AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಮುಂಭಾಗದ ರಸ್ತೆಗುಂಡಿಗೆ ನಿಜವಾಗಿ ಯಾರು ಹೊಣೆ? ಯಾರೋ ಒಬ್ಬರಿಗೆ ಶಪಿಸುವ ಮುನ್ನ ಈ ವಿಚಾರಗಳನ್ನು ತಿಳಿದಿರಿ

Santosh Nair's article in 'Your India' series: ಭಾರತದಲ್ಲಿ ರಸ್ತೆ ಗುಂಡಿಗಳು ಹೆಚ್ಚುತ್ತಿರುವ ಅಪಘಾತಗಳಿಗೆ ಹಾಗೂ ಸಾವಿಗೆ ಕಾರಣವಾಗುತ್ತಿವೆ. ಯಾವ ರಸ್ತೆಯ ನಿರ್ವಹಣೆಗೆ ಯಾರು ಹೊಣೆ ಎಂಬ ಗೊಂದಲದಿಂದ ನಾಗರಿಕರು ದೂರು ನೀಡಲು ಕಷ್ಟಪಡುತ್ತಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಮಹಾನಗರ ಪಾಲಿಕೆ ರಸ್ತೆಗಳ ಜವಾಬ್ದಾರಿ ವಿಭಿನ್ನ. ಸರಿಯಾದ ಇಲಾಖೆಯನ್ನು ಗುರುತಿಸಿ ದೂರು ನೀಡುವುದು ರಸ್ತೆ ಗುಂಡಿಗಳ ಸಮಸ್ಯೆಯ ಪರಿಹಾರಕ್ಕೆ ನಿರ್ಣಾಯಕವಾಗಿದೆ.

ಮನೆ ಮುಂಭಾಗದ ರಸ್ತೆಗುಂಡಿಗೆ ನಿಜವಾಗಿ ಯಾರು ಹೊಣೆ? ಯಾರೋ ಒಬ್ಬರಿಗೆ ಶಪಿಸುವ ಮುನ್ನ ಈ ವಿಚಾರಗಳನ್ನು ತಿಳಿದಿರಿ
ಗುಂಡಿಬಿದ್ದ ರಸ್ತೆಯ ಸಾಂದರ್ಭಿಕ ಚಿತ್ರImage Credit source: PTI
Santosh Nair
| Edited By: |

Updated on:Oct 06, 2026 | 1:27 PM

Share

ಒಂದು ಸಂಜೆ ದ್ವಿಚಕ್ರ ವಾಹನವೊಂದು ದಿಢೀರನೇ ಸಿಕ್ಕ ರಸ್ತೆಯ ಗುಂಡಿಗೆ ಇಳಿದುಬಿಡುತ್ತದೆ. ಅದು ಹೇಗೋ ಸವಾರ ತನ್ನ ವಾಹನ ನಿಯಂತ್ರಿಸಿಕೊಂಡು ಮುಂದೆ ಹೋಗುತ್ತಾನೆ. ಈ ರಸ್ತೆ ಗುಂಡಿಗೆ ಶಪಿಸುವುದರ ಜೊತೆಗೆ ಸರ್ಕಾರಕ್ಕೂ ಶಾಪ ಹಾಕುತ್ತಾ ಆ ವಾಹನ ಸವಾರ ಹೋಗುತ್ತಾನೆ.

ಆದರೆ ರಸ್ತೆಯಲ್ಲಿರುವ ಆ ಗುಂಡಿಗೆ ನಿಜವಾದ ಹೊಣೆ ಯಾವ ಸರ್ಕಾರದ್ದು?

ಪ್ರಾಮಾಣಿಕ ಉತ್ತರವೆಂದರೆ, ಆ ರಸ್ತೆ ಯಾವುದು ಎಂಬುದರ ಮೇಲೆ ಪ್ರಾಮಾಣಿಕ ಉತ್ತರ ಅವಲಂಬಿತವಾಗಿರುತ್ತದೆ. ಈ ರಸ್ತೆಗೆ ಮತ್ತು ರಸ್ತೆಗುಂಡಿಗೆ ಯಾರು ಹೊಣೆ ಎಂಬುದನ್ನು ಗುರುತಿಸುವುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ.

