Uttarakhand Glacier Burst Updates | ಉತ್ತರಾಖಂಡ್ ಹಿಮ ಸ್ಫೋಟ: ಹೆಚ್ಚುತ್ತಲೇ ಇದೆ ಮೃತರ ಸಂಖ್ಯೆ, ಇನ್ನೂ 60 ಮೀಟರ್ ಸುರಂಗ ಶೋಧ ನಡೆಸಬೇಕಿದೆ
Uttarakhand Glacier Burst Death Toll Increasing | ಹಿಮ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 32ಕ್ಕೇರಿದೆ. ಈ ನಡುವೆ ನಾಪತ್ತೆಯಾಗಿರುವ 170 ಜನರ ಮೃತದೇಹಗಳು ಇನ್ನೂ ಪತ್ತೆ ಆಗಿಲ್ಲ. ಇದು ಸಾವಿನ ಸಂಖ್ಯೆಯನ್ನ ಹೆಚ್ಚಾಗಿಸುವ ಭೀತಿ ಮೂಡಿಸಿದೆ. ಮತ್ತೊಂದ್ಕಡೆ ಕಾರ್ಯಾಚರಣೆ ಭರದಿಂದ ಸಾಗಿದೆ.
ಉತ್ತರಾಖಂಡ್: 2013ರ ನಂತರ ಭೀಕರ ಪ್ರಕೃತಿ ವಿಕೋಪ ಎದುರಿಸುತ್ತಿರುವ ಉತ್ತರಾಖಂಡ್ನ ಸ್ಥಿತಿ ಸುಧಾರಿಸಿಲ್ಲ. ಹಿಮ ಸ್ಫೋಟದಿಂದ ತತ್ತರಿಸಿರುವ ಹಿಮ ಕಣಿವೆ ಉತ್ತರಾಖಂಡ್ನಲ್ಲಿ ಕಾರ್ಯಾಚರಣೆ ಭರದಿಂದ ಸಾಗಿದೆ. ನಾಪತ್ತೆಯಾದವರ ಪೈಕಿ ಕೇವಲ 32 ಜನರ ಮೃತದೇಹ ಪತ್ತೆಯಾಗಿದ್ದು, ನೂರಾರು ಜನರ ಸುಳಿವು ಇನ್ನೂ ಸಿಕ್ಕಿಲ್ಲ. ಹಿಮ ಸ್ಫೋಟದ ಪರಿಣಾಮ ಈವರೆಗೆ 206 ಜನರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಈ ಪೈಕಿ ಕೇವಲ 32 ಜನರ ಮೃತದೇಹ ಪತ್ತೆಯಾಗಿದೆ. ಕಳೆದ 2 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಸುಮಾರು 170 ಕಾರ್ಮಿಕರ ದೇಹ ಪತ್ತೆ ಆಗಿಲ್ಲ. ಹೀಗಾಗಿ ನಾಪತ್ತೆಯಾದವರ ಪತ್ತೆಗೆ ಹುಡುಕಾಟ ತೀವ್ರಗೊಂಡಿದೆ.
240 ಮೀಟರ್ ಸುರಂಗದಲ್ಲಿ ಸಾವಿನ ಸುಳಿ? ಮತ್ತೊಂದ್ಕಡೆ ಪ್ರವಾಹದಿಂದ ಸುರಂಗವೊಂದರಲ್ಲಿ ಸಂಪೂರ್ಣ ಕೆಸರು ತುಂಬಿಕೊಂಡಿದೆ. 240 ಮೀಟರ್ ಸುರಂಗದಲ್ಲಿ ಕೆಸರು ತುಂಬಿದ್ದು, 3 ದಿನಗಳಿಂದ ಕೆಸರು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು ಇಂದು ನಾಲ್ಕನೇ ದಿನಕ್ಕೆ ಈ ಕಾರ್ಯಾಚರಣೆ ತಲುಪಿದೆ. ಆದ್ರೆ ಇಲ್ಲಿಯವರೆಗೂ ಕೇವಲ 120 ಮೀಟರ್ ಕೆಸರನ್ನು ಹೊರ ತೆಗೆಯಲಾಗಿದೆ. ಸುರಂಗದಲ್ಲಿ ಸಿಲುಕಿದವ್ರು ಬದುಕಿದ್ದಾರೋ ಇಲ್ಲವೋ ಎಂಬುದನ್ನ ತಿಳಿಯಲು ಇನ್ನೂ 60 ಮೀಟರ್ ಸುರಂಗ ಸ್ವಚ್ಛಗೊಳಿಸಬೇಕಿದೆ. ಐಟಿಬಿಪಿ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸೇನಾ ತಂಡಗಳು ಕಾರ್ಯಾಚರಣೆಯಲ್ಲಿ ಸಾಥ್ ನೀಡಿವೆ.
