ಭಾಗವಹಿಸುವ ಹಕ್ಕನ್ನು ಆಂದೋಲನ ನಡೆಸಿ ಪಡೆದರು. ಆಫ್ರಿಕಾ, ಭಾರತದಲ್ಲಿ ಆಂದೋಲನ ನಡೆಸಿಯೇ ಗಾಂಧಿ ಮಹಾತ್ಮರಾದರು ಎಂದು ಪ್ರಧಾನಿ ಪದಬಳಕೆಯನ್ನು ಲೋಕಸಭೆಯಲ್ಲಿ ಕಟುವಾಗಿ ಖಂಡಿಸಿದರು.

‘ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರನ್ನು ಆಂದೋಲನ ಜೀವಿ ಎನ್ನುತ್ತೀರಾ? ಹಾಗಾದರೆ, ನಿಧಿ ಸಂಗ್ರಹಕ್ಕೆ ತೆರಳುತ್ತಿರುವವರನ್ನು ಏನನ್ನಬೇಕು? ಅವರೇನು ಚಂದಾ ಜೀವಿ ಸಂಘಟನೆಯವರು ಎನ್ನಬೇಕೆ’ ಎಂದು ಪ್ರಶ್ನೆ ಮಾಡಿದರು.

ನೂತನ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರೈತರೇ ವಿರೋಧಿಸುತ್ತಿರುವಾಗ, ಅವುಗಳನ್ನು ಸರ್ಕಾರ ಯಾಕೆ ಹಿಂಪಡೆಯಲು ಹಿಂಜರಿಕೆ ಮಾಡುತ್ತಿದೆ. ಅದರಿಂದ ಬಂಡವಾಳಶಾಹಿಗಳಿಗೆ ಲಾಭ ಎಂದು ರೈತರು ಆರೋಪಿಸುತ್ತಿರುವಾಗ ಕಾಯ್ದೆ ಹಿಂತೆಗೆಯುವುದಿಲ್ಲವೇಕೆ ಎಂದು ಸದನದಲ್ಲಿ ಸರ್ಕಾರದ ನಡೆಯ ವಿರುದ್ಧ ಮಾತನಾಡಿದರು.

‘ಕೃಷಿ ಕಾಯ್ದೆಗಳು ರೈತರ ಅನುಕೂಲಕ್ಕೆ ಎನ್ನುತ್ತಾರೆ. ರೈತರಿಗೇ ಬೇಡವಾದ ಕಾನೂನನ್ನು ಬಲವಂತವಾಗಿ ಹೇರುವುದೇಕೆ. ಯಾರಿಗಾಗಿ ಕಾನೂನುಗಳು ಸಿದ್ಧವಾಗಿದೆಯೋ ಅವರಿಗೇ ಅದು ಬೇಡವೆಂದಾದ ಮೇಲೆ, ಸರ್ಕಾರವನ್ನು ಕಾನೂನು ಹಿಂಪಡೆಯದಂತೆ ತಡೆಯುತ್ತಿರುವುದು ಯಾರು? ನೂತನ ಕಾಯ್ದೆಗಳು ಬಂಡವಾಳಶಾಹಿಗಳಿಗೆ ಹಾಕಿರುವ ಕೆಂಪುಹಾಸು ಎಂಬ ಆರೋಪ ನಿಜವೇ’ ಎಂದು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

MSP ಇತ್ತು, MSP ಇದೆ ಮತ್ತು MSP ಇರುತ್ತದೆ ಎಂದು ಪ್ರಧಾನಿ ಮೋದಿ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಸದನದಲ್ಲಿ ಮಾತನಾಡಿದ್ದರು. ಆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ಕನಿಷ್ಠ ಬೆಂಬಲ ಬೆಲೆ ಇದೆ ಎಂದು ಹೇಳುತ್ತಿದ್ದೀರಿ ಅಷ್ಟೇ. ಆದರೆ, ರೈತರಿಗೆ ಹಲವು ಸಮಯದಿಂದ ತಮ್ಮ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ಪ್ರತಿಭಟನಾ ನಿರತ ರೈತರು ಚಳುವಳಿಯಲ್ಲಿ ಭಾಗಿಯಾಗಿ, ದೇಶದ ರೈತರನ್ನು ಎಚ್ಚರಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

Andolan Jeevi: ಏನಿದು ಆಂದೋಲನ​ ಜೀವಿ? ಪ್ರಧಾನಿ ಮೋದಿ ಬಳಕೆ ಮಾಡಿದ ಹೊಸ ಶಬ್ದದ ಅರ್ಥವೇನು?

Published On - 10:36 pm, Tue, 9 February 21

ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಯುದ್ಧ ಬೇಡ ಅಂತ ನಾನು ಹೇಳಿದ್ದಕ್ಕೆ ದೊಡ್ಡ ಯುದ್ಧವೇ ಆಗಿತ್ತು: ಸಿದ್ದರಾಮಯ್ಯ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ದೇಶಕ್ಕಾಗಿ ಏನು ಮಾಡಿದರೂ ಕಮ್ಮಿ: ಜಮೀರ್ ಅಹ್ಮದ್, ಸಚಿವ
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕಾಶ್ಮೀರ ಗಡಿಯಲ್ಲಿ ಉಗ್ರ ನೆಲೆಗಳು ಉಡೀಸ್: ಸೇನೆಯ ಅಧಿಕೃತ ವಿಡಿಯೋ ಇಲ್ಲಿದೆ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ
ಕೇಂದ್ರ ಗೃಹ ಇಲಾಖೆಯಿಂದ ಕರ್ನಾಟಕಕ್ಕೂ ಎಚ್ಚರಿಕೆ ಸೂಚನೆ ಬಂದಿದೆ: ಡಿಕೆಶಿ