ಸರ್ಕಾರಗಳಲ್ಲಿ ವಿವಿಧ ಎಳೆಗಳಿರುವಂತೆ ಭಾರತದ ರಸ್ತೆಗಳನ್ನೂ ವಿವಿಧ ಪದರಗಳನ್ನಾಗಿ ವಿಂಗಡಿಸಬಹುದು. ರಾಜ್ಯಗಳು ಮತ್ತು ನಗರಗಳನ್ನು ಸಂಪರ್ಕಿಸುವ ಉದ್ದದ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ರಸ್ತೆಗಳನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಬರುವ ‘ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ’ (NHAI) ನಿರ್ಮಿಸುತ್ತದೆ ಮತ್ತು ನಿರ್ವಹಿಸುತ್ತದೆ. ಒಂದು ರಾಜ್ಯದೊಳಗಿನ ಪಟ್ಟಣಗಳನ್ನು ಸಂಪರ್ಕಿಸುವ ‘ರಾಜ್ಯ ಹೆದ್ದಾರಿಗಳ’ (State Highways) ಹೊಣೆಗಾರಿಕೆ ಸಾಮಾನ್ಯವಾಗಿ ಆಯಾ ರಾಜ್ಯದ ‘ಲೋಕೋಪಯೋಗಿ ಇಲಾಖೆ’ಗೆ (PWD) ಸೇರಿರುತ್ತದೆ. ಜಿಲ್ಲಾ ಮತ್ತು ಗ್ರಾಮೀಣ ರಸ್ತೆಗಳು ಅದೇ PWD ಅಥವಾ ಗ್ರಾಮೀಣ ಭಾಗಗಳಲ್ಲಿ ‘ಪಂಚಾಯಿತಿ’ಗಳ ವ್ಯಾಪ್ತಿಗೆ ಬರುತ್ತವೆ. ಇನ್ನು ಹೆಚ್ಚಿನ ನಗರಗಳಲ್ಲಿ ಜನರು ಪ್ರತಿದಿನ ನಡೆದಾಡುವ ಮತ್ತು ವಾಹನ ಚಲಾಯಿಸುವ ಮನೆಯ ಮುಂಭಾಗದ ಸಾಮಾನ್ಯ ರಸ್ತೆಯು ಸ್ಥಳೀಯ ‘ಮಹಾನಗರ ಪಾಲಿಕೆ/ನಗರ ಸಭೆ’ಗೆ (Municipal Corporation) ಸೇರಿರುತ್ತದೆ.

ನಾಲ್ಕು ವಿಭಿನ್ನ ರಸ್ತೆಗಳು. ನಾಲ್ಕು ವಿಭಿನ್ನ ಮಾಲೀಕರು. ಆದರೆ ವಾಹನ ಚಲಾಯಿಸುವ ಒಬ್ಬ ಸವಾರನಿಗೆ ಇವುಗಳಲ್ಲಿ ಯಾವುದು ಯಾರದ್ದು ಎಂದು ಬಹುತೇಕ ತಿಳಿದೇ ಇರುವುದಿಲ್ಲ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವೇ ಸಂಸತ್ತಿಗೆ ಸಲ್ಲಿಸಿದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ರಸ್ತೆ ಗುಂಡಿಗಳಿಂದ ಸಂಭವಿಸಿದ ಸಾವುಗಳ ಸಂಖ್ಯೆಯು 2020 ರಲ್ಲಿ 1,555 ರಿಂದ 2024 ರಲ್ಲಿ 2,385 ಕ್ಕೆ ಏರಿಕೆಯಾಗಿದೆ. ಅಂದರೆ ಕೇವಲ ಐದು ವರ್ಷಗಳಲ್ಲಿ ಸಾವಿನ ಸಂಖ್ಯೆ ಶೇ. 53 ರಷ್ಟು ಭಾರಿ ಏರಿಕೆಯಾಗಿದೆ. ಈ ಅವಧಿಯಲ್ಲಿ ಒಟ್ಟು 9,400 ಕ್ಕೂ ಹೆಚ್ಚು ಜನರು ರಸ್ತೆ ಗುಂಡಿಗಳಿಗೆ ಸಂಬಂಧಿಸಿದ ಅಪಘಾತಗಳಲ್ಲಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಇದರಲ್ಲಿ ಉತ್ತರ ಪ್ರದೇಶ ಒಂದರಲ್ಲೇ 5,100 ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದು, ಇದು ದೇಶದ ಒಟ್ಟು ಸಾವುಗಳ ಅರ್ಧಕ್ಕಿಂತ ಹೆಚ್ಚಾಗಿದೆ.