#WATCH A team ITBP, NDRF, SDRF & other agencies continue to conduct rescue operation inside Tapovan tunnel, Uttarakhand on the third day.
A meeting of all agencies incl senior officials of ITBP, NDRF, Army & local administration called today to decide further course of action pic.twitter.com/Q5oQYm38v6
— ANI (@ANI) February 10, 2021
ಕೊಚ್ಚಿಹೋಯ್ತು ಋಷಿಗಂಗಾ ನದಿಗೆ ನಿರ್ಮಿಸಿದ್ದ ಸೇತುವೆ ಇನ್ನು ಹಿಮ ಪ್ರವಾಹದ ಭೀಕರತೆ ಎಷ್ಟಿತ್ತೆಂದರೆ ಪ್ರವಾಹದ ಹೊಡೆತಕ್ಕೆ ಋಷಿಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಬ್ರಿಡ್ಜ್ ಕೊಚ್ಚಿಕೊಂಡು ಹೋಗಿದೆ. ಬ್ರಿಡ್ಜ್ ಕೊಚ್ಚಿಕೊಂಡು ಹೋಗಿರುವ ಪರಿಣಾಮ, ಬರೋಬ್ಬರಿ 13 ಗ್ರಾಮಗಳ ಸಂಪರ್ಕವು ಬಂದ್ ಆಗಿದೆ. 13 ಗ್ರಾಮಗಳ ಜನರಿಗೆ ಅನ್ನ, ನೀರು ಅಗತ್ಯ ವಸ್ತು ನೀಡಲು ಸೇನೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಹೆಲಿಕಾಪ್ಟರ್ ಮೂಲಕ ರೇಷನ್ ನೀಡುವ ಕಾರ್ಯ ಆರಂಭಿಸಲಾಗಿದೆ. ತಾತ್ಕಾಲಿಕ ಬ್ರಿಡ್ಜ್ ನಿರ್ಮಾಣ ಮಾಡೋದಕ್ಕೆ ಐಟಿಬಿಪಿ ಪಡೆ ಕಾರ್ಯಾಚರಣೆ ನಡೆಸುತ್ತಿದೆ.
ಒಟ್ನಲ್ಲಿ ಪ್ರಕೃತಿ ಮಾತೆ ಮುನಿಸಿಗೆ ಉತ್ತರಾಖಂಡ್ ತತ್ತರಿಸಿ ಹೋಗಿದ್ದು, ನಾಪತ್ತೆಯಾಗಿರುವ 170 ಕಾರ್ಮಿಕರು ಬದುಕಿ ಬರಲಿ ಎಂಬುದೇ ಎಲ್ಲರ ಆಶಯವಾಗಿದೆ. ಇಷ್ಟೆಲ್ಲ ಸಂಕಷ್ಟಗಳ ಮಧ್ಯೆ ಕಾರ್ಯಾಚರಣೆ ನಡೆಸುತ್ತಿರುವ ರಕ್ಷಣಾ ಪಡೆಗಳಿಗೆ ಒಂದು ಬಿಗ್ ಥ್ಯಾಂಕ್ಸ್ ಹೇಳಲೇಬೇಕಿದೆ.
Published On - 10:20 am, Wed, 10 February 21