ಸಚಿನ್ ಪೈಲಟ್ ಸರದಿ ಬರುವುದೇ ಇಲ್ಲ, ಯಾಕೆ ಗೊತ್ತಾ? ರಾಜಸ್ಥಾನದಲ್ಲಿ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಾಖ್ಯಾನ

|

Updated on: Apr 15, 2023 | 6:53 PM

ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 2/3 ಬಹುಮತದೊಂದಿಗೆ ರಾಜಸ್ಥಾನದಲ್ಲಿ ಸರ್ಕಾರ ರಚಿಸಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.

ಸಚಿನ್ ಪೈಲಟ್ ಸರದಿ ಬರುವುದೇ ಇಲ್ಲ, ಯಾಕೆ ಗೊತ್ತಾ? ರಾಜಸ್ಥಾನದಲ್ಲಿ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಾಖ್ಯಾನ
ರಾಜಸ್ಥಾನದಲ್ಲಿ ಕಾಂಗ್ರೆಸ್ ಬಿಕ್ಕಟ್ಟಿನ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ
Follow us on

ಭರತ್‌ಪುರ: ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷದಲ್ಲಿನ (Rajasthan Congress) ಆಂತರಿಕ ಕಲಹವನ್ನು (infighting) ಗುರಿಯಾಗಿಸಿಕೊಂಡು ವ್ಯಾಖ್ಯಾನ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Home Minister Amit Shah) ಅವರು ರಾಜ್ಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಭ್ರಷ್ಟಾಚಾರದ ಹಣದಿಂದ ತನ್ನ ಬೊಕ್ಕಸವನ್ನು ತುಂಬುವಲ್ಲಿ ಸಚಿನ್ ಪೈಲಟ್‌ಗಿಂತ (Sachin Pilot) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ (Chief Minister Ashok Gehlot) ಅವರ ಕೊಡುಗೆ ಹೆಚ್ಚಿರುವುದರಿಂದ ಪಕ್ಷವು ಯಾವಾಗಲೂ ಗೆಹ್ಲೋಟ್‌ ಅವರಿಗೇ ಆದ್ಯತೆ ನೀಡುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಾಖ್ಯಾನಿಸಿದ್ದಾರೆ.

“ಯಾವುದೇ ನೆಪ ಹೂಡಿ ಪೈಲಟ್ ಧರಣಿ ಕುಳಿತುಕೊಳ್ಳಬಹುದು, ಆದರೆ ಅವರ ಸರದಿ ಬರುವುದಿಲ್ಲ. ಏಕೆಂದರೆ ಕಾಂಗ್ರೆಸ್ ಪಕ್ಷದ ಬೊಕ್ಕಸವನ್ನು ತುಂಬುವಲ್ಲಿ ಅವರ ಕೊಡುಗೆ ಕಡಿಮೆ ಮತ್ತು ಗೆಹ್ಲೋಟ್ ಅವರ ಕೊಡುಗೆ ಹೆಚ್ಚಾಗಿದೆ ಎಂದು ಭರತ್‌ಪುರದಲ್ಲಿ ಬೂತ್ ಮಟ್ಟದ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಶಾ ಹೇಳಿದರು.

ಸಿಎಂ ಗೆಹ್ಲೋಟ್ ರಾಜಸ್ಥಾನ ಸರ್ಕಾರವನ್ನು ಭ್ರಷ್ಟಾಚಾರದ ಅಡ್ಡಾ (ಹಬ್) ಮಾಡಿ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಈ ಭ್ರಷ್ಟಾಚಾರದ ಹಣ ನೇರವಾಗಿ ಕಾಂಗ್ರೆಸ್ ಪಕ್ಷದ ಬೊಕ್ಕಸಕ್ಕೆ ಹೋಗಿದೆ ಎಂದು ಬಿಜೆಪಿ ಮುಖಂಡ ಶಾ ಆರೋಪಿಸಿದ್ದಾರೆ.

2008 ರ ಜೈಪುರ ಬಾಂಬ್ ಸ್ಫೋಟ ಪ್ರಕರಣದ (Jaipur bomb blast case) ಆರೋಪಿಗಳನ್ನು ಖುಲಾಸೆಗೊಳಿಸಿರುವ ಬಗ್ಗೆ ಮಾತನಾಡಿದ ಶಾ, ವೋಟ್ ಬ್ಯಾಂಕ್ ರಾಜಕೀಯದ ಕಾರಣ ಕಾಂಗ್ರೆಸ್ ಸರ್ಕಾರವು ಹೈಕೋರ್ಟ್‌ನಲ್ಲಿ ಸರಿಯಾದ ವಾದವನ್ನು ಮಂಡಿಸಲಿಲ್ಲ ಎಂದು ಆರೋಪಿಸಿದರು. ಸ್ಫೋಟ ಸಂತ್ರಸ್ತರ ಸಾವಿನ ವಿಚಾರದಲ್ಲಿ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ಅವರು ಟೀಕಿಸಿದರು.

“ರಾಜಸ್ಥಾನದಲ್ಲಿ 3-ಡಿ ಸರ್ಕಾರ ಇದೆ. ಆ ಮೂರು ಡಿ ಎಂದರೆ ‘ದಂಗೆ’ (dange -ಗಲಭೆಗಳು), ಮಹಿಳೆಯರೊಂದಿಗೆ ‘ದುರ್ವ್ಯವಹಾರ್​’ (durvyavhar) ಮತ್ತು ‘ದಲಿತ’ರ ಮೇಲಿನ (Dalit) ದೌರ್ಜನ್ಯಗಳನ್ನು ಸೂಚಿಸುತ್ತದೆ.

ಜನರು ಚುನಾವಣೆಯಲ್ಲಿ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುತ್ತಾರೆ ಎಂದು ಸಚಿವ ಶಾ ಇದೇ ಸಂದರ್ಭದಲ್ಲಿ ಹೇಳಿದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 2/3 ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ ಮತ್ತು ರಾಜಸ್ಥಾನದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಎಲ್ಲಾ 25 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಪ್ರತಿಪಾದಿಸಿದರು.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿ, ಪಕ್ಷದ ಸಿದ್ಧಾಂತ ಮತ್ತು ಪ್ರಧಾನಿ ಮೋದಿ ಜನಪ್ರಿಯತೆಯ ಆಧಾರದ ಮೇಲೆ ಬಿಜೆಪಿ ಚುನಾವಣೆಗೆ ಹೋಗಲಿದೆ ಎಂದು ಹೇಳಿದರು.

ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜಸ್ಥಾನದ ಇತಿಹಾಸದಲ್ಲಿ ಅತ್ಯಂತ ಭ್ರಷ್ಟ ಸರ್ಕಾರಗಳಲ್ಲಿ ಒಂದಾಗಿದೆ. ಜನರು ಬೇಸತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Sat, 15 April 23