ಇದನ್ನೂ ಓದಿ: ಬೀದಿ ದೀಪ ಕೆಟ್ಟರೆ ಯಾರು ಸರಿಪಡಿಸಬೇಕು? ಯಾರಿಗೆ ದೂರು ಕೊಡಬೇಕು? ಮೂರು ಹಂತಗಳ ಆಡಳಿತ ವ್ಯವಸ್ಥೆ ತಿಳಿದಿರಿ

ಊಹಿಸಲು ಸಾಧ್ಯವಿಲ್ಲದ ಘಟನೆಗಳು ಅಪಘಾತಗಳೆನಿಸುತ್ತವೆ. ಈ ಅರ್ಥದಲ್ಲಿ ನೋಡಿದರೆ ರಸ್ತೆಗುಂಡಿಗಳಿಂದ ಆಗುವುದು ಆಕಸ್ಮಿಕ ಅಪಘಾತವಲ್ಲ. ಒಂದು ರಸ್ತೆಗುಂಡಿ ದಿಢೀರ್ ನಿರ್ಮಾಣವಾಗುವುದಿಲ್ಲ. ಸಾಮಾನ್ಯವಾಗಿ ಮುಂಗಾರು ಮಳೆಯು ರಸ್ತೆಯ ಮೇಲ್ಮೈಯನ್ನು ದುರ್ಬಲಗೊಳಿಸಿದ ನಂತರ, ಅದು ತಿಂಗಳುಗಟ್ಟಲೆ ನಿಧಾನವಾಗಿ ಬಿರುಕು ದೊಡ್ಡದಾಗುತ್ತಾ ಬೆಳೆಯುತ್ತದೆ. ರಸ್ತೆ ಹಾಳಾಗುತ್ತಿದೆ ಎಂದು ತಿಳಿದಿದ್ದರೂ ಜನರು ಪ್ರತಿದಿನ ಅದನ್ನು ಹಾದು ಹೋಗುತ್ತಿರುತ್ತಾರೆ. ಯಾರಾದರೂ ಅದನ್ನು ಗಮನಿಸಿದ್ದಾರೆಯೇ ಎಂಬುದು ಇಲ್ಲಿ ಪ್ರಶ್ನೆಯಲ್ಲ; ಅದನ್ನು ಸರಿಪಡಿಸುವುದು ತಮ್ಮ ಕರ್ತವ್ಯ ಎಂದು ಆ ಕೆಲಸ ಮಾಡಬೇಕಾದವರಿಗೆ ನಿಜವಾಗಿ ತಿಳಿದಿದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ಇಲ್ಲಿಯೇ ನಾಗರಿಕರು ನಿಜವಾಗಿ ಅಸಹಾಯಕರಾಗುವುದು. ರಸ್ತೆಯ ಒಂದು ಭಾಗವು ರಾಷ್ಟ್ರೀಯ ಹೆದ್ದಾರಿಯೇ, ರಾಜ್ಯ ಹೆದ್ದಾರಿಯೇ ಅಥವಾ ನಗರ ಸಭೆಯ ರಸ್ತೆಯೇ ಎಂಬುದು ನಿಮಗೆ ತಿಳಿಯದಿದ್ದರೆ, ಯಾರಿಗೆ ಕರೆ ಮಾಡಬೇಕೆಂದು ನಿಮಗೆ ತಿಳಿಯುವುದಿಲ್ಲ. ಬೀದಿ ದೀಪವಾದರೆ ಆ ಪ್ರದೇಶದ ನಗರಸಭೆಯೋ, ಗ್ರಾಮ ಪಂಚಾಯಿತಿ ಕಡೆಗೋ ಬೊಟ್ಟು ಮಾಡಬಹುದು. ಆದರೆ, ಒಂದೇ ರಸ್ತೆಯ ಮಾಲಕತ್ವ ಬದಲಾಗಬಹುದು. ಯಾವ ಪ್ರದೇಶದ ವ್ಯಾಪ್ತಿಯಲ್ಲಿ ರಸ್ತೆ ಹಾಳಾಗಿದೆ ಎಂಬುದರ ಮೇಲೆ ಹೊಣೆಗಾರಿಕೆ ಬದಲಾಗುತ್ತದೆ.

