AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರ, ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಮಮತಾ ಬ್ಯಾನರ್ಜಿ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ: ಜೆ.ಪಿ. ನಡ್ಡಾ

ಪಶ್ಚಿಮ ಬಂಗಾಳ, ಪಶ್ಚಿಮ ಮಿಡ್ನಾಪುರದ ಕಲೈಕುಂಡ ಗ್ರಾಮದಲ್ಲಿ ‘ಚಹಾ ಚಕ್ರ’ (ಚಹಾ ಕೂಟ) ಕಾರ್ಯಕ್ರಮದಲ್ಲಿ ಭಾಗವಹಿಸಿದ ನಡ್ಡಾ, ಮಮತಾ ಬ್ಯಾನರ್ಜಿ ಸರ್ಕಾರ ರೈತರ ಮತ್ತು ಬುಡಕಟ್ಟು ಜನರ ಅಭಿವೃದ್ಧಿಗಾಗಿ ಕೆಲಸ ಮಾಡಿಲ್ಲ ಎಂದು ಹೇಳಿದರು.

ರೈತರ, ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಮಮತಾ ಬ್ಯಾನರ್ಜಿ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ: ಜೆ.ಪಿ. ನಡ್ಡಾ
ಪಶ್ಚಿಮ ಬಂಗಾಳದಲ್ಲಿ ಜೆ.ಪಿ. ನಡ್ಡಾ
TV9 Web
| Updated By: ganapathi bhat|

Updated on:Apr 06, 2022 | 8:03 PM

Share

ಕೋಲ್ಕತ್ತಾ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸರ್ಕಾರವು ರೈತರು ಹಾಗೂ ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪಶ್ಚಿಮ ಬಂಗಾಳದಲ್ಲಿ ಬುಧವಾರ (ಫೆಬ್ರವರಿ 10) ಆರೋಪಿಸಿದ್ದಾರೆ. ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ (West Bengal Assembly Election 2021) ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ನಡ್ಡಾ ಹೇಳಿದರು.

ಪಶ್ಚಿಮ ಬಂಗಾಳ, ಪಶ್ಚಿಮ ಮಿಡ್ನಾಪುರದ ಕಲೈಕುಂಡ ಗ್ರಾಮದಲ್ಲಿ ‘ಚಹಾ ಚಕ್ರ’ (ಚಹಾ ಕೂಟ) ಕಾರ್ಯಕ್ರಮದಲ್ಲಿ ಭಾಗವಹಿಸಿದ ನಡ್ಡಾ, ಮಮತಾ ಬ್ಯಾನರ್ಜಿ ಸರ್ಕಾರ ರೈತರ ಮತ್ತು ಬುಡಕಟ್ಟು ಜನರ ಅಭಿವೃದ್ಧಿಗಾಗಿ ಕೆಲಸ ಮಾಡಿಲ್ಲ ಎಂದು ಹೇಳಿದರು.

ಬಡವರಿಗೆ ಮಾಡಿದ ಅನ್ಯಾಯ ಬಹಳ ದಿನಗಳವರೆಗೆ ಮುಂದುವರಿಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಬಿಜೆಪಿ ಪಕ್ಷದ ಕಮಲ ಅರಳುತ್ತದೆ ಎಂದು ಜೆ.ಪಿ. ನಡ್ಡಾ ವಿಶ್ವಾಸ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದ ಜನರು ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಿಂದ ವಂಚಿತರಾಗಿದ್ದಾರೆ. ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಪಡೆಯಲಾಗುತ್ತಿಲ್ಲ. ಬಿಜೆಪಿ ಪಕ್ಷ ಅಧಿಕಾರ ವಹಿಸಿದರೆ ಇವುಗಳೆಲ್ಲಾ ಲಭ್ಯವಾಗಲಿದೆ ಎಂದು ತಿಳಿಸಿದರು.

ಒಂದೆಡೆ ಪಶ್ಚಿಮ ಬಂಗಾಳದ ಅಭಿವೃದ್ಧಿ ಬಯಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಇದ್ದರೆ, ಮತ್ತೊಂದೆಡೆ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ತಡೆಹಿಡಿಯುತ್ತಿರುವ ಮಮತಾ ಬ್ಯಾನರ್ಜಿ ಇದ್ದಾರೆ ಎಂದು ಚಹಾ ಕೂಟದಲ್ಲಿ ಮಮತಾ ನಡೆಯನ್ನು ಖಂಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಶ್, ಲೋಕಸಭಾ ಸದಸ್ಯ ಸುಕಂತಾ ಮಜುಮ್​ದಾರ್ ನಡ್ಡಾ ಜೊತೆಗೆ ಭಾಗವಹಿಸಿದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳುವುದು ಖಚಿತ. ಅಭಿವೃದ್ಧಿಯ ಮಂತ್ರದಿಂದ ಬಿಜೆಪಿ ಪಶ್ಚಿಮ ಬಂಗಾಳದ ಅಧಿಕಾರ ವಹಿಸಲಿದೆ ಎಂದು ನಡ್ಡಾ ವಿಶ್ವಾಸ ವ್ಯಕ್ತಪಡಿಸಿದರು. ಭಾನುವಾರ (ಫೆ.7) ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಭೇಟಿ ಕೈಗೊಂಡಿದ್ದಾಗ, 4,700 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ದೇಶಕ್ಕೆ ಅರ್ಪಿಸಿದ್ದಾರೆ. ತೈಲ, ಇಂಧನ ಹಾಗೂ ರಸ್ತೆ ಕಾಮಗಾರಿಗಳನ್ನು ಮೋದಿ ನೀಡಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಬಜೆಟ್​ನಲ್ಲಿ 25 ಸಾವಿರ ಕೋಟಿ ರೂ.ಗಳನ್ನು ಪಶ್ಚಿಮ ಬಂಗಾಳದ ಅಭಿವೃದ್ಧಿಗಾಗಿ ಘೋಷಿಸಲಾಗಿದೆ. ರಸ್ತೆ ಕಾಮಗಾರಿಗಾಗಿ ದೊಡ್ಡ ಮೊತ್ತವನ್ನು ನೀಡಲಾಗಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ನಾವು ಭರವಸೆ ನೀಡುತ್ತೇವೆ ಎಂದು ನಡ್ಡಾ ಹೇಳಿದರು.

ಮಮತಾದೀ, ಯಾಕೆ ಅಷ್ಟು ಹೆದರಿದ್ದೀರಿ? ಏನಾಯಿತು?: ದೀದಿಗೆ ಕುಟುಕಿದ ಜೆ.ಪಿ. ನಡ್ಡಾ

Published On - 1:22 pm, Wed, 10 February 21