Andolan Jeevi: ಏನಿದು ಆಂದೋಲನ ಜೀವಿ? ಪ್ರಧಾನಿ ಮೋದಿ ಬಳಕೆ ಮಾಡಿದ ಹೊಸ ಶಬ್ದದ ಅರ್ಥವೇನು?
PM Narendra Modi Coin's New Word: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ವಂದನಾ ನಿರ್ಣಯದ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರೈತ ಪ್ರತಿಭಟನೆಯಲ್ಲಿ ವಿದೇಶಿ ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಿರುವುದನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರದಲ್ಲಿ ಅನೇಕ ಹೊಸ ಹೊಸ ಶಬ್ದಗಳನ್ನು ಹುಟ್ಟು ಹಾಕಿದ್ದಾರೆ. ಆತ್ಮ ನಿರ್ಭರ ಭಾರತ ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿದ್ದ ಶಬ್ದ. ಈಗ ಮೋದಿ ಅವರು ಇಂದಿನ ರಾಜ್ಯಸಭೆ ಭಾಷಣದಲ್ಲಿ ಹೊಸ ಶಬ್ದವೊಂದನ್ನು ಹುಟ್ಟು ಹಾಕಿದ್ದಾರೆ. ಅದುವೇ, ಆಂದೋಲನ ಜೀವಿ (Andolan jeevi). ಮೋದಿ ಅವರು ಈ ಶಬ್ದ ಬಳಕೆ ಮಾಡುತ್ತಿದ್ದಂತೆ ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿದೆ. ಅಷ್ಟಕ್ಕೂ ಏನಿದು ಶಬ್ದ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. (pm narendra modi coins new word)
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ವಂದನಾ ನಿರ್ಣಯದ ಕುರಿತು ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರೈತ ಪ್ರತಿಭಟನೆಯಲ್ಲಿ ವಿದೇಶಿ ಸೆಲೆಬ್ರಿಟಿಗಳು ಪಾಲ್ಗೊಳ್ಳುತ್ತಿರುವುದನ್ನು ಉಲ್ಲೇಖಿಸಿ ಮಾತನಾಡಿದ್ದಾರೆ. ಭಾರತದಲ್ಲಿನ ಸಮಸ್ಯೆಗಳಲ್ಲಿ ವಿದೇಶಿ ಪ್ರಭಾವಗಳು ಬೀರುತ್ತಿರುವುದರ ವಿರುದ್ಧ ದೇಶವನ್ನು ಎಚ್ಚರಿಸಬೇಕಾಗಿದೆ ಎಂದಿದ್ದಾರೆ ಮೋದಿ.
ದೇಶವನ್ನು ಇಂಥ ಆಂದೋಲನ ಜೀವಿಗಳಿಂದ ರಕ್ಷಣೆ ಮಾಡಬೇಕಿದೆ ಇದೇ ವೇಳೆ ಆಂದೋಲನ ಜೀವಿ ಬಗ್ಗೆ ಮಾತನಾಡಿದ ಮೋದಿ, ನಾವು ಕೆಲ ವರ್ಷಗಳಿಂದ ಹೋರಾಟಗಾರರಲ್ಲಿ ಹೊಸ ವಿಭಾಗವನ್ನು ನೋಡಿದ್ದೇವೆ. ಅದುವೇ ಆಂದೋಲನ ಜೀವಿ. ಅಂದರೆ ಇವರು ಎಲ್ಲ ಹೋರಾಟದಲ್ಲೂ ಪಾಲ್ಗೊಳ್ಳುತ್ತಾರೆ. ನಮ್ಮ ದೇಶವನ್ನು ಇಂಥ ಆಂದೋಲನ ಜೀವಿಗಳಿಂದ ರಕ್ಷಣೆ ಮಾಡಬೇಕಿದೆ. ಅವರಿಗೆ ತಮ್ಮದೇ ಆದ ಶಕ್ತಿ ಇರುವುದಿಲ್ಲ . ಆದರೆ ಅವರು ಎಲ್ಲಾ ಆಂದೋಲನಗಳಿಗೆ ಸೇರುತ್ತಾರೆ ಎಂದರು ಮೋದಿ. ಈ ಮೂಲಕ ಎಲ್ಲಾ ರೀತಿಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವವರಿಗೆ ತಿರುಗೇಟು ನೀಡಿದರು.
ರೈತ ಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ಅವರು ರೈತರ ಪ್ರತಿಭಟನೆಗೆ ಮಾತ್ರ ಸೀಮಿತವಾಗಿದ್ದರು. ಆದರೆ, ಒಂದು ದಿನ ಏಕಾಏಕಿ ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿ, ಅದರ ನೇತೃತ್ವ ಕೂಡ ವಹಿಸಿಕೊಂಡರು. ಹೀಗಾಗಿ, ಕೋಡಿಹಳ್ಳಿ ಅವರನ್ನು ಇಲ್ಲಿ ಆಂದೋಲನ ಜೀವಿ ಎಂದರೆ ಪ್ರಾಯಶಃ ತಪ್ಪಾಗಲಿಕ್ಕಿಲ್ಲ.
ಇನ್ನು, ಆತ್ಮ ನಿರ್ಭರ ಭಾರತ ಎಂಬ ಶಬ್ದ ತುಂಬಾನೇ ಟ್ರೆಂಡ್ ಆಗಿತ್ತು. ಇದನ್ನು ಆಕ್ಸ್ಫರ್ಡ್ ಡಿಕ್ಷನರಿಗೂ ಕೂಡ ಸೇರ್ಪಡೆ ಮಾಡಲಾಗಿತ್ತು ಎನ್ನುವುದು ವಿಶೇಷ.
MSP ಇತ್ತು, MSP ಇದೆ ಮತ್ತು MSP ಮುಂದೆಯೂ ಇರಲಿದೆ: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ
Published On - 3:41 pm, Mon, 8 February 21