ಒಮ್ಮೆ ನೀವು ಗಮನಿಸಲು ಪ್ರಾರಂಭಿಸಿದರೆ ಇದನ್ನು ಗುರುತಿಸಲು ಒಂದು ಸರಳ ಮಾರ್ಗವಿದೆ. ರಾಷ್ಟ್ರೀಯ ಹೆದ್ದಾರಿಗಳು “NH” ಎಂದು ಪ್ರಾರಂಭವಾಗುವ ಸಂಖ್ಯೆಯನ್ನು ಹೊಂದಿರುತ್ತವೆ. ರಾಜ್ಯ ಹೆದ್ದಾರಿಗಳನ್ನು “SH” ಎಂದು ಗುರುತಿಸಲಾಗುತ್ತದೆ. ಇವೆರಡೂ ನೇರವಾಗಿ ನಗರದ ಮಧ್ಯಭಾಗದಲ್ಲೇ ಹಾದುಹೋದರೂ, ಇವು ಸಾಮಾನ್ಯವಾಗಿ ನಗರ ಸಭೆಯ ದುರಸ್ತಿ ಪಟ್ಟಿಗೆ ಬರುವುದಿಲ್ಲ. ಇನ್ನುಳಿದಂತೆ ಮನೆಗಳು, ಅಂಗಡಿಗಳು ಮತ್ತು ಶಾಲೆಗಳ ನಡುವಿನ ಎಲ್ಲಾ ಸಾಮಾನ್ಯ ರಸ್ತೆಗಳ ನಿರ್ವಹಣೆಯು ಸಾಮಾನ್ಯವಾಗಿ ನಗರ ಸಭೆಯ/ಮಹಾನಗರ ಪಾಲಿಕೆಯ ಕರ್ತವ್ಯವಾಗಿರುತ್ತದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ರಾಷ್ಟ್ರೀಯ ಹೆದ್ದಾರಿಗಳಲ್ಲಿನ ರಸ್ತೆ ಗುಂಡಿಗಳು, ಅಪಘಾತಗಳು ಮತ್ತು ವಾಹನಗಳ ದುರಸ್ತಿ ಸೇರಿದಂತೆ ಇತರ ಸಮಸ್ಯೆಗಳಿಗಾಗಿ ಪ್ರತ್ಯೇಕವಾಗಿ ‘1033’ ಎಂಬ ಉಚಿತ ಟೋಲ್-ಫ್ರೀ ಸಹಾಯವಾಣಿಯನ್ನು ನಿರ್ವಹಿಸುತ್ತದೆ. ಹೆಚ್ಚಿನ ರಾಜ್ಯಗಳ PWDಗಳು ಮತ್ತು ನಗರ ಸಭೆಗಳು ಈಗ ದೂರವಾಣಿ ಲೈನ್‌ಗಳು ಅಥವಾ ಮೊಬೈಲ್ ಆಪ್‌ಗಳ ಮೂಲಕ ದೂರುಗಳನ್ನು ಸ್ವೀಕರಿಸುತ್ತವೆ. ಆದರೆ ಇವುಗಳ ಬಗೆಗಿನ ಜಾಗೃತಿ ನಗರದಿಂದ ನಗರಕ್ಕೆ ಸಾಕಷ್ಟು ಭಿನ್ನವಾಗಿದೆ.

