ಬೆಳ್ಳಿಗಜ್ಜೆಗಾಗಿ ಮಹಿಳೆಯರ ಪಾದವನ್ನೇ ಕತ್ತರಿಸಿ, ಹತ್ಯೆ ಮಾಡುವ ಸೈಕೋಗಾಗಿ ಹುಡುಕಾಟ; ಎರಡನೇ ಘಟನೆಯ ಬೆನ್ನಲ್ಲೇ ಚುರುಕಾದ ಪೊಲೀಸರು

| Updated By: Lakshmi Hegde

Updated on: Nov 18, 2021 | 10:36 AM

Rajasthan Crime: ಹತ್ಯೆಯಾದ ಮಹಿಳೆಯನ್ನು ಕಂಕುಬಾಯಿ ಎಂದು ಗುರುತಿಸಲಾಗಿದೆ. ಈಕೆಯ ಪತಿ ಮುಂಜಾನೆಯೇ ಕೆಲಸಕ್ಕೆಂದು ಹೊಲಕ್ಕೆ ಹೋಗಿದ್ದರು. ಅವರಿಗೆ ತಿಂಡಿ ತೆಗೆದುಕೊಂಡು ಹೋಗಲು ಮನೆಯಿಂದ ಹೊರಟಿದ್ದರು.

ಬೆಳ್ಳಿಗಜ್ಜೆಗಾಗಿ ಮಹಿಳೆಯರ ಪಾದವನ್ನೇ ಕತ್ತರಿಸಿ, ಹತ್ಯೆ ಮಾಡುವ ಸೈಕೋಗಾಗಿ ಹುಡುಕಾಟ; ಎರಡನೇ ಘಟನೆಯ ಬೆನ್ನಲ್ಲೇ ಚುರುಕಾದ ಪೊಲೀಸರು
ಸಾಂಕೇತಿಕ ಚಿತ್ರ
Follow us on

ಕೆಲವು ದಿನಗಳ ಹಿಂದೆ ಜೈಪುರದಲ್ಲಿ ಮಹಿಳೆಯೊಬ್ಬರ ಶವ ಕಾಲು ಕತ್ತರಿಸಿದ ರೀತಿಯಲ್ಲಿ ಪತ್ತೆಯಾಗಿತ್ತು. ದನ ಮೇಯಿಸಲು ಹೋಗಿದ್ದ ಆಕೆಯ ಶವ ಸಿಕ್ಕಿತ್ತು..ನೋಡಿದರೆ ಕಾಲಿನ ಪಾದಗಳು ಇರಲಿಲ್ಲ. ಇದೀಗ ರಾಜಸ್ಥಾನದ ರಾಜ್​ಸಮಂದ್​ ಜಿಲ್ಲೆಯ ಚಾರ್ಭುಜಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 45 ವರ್ಷದ ಮಹಿಳೆಯೊಬ್ಬರ ಮೃತದೇಹ ಪಾದ ಕತ್ತರಿಸಿದ  ರೀತಿಯಲ್ಲಿ ಪತ್ತೆಯಾಗಿದೆ. ಇದೀಗ ಆತಂಕಕ್ಕಾಗಿ ಕಾರಣವಾಗಿದ್ದು, ಇದು ಬೆಳ್ಳಿಗಜ್ಜೆಗಾಗಿ ನಡೆಯುತ್ತಿರುವ ಕೊಲೆ, ಶೀಘ್ರವೇ ಆರೋಪಿಯನ್ನು ಬಂಧಿಸುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 

ಇದೀಗ ಹತ್ಯೆಯಾದ ಮಹಿಳೆಯನ್ನು ಕಂಕುಬಾಯಿ ಎಂದು ಗುರುತಿಸಲಾಗಿದೆ. ಈಕೆಯ ಪತಿ ಮುಂಜಾನೆಯೇ ಕೆಲಸಕ್ಕೆಂದು ಹೊಲಕ್ಕೆ ಹೋಗಿದ್ದರು. ಅವರಿಗೆ ತಿಂಡಿ ತೆಗೆದುಕೊಂಡು ಹೋಗಲು ಮನೆಯಿಂದ ಹೊರಟಿದ್ದರು. ಆದರೆ ಅತ್ತ ಪತಿ ತಿಂಡಿಗಾಗಿ ಕಾಯುತ್ತಿದ್ದರೂ ಕಂಕುಬಾಯಿ ಹೋಗಲೇ ಇಲ್ಲ.  ಎಷ್ಟೇ ಹೊತ್ತಾದರೂ ಕಂಕುಬಾಯಿ ಬಾರದೆ ಇದ್ದಾಗ ಪತಿಯೇ ಮನೆಗೆ ವಾಪಸ್​ ಬಂದು, ಮಕ್ಕಳ ಬಳಿ ಅಮ್ಮ ಎಲ್ಲಿ ಎಂದು ಕೇಳಿದ್ದಾರೆ. ಆಗ ಮಕ್ಕಳು, ಅಮ್ಮ ನಿಮಗಾಗಿ ತಿಂಡಿ ತೆಗೆದುಕೊಂಡು ಮುಂಜಾನೆಯೇ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಅನುಮಾನಗೊಂಡ ಕಂಕುಬಾಯಿ ಪತಿ, ತಮ್ಮ ಕೆಲವು ಸಂಬಂಧಿಕರೊಂದಿಗೆ ಸೇರಿ ಹುಡುಕಿದ್ದಾರೆ. ರಾತ್ರಿಯವರೆಗೆ ಹುಡುಕಿದರೂ ಆಕೆಯ ಪತ್ತೆಯಾಗಲಿಲ್ಲ. ನಂತರ ಚರ್ಭುಂಜಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಅದಾದ ಮೇಲೆ ಹೊಲದಲ್ಲಿ ಅವರ ಮೃತದೇಹ ಸಿಕ್ಕಿದ್ದು, ಕಾಲಿನ ಪಾದಗಳು, ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಸಿಕ್ಕಿದೆ.

ಇದನ್ನೂ ಓದಿ: Viral Video: ಹೂವಿನ ಟೋಪಿ ಧರಿಸಿ ನಿದ್ರಿಸುತ್ತಿರುವ ಮುದ್ದಾದ ಬಾತುಕೋಳಿ; ಕ್ಯೂಟ್ ವಿಡಿಯೊ ನೋಡಿ

Published On - 9:58 am, Thu, 18 November 21