Chennai Rains: ತಮಿಳುನಾಡಿನಲ್ಲಿ ನ.21ರವರೆಗೂ ಭಯಂಕರ ಮಳೆ ಸಾಧ್ಯತೆ; ಪರಿಸ್ಥಿತಿ ನಿಭಾಯಿಸಲು ವಾರ್ ರೂಂ ನಿರ್ಮಾಣ
ಒಂದೇ ಸಮನೆ ವಿಪರೀತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈ, ಥೇನಿ, ಟುಟಿಕೊರಿನ್ ಮತ್ತು ಡಿಂಡಿಗಲ್ ಜಿಲ್ಲೆಗಳಲ್ಲಿ ಇಂದು ಎಲ್ಲ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.
ತಮಿಳುನಾಡಿನಲ್ಲಿ ಮಳೆ (Tamil Nadu Rain) ಕಡಿಮೆಯಾಗುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಭಾರತೀಯ ಹವಾಮಾನ ಇಲಾಖೆ ತಮಿಳುನಾಡಿನ ಚೆನ್ನೈ, ಕಾಂಚಿಪುರಂ, ತಿರುವಳ್ಳೂರು ಮತ್ತು ಚೆಂಗಲ್ಪಟ್ಟುಗಳಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಅದರಲ್ಲಿ ಚೆನ್ನೈನಲ್ಲಂತೂ ನವೆಂಬರ್ 21ರವರೆಗೂ ಭಾರಿ ಮಳೆ ಮುಂದುವರಿಯುವ ಎಲ್ಲ ಸಾಧ್ಯತೆಗಳೂ ಇದೆ ಎಂದು ಐಎಂಡಿ ತಿಳಿಸಿದೆ. ಇದರ ಹೊರತಾಗಿ ವಿಲ್ಲುಪುರಂ, ಕಡಲೂರ್ಗಳಲ್ಲೂ ಮಳೆ ಹೆಚ್ಚಾಗಿ ಬೀಳಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಬಂಗಾಳಕೊಲ್ಲಿಯ ಆಗ್ನೇಯ ಮತ್ತು ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಚಂಡಮಾರುತದಂಥ ಸನ್ನಿವೇಶ ಉಂಟಾಗಿದ್ದು ಗಾಳಿ ಪಶ್ಚಿಮಾಭಿಮುಖವಾಗಿ ಚಲಿಸಲಿದೆ. ಹೀಗಾಗಿ ಇಂದಿನಿಂದ ಆಂಧ್ರಪ್ರದೇಶದ ದಕ್ಷಿಣ ಮತ್ತು ತಮಿಳುನಾಡಿನ ಉತ್ತರ ಕರಾವಳಿಯಲ್ಲಿ ಇಂದಿನಿಂದ ವಿಪರೀತ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ಪುದುಚೇರಿ, ಕರೈಕಲ್ ಪ್ರದೇಶದ ಜನರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ.
ಒಂದೇ ಸಮನೆ ವಿಪರೀತ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಚೆನ್ನೈ, ಥೇನಿ, ಟುಟಿಕೊರಿನ್ ಮತ್ತು ಡಿಂಡಿಗಲ್ ಜಿಲ್ಲೆಗಳಲ್ಲಿ ಇಂದು ಎಲ್ಲ ಶಾಲಾ-ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ. ಚೆನ್ನೈನ ನಗರಾಡಳಿತವಂತೂ ವಾರ್ ರೂಂ ನಿರ್ಮಿಸಿದ್ದು, ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸಲಾಗುತ್ತಿದೆ. ಪ್ರವಾಹದ ಅಪಾಯ ಜಾಸ್ತಿ ಇರುವ ಪ್ರದೇಶಗಳಲ್ಲಿ ಕಾರ್ಪೋರೇಶನ್ ಎಂಜಿನಿಯರ್ಗಳನ್ನು ನೇಮಕ ಮಾಡಲಾಗಿದೆ. ಪ್ರತಿ ವಲಯಗಳಲ್ಲೂ ಇವರು ಇರಲಿದ್ದು, ಅಲ್ಲಿನ ಪ್ರವಾಹ ತಗ್ಗಿಸುವ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳಲಿದ್ದಾರೆ. ಇನ್ನು ನಗರಾದ್ಯಂತ ಒಟ್ಟು 668 ಮೋಟರ್ ಪಂಪ್ಗಳನ್ನು ಅಳವಡಿಸಲಾಗಿದೆ. ಅದರಲ್ಲಿ 448 ಪಾಲಿಕೆಗೆ ಸೇರಿದ್ದಾದರೆ, 199ನ್ನು ಬಾಡಿಗೆಗೆ ಪಡೆಯಲಾಗಿದೆ. ಇವು ನಗರಾದ್ಯಂತ ನಿಂತಿರುವ ನೀರುಗಳನ್ನು ತೆಗೆಯಲು ಸಹಾಯ ಮಾಡುತ್ತವೆ. ಹಾಗೇ 50 ಬೋಟ್ಗಳನ್ನೂ ಸಿದ್ಧಪಡಿಸಲಾಗಿದೆ. ರಕ್ಷಣಾ ಪಡೆಗಳು ಕಳೆದ ವಾರದಿಂದಲೂ ಕಾರ್ಯ ನಿರ್ವಹಿಸುತ್ತಿದ್ದಾರೆ.
Tamil Nadu: War room set up at Chennai Corporation where the corporation officials are monitoring red alert on heavy rain announced for today in Chennai.#ChennaiRains pic.twitter.com/M87IPWUEOd
— ANI (@ANI) November 18, 2021
Published On - 11:53 am, Thu, 18 November 21