ದೂರು ಸಲ್ಲಿಕೆಯಾದ ಮೇಲೆಯೂ ತಡವಾಗಿ ದುರಸ್ತಿ ಮಾಡುವುದಕ್ಕೆ ಇವು ಯಾವುದೂ ಸಮರ್ಥನೆಯಲ್ಲ. ಅಪಾಯಕಾರಿ ರಸ್ತೆಗಳನ್ನು ಸುದೀರ್ಘ ಅವಧಿಯವರೆಗೆ ದುರಸ್ತಿ ಮಾಡದೆ ಬಿಟ್ಟಿದ್ದಕ್ಕಾಗಿ ಎಲ್ಲಾ ಹಂತದ ಅಧಿಕಾರಿಗಳನ್ನು ನ್ಯಾಯಾಲಯಗಳು ವಿವಿಧ ಸ ತರಾಟೆಗೆ ತೆಗೆದುಕೊಂಡಿವೆ. ಆದರೆ ತಪ್ಪಾದ ಕಚೇರಿಗೆ ತಲುಪುವ ದೂರು ಬಹುತೇಕ ಸಂದರ್ಭಗಳಲ್ಲಿ ಸರಿಯಾದ ಟೇಬಲ್ ತಲುಪುವುದೇ ಇಲ್ಲ. ಅದು ಅಧಿಕಾರ ವ್ಯಾಪ್ತಿಯ (Jurisdiction) ಆಧಾರದ ಮೇಲೆ ರಚಿತವಾದ ವ್ಯವಸ್ಥೆಯಲ್ಲಿ ಸರಳವಾಗಿ ಕಣ್ಮರೆಯಾಗುತ್ತದೆ, ಆದರೆ ಸಾಮಾನ್ಯ ನಾಗರಿಕನಿಗೆ ಅದು “ಯಾರೂ ಉತ್ತರಿಸುತ್ತಿಲ್ಲ” ಎಂದಷ್ಟೇ ಅನುಭವಕ್ಕೆ ಬರುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಮಸೂದೆಯೊಂದು ಕಾಯ್ದೆ ಆಗುವುದು ಹೇಗೆ? ಪ್ರತಿಯೊಬ್ಬರಿಗೂ ತಿಳಿದಿರಬೇಕು ಸಂಸತ್ತಿನ ಶಾಸನ ರಚನೆ ಪ್ರಕ್ರಿಯೆ ಮತ್ತದರ ಮಹತ್ವ

ಮುಂದಿನ ಬಾರಿ ದ್ವಿಚಕ್ರ ವಾಹನ ರಸ್ತೆ ಗುಂಡಿಯಿಂದಾಗಿ ನಿಯಂತ್ರಣ ತಪ್ಪಿದಾಗ, ಕಾರಿನ ಅಲೈನ್ಮೆಂಟ್ ಹಾಳಾದಾಗ ಅಥವಾ ಹೊರಗೆ ಹೋದ ನಿಮ್ಮ ಬಂಧು ಅಥವಾ ಸ್ನೇಹಿತ ಮನೆಗೆ ತೀರಾ ಕೆಟ್ಟ ಸಂದರ್ಭದಲ್ಲಿ ಯಾರೋ ಒಬ್ಬರು ಮನೆಗೆ ಹಿಂತಿರುಗದಿದ್ದಾಗ ಇದನ್ನು ನೆನಪಿಟ್ಟುಕೊಳ್ಳುವುದು ಸೂಕ್ತ. ನಿಮ್ಮ ಆಕ್ರೋಶ ಅರ್ಥಪೂರ್ಣವಾದುದು. ಆದರೆ ಆ ಆಕ್ರೋಶವನ್ನು ಸರಿಯಾಗಿ ಬಳಸಿಕೊಳ್ಳಬೇಕಾದರೆ, ಒಂದು ಸಂಖ್ಯೆಗೆ ಕರೆ ಮಾಡುವ ಮೊದಲು ಅಥವಾ ದೂರು ಬರೆಯುವ ಮೊದಲು ಒಂದು ಹೆಚ್ಚುವರಿ ಪ್ರಶ್ನೆಯನ್ನು ಕೇಳಿಕೊಳ್ಳಬೇಕು: ಇದು ನಿಜವಾಗಿಯೂ ಯಾವ ರಸ್ತೆ, ಮತ್ತು ಇದನ್ನು ಮೊದಲಿನಿಂದಲೂ ಸರಿಪಡಿಸಬೇಕಾದ ಹೊಣೆಗಾರಿಕೆ ಯಾರದ್ದಾಗಿತ್ತು?

