ಯೋಗಗುರು ಬಾಬಾ ರಾಮ್​ದೇವ್ ವಿರುದ್ಧ ಜೂ.1ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಅಲೋಪಥಿಕ್​ ವೈದ್ಯರ ನಿರ್ಧಾರ

|

Updated on: May 29, 2021 | 10:18 PM

ಅಲೋಪಥಿಕ್​ ಬಗ್ಗೆ ಅವಹೇಳನ ಮಾಡಿದ ಬಾಬಾ ರಾಮ್​ ದೇವ್​ ಅವರು ಬೇಷರತ್ತು ಕ್ಷಮೆ ಕೇಳಬೇಕು ಎಂದೂ ರೆಸಿಡೆಂಟ್ ವೈದ್ಯರ ಸಂಘಗಳ ಒಕ್ಕೂಟ ​ಒತ್ತಾಯಿಸಿದೆ.

ಯೋಗಗುರು ಬಾಬಾ ರಾಮ್​ದೇವ್ ವಿರುದ್ಧ ಜೂ.1ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಅಲೋಪಥಿಕ್​ ವೈದ್ಯರ ನಿರ್ಧಾರ
ಯೋಗ ಗುರು ಬಾಬಾ ರಾಮ್​ದೇವ್​
Follow us on

ಅಲೋಪಥಿ ವೈದ್ಯಕೀಯ ಪದ್ಧತಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ ಯೋಗ ಗುರು ಬಾಬಾ ರಾಮ್​ ದೇವ್​ ವಿರುದ್ಧ ತಿರುಗಿಬಿದ್ದಿದೆ. ದೆಹಲಿಯ ಠಾಣೆಯೊಂದರಲ್ಲಿ ಎಫ್​ಐಆರ್​ ಕೂಡ ದಾಖಲಾಗಿದೆ. ಅಷ್ಟೇ ಅಲ್ಲ, ಬಾಬಾ ರಾಮ್​ ದೇವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಧಾನಿ ಮೋದಿಯವರಿಗೂ ಪತ್ರ ಬರೆದಿದೆ.

ಇಷ್ಟೆಲ್ಲ ಆದ ಮೇಲೆ ದೇಶಾದ್ಯಂತ ಎಲ್ಲಕಡೆ ಅಲೋಪಥಿಕ್​ ವಿವಿಧ ವಿಭಾಗದಲ್ಲಿ ತರಬೇತಿ ಪಡೆಯುತ್ತಿರುವ ವೈದ್ಯರು (Resident doctors) ಜೂ.1ರಂದು ಬಾಬಾ ರಾಮ್​ದೇವ್​ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅಲ್ಲದೆ, ಆ ದಿನವನ್ನು ಕರಾಳ ದಿನ ಎಂದು ಪರಿಗಣಿಸುವುದಾಗಿಯೂ ವೈದ್ಯರ ಸಂಘಟನೆಯಿಂದ ಅಧಿಕೃತ ಹೇಳಿಕೆ ಬಿಡುಗಡೆಯಾಗಿದೆ.

ಬಾಬಾ ರಾಮ್​ ದೇವ್​ ಅವರು ಬೇಷರತ್ತು ಕ್ಷಮೆ ಕೇಳಬೇಕು ಎಂದೂ ರೆಸಿಡೆಂಟ್ ವೈದ್ಯರ ಸಂಘಗಳ ಒಕ್ಕೂಟ ​ಒತ್ತಾಯಿಸಿದೆ. ಈ ವಿವಾದ ಶುರುವಾಗಿದ್ದು ಬಾಬಾ ರಾಮ್​ದೇವ್ ಅವರ ವಿಡಿಯೋವೊಂದು ವೈರಲ್​ ಆದ ಬಳಿಕ. ಅಲೋಪಥಿಕ್ ವೈದ್ಯಕೀಯ ಪದ್ಧತಿ ಒಂದು ಮೂರ್ಖ ಪದ್ಧತಿ. ಈ ಔಷಧಿ ತೆಗೆದುಕೊಂಡು ಲಕ್ಷಾಂತರ ಮಂದಿ ಮೃತಪಟ್ಟಿದ್ದಾರೆ ಎಂದು ಬಾಬಾ ರಾಮ್​ ದೇವ್​ ಹೇಳಿದ ವಿಡಿಯೋ ವೈರಲ್​ ಆಗುತ್ತಿದ್ದಂತೆ ಭಾರತೀಯ ವೈದ್ಯಕೀಯ ಸಂಘ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಪತಂಜಲಿ ಯೋಗ ಟ್ರಸ್ಟ್​ ಸ್ಪಷ್ಟನೆ ನೀಡಿದ್ದರೂ ವೈದ್ಯರು ಅದನ್ನು ಒಪ್ಪುತ್ತಿಲ್ಲ. ಜನರಲ್ಲಿ ತಪ್ಪು ಕಲ್ಪನೆ ಬಿತ್ತುತ್ತಿದ್ದಾರೆ. ಅಲೋಪಥಿಕ್​ನ್ನು ಅಗೌರವಿಸುತ್ತಿದ್ದಾರೆ ಎಂದು ಐಎಂಎ ಆರೋಪಿಸಿದೆ.

ಇದನ್ನೂ ಓದಿ: ಅತ್ಯಾಚಾರ ಆರೋಪ ಎದುರಿಸುತ್ತಿದ್ದ ಕಂಗನಾ ರಣಾವತ್ ಬಾಡಿಗಾರ್ಡ್ ಮಂಡ್ಯದಲ್ಲಿ ಅರೆಸ್ಟ್​