ರಸ್ತೆಯ ಗುಂಡಿಗೆ ತಾನು ಯಾವ ಇಲಾಖೆಗೆ ಸೇರಿದ ರಸ್ತೆಯಲ್ಲಿದ್ದೇನೆ ಎಂಬುದು ಮುಖ್ಯವಾಗುವುದಿಲ್ಲ. ಆದರೆ ದುರದೃಷ್ಟವಶಾತ್, ಆ ಗುಂಡಿಗೆ ಬಿದ್ದ ವ್ಯಕ್ತಿಗೆ ಅದು ಮುಖ್ಯವಾಗುತ್ತದೆ.

ಆಧಾರಗಳು: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ರಸ್ತೆ ಗುಂಡಿಗಳಿಂದಾದ ಸಾವುಗಳ ಕುರಿತು ಸಂಸತ್ತಿಗೆ ಸಲ್ಲಿಸಿದ ಅಂಕಿಅಂಶಗಳು (2020–2024); ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಸಹಾಯವಾಣಿ ಮತ್ತು ಅಧಿಕಾರ ವ್ಯಾಪ್ತಿಯ ಮಾಹಿತಿ; ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳು, ರಾಜ್ಯ ಹೆದ್ದಾರಿಗಳು ಮತ್ತು ನಗರ ರಸ್ತೆಗಳ ವರ್ಗೀಕರಣ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:27 pm, Tue, 6 October 26

Follow Us
Santosh Nair
Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ರಾಜ್ಯ ಸರ್ಕಾರದ ವಿರುದ್ಧ ಗವರ್ನರ್​​ಗೆ ಬಿಜೆಪಿ-ಜೆಡಿಎಸ್​​ ನಿಯೋಗದಿಂದ ದೂರು
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಫ್ಲೈದುಬೈ ವಿಮಾನ ಘಟನೆ: ಇರಾನ್ ವಿರುದ್ಧ ಟ್ರಂಪ್ ಗಂಭೀರ ಆರೋಪ
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ಕಾರವಾರ ಕ್ರಿಮ್ಸ್ ಹಾಸ್ಟೆಲ್ ಅವ್ಯವಸ್ಥೆ: ವೈದ್ಯಕೀಯ ವಿದ್ಯಾರ್ಥಿಗಳ ಪರದಾಟ!
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ನಕಲಿ ದಾಖಲೆ ಸೃಷ್ಟಿಸಿ ಜೈಲಿನಿಂದ ಬಿಡುಗಡೆ​​ ಪ್ರಕರಣ ಬಯಲಾಗಿದ್ದೇ ರೋಚಕ
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಕೆಪಿಎಸ್‌ಸಿ ನೇಮಕಾತಿ ಹಗರಣ: ತನಿಖೆ ವಿಚಾರವಾಗಿ ಇಡಿ-ಸಿಐಡಿ ನಡುವೆ ಜಟಾಪಟಿ!
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ದಸರಾ: ಖಾಸಗಿ ದರ್ಬಾರ್ ಮತ್ತು ರತ್ನಖಚಿತ ಸಿಂಹಾಸನದ ವಿಶೇಷತೆ
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್; ಗತವೈಭವ ಕಂಡು ಬೆರಗು
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು vs ರಾಕ್ಷಸರು; ಮಂಜು ಅಬ್ಬರ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಇಂದು ಈ ರಾಶಿಯವರು ಸಾಲದ ವಿಚಾರದಲ್ಲಿ ಸ್ವಲ್ಪ ಜಾಗೃತರಾಗಿರಿ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ
ಬೆಂಗಳೂರಿನಾದ್ಯಂತ ವರುಣಾರ್ಭಟ: ರಾತ್ರಿ ಮಳೆಗೆ ರಸ್ತೆಗಳು ಜಲಾವೃತ